ಜಿಲ್ಲಾ ಸುದ್ದಿತಾಜಾ ಸುದ್ದಿ

ಭೀಕರ ಬರಗಾಲದಲ್ಲೂ ಭಕ್ತರ ಭಕ್ತಿಗೆ ಬರಗಾಲವಿಲ್ಲ…!

Share Below Link

ಹೊನ್ನಾಳಿ : ತಾಲ್ಲೂಕಿನ ಸುಂಕದಕಟ್ಟೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀ ನರಸಿಂಸ್ವಾಮಿ ಮತ್ತು ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ೪೬,೦೭,೭೬೫ ಹಣ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.
ಸುಂಕದಕಟ್ಟೆಯ ದೇವಸ್ಥಾನದ ಸಮುದಾಯ ಭವನದಲ್ಲಿ ಹುಂಡಿ ಹಣ ಎಣಿಕೆಯನ್ನು ವೀಕ್ಷಿಸಿ ಮಾತನಾಡಿದ ಅವರು, ಸುಂಕದಕಟ್ಟೆಯ ರಥೋತ್ಸವದ ನಂತರ ಮೊದಲನೇ ಬಾರಿಗೆ ಹಣ ಎಣಿಕೆ ಮಾಡುತ್ತಿದ್ದು ಭೀಕರ ಬರಗಾಲದಲ್ಲೂ ಹೆಚ್ಚಿನ ಹಣವನ್ನು ಭಕ್ತರು ದೇವರ ಹುಂಡಿಗೆ ಸಮರ್ಪಿಸಿ ತಮ್ಮ ಭಕ್ತಿಯನ್ನು ಮೆರೆದಿzರೆ ಎಂದರು.
ದೇವಸ್ಥಾನದ ಸಮಿತಿಯ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ ೨೦೨೩ರ ಅಕ್ಟೋಬರ್ ತಿಂಗಳಲ್ಲಿ ಹಣ ಎಣಿಕೆ ಸಂದರ್ಭದಲ್ಲಿ ೪೯,೭೦,೦೯೫ ಹಣ ಸಂಗ್ರಹ ವಾಗಿದ್ದು ಈ ಹಣವನ್ನು ಕೆನರಾ ಬ್ಯಾಂಕಿನಲ್ಲಿ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿಯೇ ಭೀಕರ ಬರಗಾಲವಿದ್ದರೂ ಭಕ್ತರ ಭಕ್ತಿಗೆ ಬರಗಾಲವಿಲ್ಲ ಎಂಬುದಕ್ಕೆ ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರವಾಗಿರುವುದೇ ಸಾಕ್ಷಿಯೆಂದು ರಾಜಸ್ವ ನಿರೀಕ್ಷಕ ಕುಂದೂರು ರಮೇಶ್ ಹರ್ಷ ವ್ಯಕ್ತಪಡಿಸಿದರು.
ಹುಂಡಿಯ ಹಣ ಎಣಿಕೆ ಸಂದರ್ಭದಲ್ಲಿ ೫೦೦ ರೂ. ಮುಖಬೆಲೆಯ ಚಲಾವಣೆಯ ಲ್ಲಿಲ್ಲದ ಹಳೆಯ ನೋಟೊಂದು ಕಂಡುಬಂತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಜುಸ್ವಾಮಿ, ಸಮಿತಿಯ ಸದಸ್ಯರಾದ ಎಸ್.ಕೆ. ಕರಿಯಪ್ಪ, ಎಸ್.ಎಚ್. ಚಂದ್ರಮ್ಮ, ಡಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನಕುಮಾರ್, ಅಣ್ಣಪ್ಪ, ಕೆನರಾ ಬ್ಯಾಂಕ್ ಸಿಬ್ಬಂದಿ ರಾಮಣ್ಣ, ಸತ್ಯನಾರಾಯಣ್, ಮನೋಜ್, ಸಂತೋಷ್, ರಾಜಸ್ವ ನಿರೀಕ್ಷಕರಾದ ಜಯಪ್ರಕಾಶ್, ದಿನೇಶ್ ಬಾಬು, ಗ್ರಾಮ ಆಡಳಿತಾಧಿಕಾರಿಗಳಾದ ದೊಡ್ಡೇಶ್, ಬಸವರಾಜ್, ಸಂತೋಷ್, ಅರ್ಜುನ್, ವೀರೇಶ್, ಚಂದ್ರಕಲಾ, ಅನಿತಾ, ಶಿಲ್ಪ ಮತ್ತು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif