ತಾಜಾ ಸುದ್ದಿ

ಭೀಕರ ಅಪಘಾತ: ಸ್ಥಳದಲ್ಲೇ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಬ್ಬರ ಧಾರುಣ ಸಾವು…

Share Below Link

ಶಿವಮೊಗ್ಗ : ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ಬಳಿ, ಇಂದು ಮುಂಜಾನೆ ನಂದಿನಿ ಹಾಲು ಸಾಗಾಣೆ ಮಾಡುವ ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ನಲ್ಲಿದ್ದ ಈರ್ವ  ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಕೊನೆಯುಸಿರೆಳೆದ ದಾರುಣ ಘಟನೆ ನಡೆದಿದೆ.
ಉಡುಪಿ ಮೂಲದ ಆದಿತ್ಯ (22) ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ ಸಂದೀಪ್ (22) ಮೃತಪಟ್ಟ ದುರ್ದೈವಿಗಳು. ಇವರು ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಆ.20ರ ಇಂದು ಬೆಳಿಗ್ಗೆ 5. 15ರ ಸುಮಾರಿಗೆ ಈ ಅವಘಟ ಸಂಭವಿಸಿದ್ದು, ಅಪಘಾತದ ವೇಳೆ ವಾಹನದ ಹಿಂಬದಿಯಿಂದ ಹಾಲಿನ ಪ್ಯಾಕೆಟ್ಗಳಿದ್ದ ಕ್ರೇಟ್ ಗಳು ನೆಲಕ್ಕೆ ಬಿದ್ದು ರಸ್ತೆ ಮೇಲೆಲ್ಲಾ ಹಾಲು ಚೆಲ್ಲಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.