ಸಹಕಾರ ಮಹಾಮಂಡಳ ಕಟ್ಟಡ ಉದ್ಘಾಟನೆ
ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನೂತನ ಕಟ್ಟಡದ ಉದ್ಟಾಟನಾ ಸಮಾರಂಭವನವನ್ನು ಮಾ.೨೪ ರಂರು ಬೆಳಿಗ್ಗೆ ೯.೩೦ಕ್ಕೆ ಬೆಂಗಳೂರಿನ ನಂದಿನಿ ಬಡಾವಣೆ, ರಾಜೀವ್ ಗಾಂಧಿ ನಗರದ ಜೆ.ಬಿ. ಕಾವಲ್ ಸಭಾಂಗಣದಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಸದಸ್ಯ ಸಂಘಗಳ ಸಹಕಾರಿ ಬಂಧುಗಳು ಭಾಗವಹಿಸಲು ಮಹಾಮಂಡಳದ ಸಂಸ್ಥಾಪಕ ಉಪಾಧ್ಯಕ್ಷರೂ ಹಾಗೂ ಹಾಲಿ ನಿರ್ದೇಶಕರಾದ ವಿ.ರಾಜು ಅವರು ಕೋರಿದ್ದಾರೆ.
ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸಹಕಾರ ಧ್ವಜಾರೋಹಣ,ನೂತನಕಟ್ಟಡದ ಉದ್ಟಾಟನೆ ಮತ್ತು ಶ್ರೀ ಬಿ,ಎಲ್. ಲಕ್ಕೇಗೌಡರ ಪುತ್ಥಳಿ ಲೋಕಾರ್ಪಣೆ ಮಾಡಲಿದ್ದಾರೆ. ಅಬಕಾರಿ ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷರ ಕೊಠಡಿ ಮತ್ತು ಇ-ಸ್ಟಾಂಪಿಂಗ್ ಕೇಂದ್ರ ಉದ್ಟಾಟಿಸಲಿದ್ದಾರೆ. ಬೆಂಗಳೂರು ಉತ್ತರ ಸಂಶದ ಡಿ.ವಿ.ಸದಾನಂದಗೌಡ ಸಹಕಾರ ವಾರ್ತಾ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವರೂ ಹಾಗೂ ಮಹಾ ಮಂಡಳದ ಅಧ್ಯಕ್ಷರೂ ಆದ ಜಿ.ಟಿ.ದೇವೇಗೌಡ ಸಹಕಾರರತ್ನ ಶ್ರೀ ಬಿ.ಎಲ್. ಲಕ್ಕೆಗೌಡ ಸಭಾಂಗಣ ಉದ್ಟಾಡಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್. ರವಿ ಉಪಾಧ್ಯಕ್ಷರ ಕೊಠಡಿ ಉದ್ಟಾಟಿಸಲಿದ್ದು. ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಆಧ್ಯಕ್ಷೆ ಲಲಿತ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.