ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ವಾಜಪೇಯಿ ೧೦೦ನೇ ಜನ್ಮ ದಿನಾಚರಣೆ ವಿಭಿನ್ನ ರೀತಿ ಆಚರಣೆ…

Share Below Link

ಶಿವಮೊಗ್ಗ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ವರ್ಷದ ಜನ್ಮ ದಿನಾಚರಣೆಯನ್ನು ಜನ ಮಾನಸದಲ್ಲಿ ನಿಲ್ಲುವ ಹಾಗೆ ವಿಭಿನ್ನ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿ ದರು.
ಫೆ. ೧೪ ರಿಂದ ಮಾ. ೧೪ ರವರೆಗೆ ವಾಜಪೇಯಿ ಅವರ ಜನ್ಮ ಶತಮಾನೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಈ ಸಂಬಂಧ ರಾಷ್ಟ್ರಮಟ್ಟದ ಸೂಚನೆ ಪಕ್ಷದ ಕಡೆಯಿಂದ ನೀಡಿದ್ದಾರೆ. ಜನಮಾ ನಸದಲ್ಲಿ ನಿಲ್ಲುವ ಹಾಗೆ ಸಂಘಟ ನಾತ್ಮಕ ಕಾರ್ಯಕ್ರಮ ಮಾಡುವ ಹೆಬ್ಬಯಕೆ ಪಕ್ಷದ ಪ್ರಮುಖರ ದ್ದಾಗಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಕವಿ ಹೃದಯಿ, ಅತ್ಯುತ್ತಮ ಸಂಸದೀಯ ಪಟು. ಅತ್ಯುತ್ತಮ ಪ್ರಧಾನಿ. ಆಂತರಿಕ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತ ವಿಶ್ವಗುರು ಆಗಲು ವಾಜ ಪೇಯಿ ಅವರ ಶ್ರಮ ಅಪಾರ ವಾಗಿದೆ ಎಂದರು.
ವಾಜಪೇಯಿ ಅವರು ಜೀವಿತಾವಧಿಯಲ್ಲಿ ಮನೆಗೆ ಭೇಟಿ ನೀಡಿರುವುದು, ಭಾಷಣ, ಕಾರ್‍ಯ ಕರ್ತರ ಮನೆಗೆ ಭೇಟಿ ಕೊಟ್ಟಿರು ವುದು ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ, ಮಂಡಲ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲಾ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವಾಜ ಪೇಯಿ ಅವರು ಶಿವಮೊಗ್ಗ ಜಿಲ್ಲೆಗೆ ಅತಿ ಹೆಚ್ಚು ಸಲ ಬಂದಿದ್ದಾರೆ. ಈ ವೇಳೆ ಅವರ ಒಡನಾಟ ಹೊಂ ದಿರು ವ ಐವತ್ತಕ್ಕೂ ಹೆಚ್ಚು ಪ್ರಮುಖರ ಗುರುತು ಮಾಡಲಾಗಿದೆ ಎಂದರು.
ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಮೂಲಕ ಇಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವುದು ಮುಖ್ಯ ಗುರಿ ಆಗಿದೆ. ಎಲ್ಲರಲ್ಲೂ ರಾಷ್ಟ್ರಪ್ರೇಮ ಬರಲಿ ಎಂಬುದು ಕೇಂದ್ರ ಬಿಜೆಪಿ ವಾಂಛೆ. ಈಗಾಗಲೇ ವಾಜಪೇಯಿ ಅವರ ಜನ್ಮ ದಿನ ನಿಮಿತ್ತ ಸುಶಾಸನ ದಿನಾಚರಣೆ ಆಚರಿಸಲಾ ಗಿದೆ. ಶತಮಾನೋತ್ಸವ ಆಚರಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಶತಮಾನೋತ್ಸವ ಆಚರಣೆಗೆ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ, ವಿರಾಸತ್ ಸಮ್ಮೇಳನ ಆಯೋಜನೆ ಮಾಡಲಾಗು ವುದು. ಗಣ್ಯರನ್ನು ಆಹ್ವಾನಿಸಿ ವಿಚಾರಧಾರೆ ಹಂಚಿಕೊ ಳ್ಳುತ್ತಾರೆ. ವಾಜಪೇಯಿ ಅವರ ಬಗ್ಗೆ ಕೃತಿ ಬರೆದ ಲೇಖಕರಿಗೆ ಸನ್ಮಾನ ಮಾಡಲಾಗುವುದು. ಈ ಕಾರ್ಯ ವನ್ನು ಅಟಲ್ ಬಿಹಾರಿ ವಾಜ ಪೇಯಿ ಜನ್ಮ ಶತಮಾನೋತ್ಸವ ಸಮಿತಿ ಮಾಡಲಿದೆ. ಜಿಲ್ಲೆಯಲ್ಲಿ ವಾಜಪೇಯಿ ಅವರ ಜೊತೆಗಿನ ಫೋಟೋಗಳು, ಮನೆಗೆ ಭೇಟಿ ನೀಡಿರುವುದು ಇತ್ಯಾದಿ ಮಾಹಿತಿ ಇದ್ದಲ್ಲಿ ಸಮಿತಿಯ ಸುರೇಖಾ ಮುರುಳೀಧರ್, ಎಸ್. ರಮೇಶ್, ವಿನ್ಸೆಂಟ್ ರೋಡ್ರಿಗಸ್, ಚೇತನ್ ಹಾಗೂ ಚಂದ್ರಶೇಖರ್ ಅವರಲ್ಲಿ ಸಂಪರ್ಕಿಸಲು ಕೋರಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಪ್ರಮುಖ ರಾದ ಶಿವರಾಜ್, ಹರಿಕಷ್ಣ, ವಿನ್ಸೆಂಟ್ ರೋಡ್ರಿಗಸ್, ರಮೇಶ್, ಸುಮಲತಾ, ಮಂಗಳಾ ನಾಗೇಂದ್ರ, ಸುರೇಖಾ ಮುರುಳೀಧರ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *