ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆಯಿಂದು ಮಠದೊಡತಿಯೂ ಆಗಿzಳೆ…

Share Below Link

ಭದ್ರಾವತಿ: ಸನಾತನ ಭಾರತೀಯ ಧರ್ಮ ಪರಂಪರೆ ಯಲ್ಲಿ ತ್ಯಾಗ ಬಲಿದಾನಗಳಿಂದ ಮನಸ್ಸಿನಲ್ಲಿ ಉಳಿದುಕೊಂಡಿರುವ ವರಿಗೆ ಗೌರವ ಸೂಚಿಸುವ ಸಲುವಾಗಿ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ ಎಂದು ಚುಂಚಾದ್ರಿ ಮಹಿಳಾ ವೇದಿಕೆಯ ಗೌರವ ಅಧ್ಯಕ್ಷೆ ಡಾ.ಅನುರಾಧ ಪಟೇಲ್ ತಿಳಿಸಿದರು.
ಚುಂಚಾದ್ರಿ ಮಹಿಳಾ ವೇದಿಕೆಯಿಂದ ಅಪ್ಪರ್ ಹುತ್ತಾ ದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಇಂದು ಮಹಿಳೆಯರು ಯೂ ಟ್ಯೂಬ್‌ನಲ್ಲಿ ವಿಚಾರ ಮಾಹಿತಿಗಳನ್ನು ವೀಕ್ಷಿಸುವುದಕ್ಕಿಂತ ಮಹಿಳಾ ಸಾಧಕಿಯರ ಇತಿಹಾಸವನ್ನು ಓದಬೇಕು. ಏಕ ಕಾಲಕ್ಕೆ ಎ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಮಹಿಳೆ ಮಾತ್ರ ಹೊಂದಿzಳೆ. ಪರುಷರಷ್ಟೆ ಸರಿ ಸಮಾನವಾಗಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ತಾನು ಎ ರಂಗದಲ್ಲೂ ಸೈ ಎನಿಸಿಕೊಂಡಿ zಳೆ ಎಂದರು.
ಆದರೆ ಇಂದು ಕೆಲ ಮಹಿಳೆ ಯರಿಗೆ ಅಧಿಕಾರ, ಅಂತಸ್ತು, ಹಣ ಬಂದರೆ ಅಕೆಯ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತದೆ. ತಲೆ ತಿರುಗಿದ ಹಾಗೆ ನಡೆದು ಕೊಳ್ಳುತ್ತಾಳೆ. ಸ್ವ ಪ್ರತಿಷ್ಟೆ ಅಹಂ ಬೆಳೆಸಿಕೊಳ್ಳುತ್ತಾಳೆ. ಪರಸ್ಪರರಲ್ಲಿ ಗೌರವ ನೀಡದೆ ಅಸೂಯೆ ಇರ್ಷೆ ಯಿಂದ ನೋಡುತ್ತಾಳೆ ಇದು ಸ್ತ್ರೀ ಕುಲದ ದುರಂತದ ಸಂಗತಿ ಎಂದು ವಿಷಾದಿಸಿದರು.
ಬಾಗಲಕೋಟೆ ಜಿಯಲ್ಲಿನ ವೀರಶೈವ ಮಠಕ್ಕೆ ಮಹಿಳೆಯೊರ್ವರನ್ನು ನೇಮಿಸಿದ್ದನ್ನು ಉದಾಹರಿಸಿ ಮನೆಯೊಡತಿ ಆಗಿರಬೇಕಾದ ಮಹಿಳೆಯು ಮಠದೊಡತಿಯೂ ಆಗಿzಳೆ ಎಂದರು. ಸ್ವಾತಂತ್ರ್ಯ ಪೂರ್ವದ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವ ಸುಂದರಿ ಪಟ್ಟ ಧರಿಸಿದ್ದರು. ಇಂದು ಬೆಳಗಿನ ಜವ ಕಾಫಿ ಸೇವಿಸುವ ಪೇಯವನ್ನು ಕಂಡು ಹಿಡಿದಿದ್ದು, ಕಾಫಿ ಸಾಕಮ್ಮ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಅಕೆ ಕೊಡಗಿನ ಶ್ರೀಮಂತ ವೀರಶೈವ ಮನೆತನದ ಸಾಹುಕಾರ್ ದೊಡ್ಡ ಬಸಪ್ಪ ಶೆಟ್ಟಿ ಎಂಬುವವರನ್ನು ಮದುವೆಯಾಗಿ ಕೆಲ ವಷಗಳ ವಿಧವೆಯಾಗಿದ್ದು, ಕಾಫಿ ವ್ಯವಹಾರ ಮಾಡಿ ಪ್ರಸಿದ್ದಿ ಯಾಗಿದ್ದು, ಬೆಂಗಳೂರಿನಲ್ಲಿ ಅವರ ಹೆಸರಿನ ಉದ್ಯಾನವನ ಇರುವುದು, ಅಂದಿನ ಮೈಸೂರು ಮಹಾರಾಜರು ಇವರನ್ನು ಮೈಸೂರು ಪ್ರಜಪ್ರತಿನಿಧಿ ಪರಿಷತ್‌ಗೆ ನೇಮಕ ಮಾಡಿದ್ದು, ಬ್ರೀಟೀಷರಿಂದ ಬಿರುದು ಬಾವಲಿಗಳನ್ನು ಪಡೆದು ಕೊಂಡ ಘಟನೆಗಳನ್ನು ಒಳಗೊಂಡ ಮಹಿಳೆಯರ ಇತಿಹಾಸವನ್ನು ವಿವರಿಸಿದರು.
