ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮಾಜದ ವತಿಯಿಂದ ಮನ ಮೆರವಣಿಗೆ ಶ್ರzಂಜಲಿ…
ಹುಣಸಗಿ: ಹುಬ್ಬಳ್ಳಿಯಲ್ಲಿ ನಡೆದ ಸಹೊದರಿ ಕು.ನೇಹಾ ಹಿರೇಮಠ ಅವರನ್ನು ಹಾಡುಹಗಲೆ ಬರ್ಬರವಾಗಿ ಹತ್ಯಮಾಡಿದ ಆರೋಪಿಗೆ ಕೂಡಲೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಈ ಘಟನೆಗೂ ಮುಂಚಿತವಾಗಿ ಹತ್ಯೆಗೆ ಒಳಗಾದಂತ ನಾಲ್ಕು ಹೆಣ್ಣು ಮಕ್ಕಳಿಗೆ ಕೂಡಾ ಭಾವಪೂರ್ಣ ಶ್ರzಂಜಲಿ ಅರ್ಪಿಸುವ ಮೂಲಕ ಹೆಣ್ಣು ಮಕ್ಕಳನ್ನು ಹೀನಾಯವಾಗಿ ಹತ್ಯ ಮಾಡಿದ ಆರೋಪಿಗಳಿಗೆ ನ್ಯಾಯಾಲಯವು ತಕ್ಷಣವೇ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮುಸ್ಲಿಂ ಸಮಾಜದ ವತಿಯಿಂದ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ಮನ ಪಾದಯಾತ್ರೆ ಮಾಡಲಾಯಿತು.
ಈ ವೇಳೆ ಅಬ್ದುಲ್ ಸುಭಾನ ಡೆಕ್ಕನ್, ಬಾಬುಮಿಯಾ ಹವಾ ಲ್ದಾರ, ಹನಿಫ ಎಸ್ ಬೆಣ್ಣೂರ ಮಿಜ ನಾದೀರ್ ಬೇಗ, ಕಾಶಿ ಮಸಾಬ ಟೊನ್ನೂರ, ನಬಿಲಾಲ ಯಾತನೂರ, ಡಾ!ಯೂಸುಫ್ ಡೆಕ್ಕನ್, ರಸೂಲ್ ಸಾಬ ಬೆಣ್ಣೂರ, ಹುಸೇನಸಾಬ ಕಕ್ಕಲದೊಡ್ಡಿ, ರಾಜೇಸಾಬ, ಹಸನ ಪಟೇಲ, ರಾಜು ಅವರಾದಿ, ಲಿಯಾಖತಾಲಿ ಬೆಣ್ಣೂರ, ಮಹಿಬೂಬ ಚೌದ್ರಿ, ರಮಜನಸಾಬ ಖುರೇಶಿ ಹಾಗೂ ಸಮಾಜದ ಇನ್ನಿತರರು ಭಾಗವಹಿಸಿದ್ದರು.