ಸರ್ವರಿಂದ ಒಂದೊಂದು ನುಡಿ ಕಲಿತು ಸರ್ವಜ್ಞನಾದ…
ಕುಂಬಳೂರು: ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ಪಾತ್ರ ಬಹಳ ದೊಡ್ಡದು. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ನುಡಿಯದ ನುಡಿ ಇಲ್ಲ ಎಂಬಂತೆ ಸರ್ವರಿಂದ ಒಂದೊಂದು ನುಡಿಯನ್ನು ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಜ ಎಂದು ಸಾಹಿತಿ ಕೆ.ಸಿದ್ದಪ್ಪ ಹಾಲಿವಾಣ ಅವರು ಹೇಳಿದರು
ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮ ಪಂಚಾಯತಿಯ ಶ್ರೀ ಆಂಜನೇಯ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗಳ ಸಭಾಭವನದಲ್ಲಿ ಹೊನ್ನುಡಿ ಕನ್ನಡ ವೇದಿಕೆಯು ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ದಲ್ಲಿ ಸರ್ವಜ್ಞನ ವಚನದಲ್ಲಿ ಬದುಕಿನ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ಮಾಡಿದ ಅವರು, ಸರ್ವಜ್ಜ ಹಾವೇರಿ ಜಿಯ ಅಬ್ಲೂರು ಎಂಬ ಗ್ರಾಮದಲ್ಲಿ ಜನಿಸಿದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿದ್ದು ಅವರು ಆಬಲೂರಿನವರೇ ಆಗಿzರೆ ಎಂದರು.
೧೨ನೇ ಶತಮಾನದ ವಚನಕಾರರು ಕನ್ನಡ ಭಾಷೆಯನ್ನು ಅತ್ಯಂತ ಸರಳೀ ಕರಿಸುವ ಮೂಲಕ ಜನಸಾಮಾನ್ಯರಲ್ಲಿ ಸಾಹಿತ್ಯ ಅಭಿವೃದ್ಧಿ ಮೂಡಿಸುವ ಕಾರ್ಯ ಮಾಡಿದವರು ಎಂದರು.
ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಧಾಕರ ಅವರು ಜ್ಯೋತಿಬೆಳಗಿಸು ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಕೋಶಾಧ್ಯಕ್ಷ ಗಂಗಾದರಪ್ಪ ಅವರು ಮಾತನಾಡಿದ, ಕರ್ನಾಟಕದಲ್ಲಿ ಕನ್ನಡ ಭಾಷೆ ಪ್ರಾಭಲ್ಯ ಹೊಂದಲು ಕೇವಲ ಸಭೆ ಮಾಡಿದರೆ ಸಾಲದು, ಕನ್ನಡ ಸಾಹಿತ್ಯ ಕುರಿತು ಅರಿವು ಮೂಡಿಸುವ ಮೂಲಕ ಆಡಳಿತ ಸೇರಿದಂತೆ ಎಲ್ಲ ವ್ಯವಹಾರಗಳು ಕನ್ನಡದಲ್ಲೇ ಆಗಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನುಡಿ ಕನ್ನಡ ವೇದಿಕೆಯ ಅಧ್ಯಕ್ಷ ಎಂಪಿಎಂ ಷಣ್ಮುಖಯ್ಯ ಅವರು ೨೦೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನಾಡುವ ಪ್ರದೇಶವು ಮೈಸೂರು ರಾಜ್ಯವು ೧೯೭೩ ನವಂಬರ್ ೧ರಂದು ಕರ್ನಾಟಕ ವೆಂದು ನಾಮಕರಣವಾಗಿ ಇಂದಿಗೆ ೫೦ವರ್ಷವಾಗಿದ್ದು, ರಾಜದ್ಯಂತ ಇಡೀ ವರ್ಷ ಕನ್ನಡ ಸಂಭ್ರಮ ಆಚರಣೆ ಮಾಡುವಮೂಲಕ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಜಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೊನ್ನುಡಿ ಕನ್ನಡ ವೇದಿಕೆಯು ತಾಲೂಕಿನಾದ್ಯಂತ ಗ್ರಾಪಂ ಮಟ್ಟದ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಕನ್ನಡ ಭಾಷಾ ಶಿಕ್ಷಕರು, ಉಪನ್ಯಾಸಕರುಗಳನ್ನು ಸಂಪನ್ಮೂಲವ್ಯಕ್ತಿಗಳಾಗಿ ಕರೆದು ಶಾಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಕಲೆ ಕುರಿತಂತೆ ಉಪನ್ಯಾಸ ಮಾಡಿಸುವ ಮೂಲಕ ಸುವರ್ಣ ಸಂಭ್ರಮಾಚರಣೆ ಆಚರಿಸುತಿದ್ದೇವೆ ಎಂದರು.
ಗ್ರಾಪಂ ಅಧ್ಯಕ್ಷರಾದ ಪಾವನ ಅಧ್ಯಕ್ಷತೆ ವಹಿಸಿದರು. ಪ್ರೌಡ ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯ ಮಾರುತಿ, ಗ್ರಾಪಂ ಉಪಾಧ್ಯಕ್ಷೆ ಕವಿತಾ, ಮಾಜಿ ಅಧ್ಯಕ್ಷ ವಿಕಾಸ್, ಸದಸ್ಯರುಗಳಾದ ಉಮಾಶಂಕರ ಪಾಟೀಲ್, ಎನ್ ಎಚ್ ಕೃಷ್ಣಪ್ಪ, ಪಿ ಎಚ್ ಬಸವರಾಜಪ್ಪ, ಎಚ್ ಬಿ ಬೀರಪ್ಪ, ಟಿ ಎಚ್ ಮಹೇಶ್ವರಪ್ಪ, ಗ್ರಾಪಂ ಕಾರ್ಯದರ್ಶಿ ನಾಗರಜಪ್ಪ, ಹೊನ್ನುಡಿ ಕನ್ನಡ ವೇದಿಕೆಯ ಮಂಜಪ್ಪ, ಕುಂದೂರು ಕರಿಬಸಪ್ಪ ತಾಲೂಕು ಕನ್ನಡ ಸಾಹಿತ್ಯಪರಿಷತ್ ಮಾಜಿ ಅಧ್ಯಕ್ಷ ಎಂಎಸ್ ರೇವಣಪ್ಪ ಇನ್ನಿತರರು ಬಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಕನ್ನಡ ಶಿಕ್ಷಕ ಶ್ರೀನಿವಾಸ್ ರಿಂದ ಸ್ವಾಗತ ನಡೆಯಿತು.
ನಿವೃತ್ತ ಆರೋಗ್ಯ ಇಲಾಖೆ ನೌಕರ ಹೊನ್ನುಡಿ ಕನ್ನಡ ವೇದಿಕೆ ಸದಸ್ಯ ರಾಮಾಚಾರಿ ಕನ್ನಡ ಹಾಡುಗಳನ್ನು ಹಾಡುವಮೂಲಕ ಎಲ್ಲರನ್ನು ರಂಜಿಸಿದರು.