ಇಷ್ಟೆ ಸಾಧನೆ ಮಾಡಿರುವ ಮಹಿಳೆ ಪರಸ್ಪರರಲ್ಲಿ ದೋಷಗಳನ್ನು ಕಂಡು ಹಿಡಿಯುವುದು, ಕಾಲೆಳೆಯುವಂತಹ ಮನಸ್ಥಿತಿ ಯಿಂದ ಹೊರಬರಬೇಕು. ಈ ದೋಷ ಹೋಗಬೇಕು ಎಂದರೆ ಅವಳ ನೋಡುವ ದೃಷ್ಟಿ ಬದಲಾಗ ಬೇಕು. ಮಹಿಳಾ ಸ್ವಾತಂತ್ರ್ಯ ಎಂಬುದು ಮಹಿಳೆಯರಿಗೆ ಸ್ವೇಚ್ಚಾರವಾಗಬಾರದು. ರಕ್ಷಣೆ ಎಂಬುದು ಅಕೆಯ ಬಂಢತನಕ್ಕೆ ರಕ್ಷಣಾ ಕವಚದಂತಹ ವಾತಾವರಣ ನಿರ್ಮಾಣ ಆಗಬಾರದು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜಿಪಂ ಮಾಜಿ ಸದಸ್ಯ ಎಸ್.ಕುಮಾರ್ ಮಾತನಾಡಿ ಮಹಿಳೆ ಎ ರಂಗಗಳಲ್ಲೂ ಪ್ರಾತಿನಿಧ್ಯವನ್ನು ಸಾಧಿಸಿದ ಹಾಗೆ ರಾಜಕೀಯ ರಂಗದಲ್ಲೂ ಸಾಧಿಸಿzಳೆ. ಎ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯವನ್ನು ಪ್ರಾಮುಖ್ಯತೆ ಯನ್ನು ಗಳಿಸಿದ ಹಾಗೆ ಅದಕ್ಕೆ ತಕ್ಕಂತೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿ zಳೆ. ಈ ಕಾರ್ಯದಲ್ಲಿ ಪ್ರಾಮಾಣಿಕತೆ ಇದ್ದರೆ ಎ ಕಡೆ ಗೌರವಾಧಾರಗಳು ತಾನಾಗೆ ಒಲಿದು ಬರುತ್ತದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಹಾಗು ಚುಂಚಾದ್ರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಹೆಣ್ಣು ಸಾಧನೆ ಮಾಡಲು ಸ್ಪೂರ್ತಿದಾಯಕ ಸಂಗತಿ ಎಂದರೆ ಹಣ್ಣೆ ಮುಖ್ಯ ಕಾರಣ. ಅದಕ್ಕೆ ಅವಳಿಗೆ ಸಲಹೆ, ಸಹಕಾರ, ಧೈರ್ಯ ತುಂಬಿದಾಗ ಏನೂ ಬೇಕಾದರೂ ಸಾಧಿಸಲು ಸಹಾಯವಾಗುತ್ತದೆ ಎಂದರು.
ನಗರದ ಕೆಎಸ್‌ಆರ್‌ಟಿಸಿ ಘಟಕದ ಹಿರಿಯ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಹಾಗು ಸಾಗರದ ಸಮಾಜ ಸೇವಕಿ ಮತ್ತು ಮಹಿಳಾ ಖಾದಿ ಉದ್ಯಮಿ ಕೆ.ಬಿ. ಭಾರತಿ ಅರವರನ್ನು ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಜನಪದ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾ ಯಿತು. ನಂತರ ಆಕರ್ಷಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.
ಮಿಸ್ ಚುಂಚಾದ್ರಿ ಮಹಿಳೆ ಯಾಗಿ ಪ್ರೇಮ ಮಂಜುನಾಥ್, ಅದೃಷ್ಟದ ಮಹಿಳೆಯಾಗಿ ಆಯ್ಕೆಯಾದ ಪದ್ಮ ಮಂಜುನಾಥ್ ರವರಿಗೆ ಬೆಳ್ಳಿ ದೀಪವನ್ನು ಉಡುಗೊರೆಯಾಗಿ ನೀಡಿಲಾಯಿತು. ಲತಾ ಪ್ರಭಾಕರ್ ಸ್ವಾಗತಿಸಿದರು. ಪ್ರತಿಭಾ, ಮಂಗಳ ಗೌರಿ ಅಥಿತಿಗಳ ಪರಿಚಯ ಮಾಡಿದರು. ಸುಮತಿ ಕಾರಂತ್ ಕಾಯಕ್ರಮ ನಿರೂಪಿಸಿದರು. ಶೀಲಾ ರವಿ ವಂದನಾರ್ಪಣೆ ಮಾಡಿದರು.