ಜಿಲ್ಲಾ ಸುದ್ದಿತಾಜಾ ಸುದ್ದಿ

ನಿಮ್ಮ ಜ್ಞಾನ – ಅನುಭವ ಕಿರಿಯರಿಗೆ ಮಾರ್ಗದರ್ಶನ ಮಾಡಿ: ಕೆ.ಎಸ್. ಈಶ್ವರಪ್ಪ

Share Below Link

ಶಿವಮೆಗ್ಗ: ನಿವೃತ್ತಿ ನೌಕರರು ಪದ ಬಳಕೆ ಸರಿಯಿಲ್ಲ. ನಿವೃತ್ತಿ ಎಂಬುವುದು ಇಲ್ಲವೇ ಇಲ್ಲ. ನಿಮ್ಮ ಜನ ಮತ್ತು ಅನುಭವವನ್ನು ಕಿರಿಯರಿಗೆ ಮಾರ್ಗದರ್ಶನ ಮಾಡು ವುದು ಅತಿ ಅವಶ್ಯವೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಆವರಣದಲ್ಲಿ ೨೦೨೨-೨೩ನೇ ಸಾಲಿನ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದು ೭೫ ವರ್ಷ ಗಳಾದರೂ ಅನೇಕ ಮೂಲಭೂತ ಸೌಲಭ್ಯಗಳಿಂದ ಜನ ವಂಚಿತರಾಗಿ ದ್ದಾರೆ. ಆಯಾ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆ ಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದಾಗಿ ರುತ್ತದೆ. ಅವರ ಅಪಾರ ಅನುಭವ ಮತ್ತು ಮಾರ್ಗದರ್ಶನ ಪಡೆದೆ ನಾನು ನನ್ನ ಅವಧಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದರು.
ನಿಮ್ಮ ಅನೇಕ ಬೇಡಿಕೆಗಳು ಈಡೇರದೇ ಬಾಕಿ ಉಳಿದಿದೆ. ನಿವೃತ್ತಿ ತಕ್ಷಣ ನಿಮ್ಮನ್ನು ಮರೆತೇ ಬಿಟ್ಟಿದ್ದಾರೆ ಎಂಬ ಭಾವನೆ ಬೇಡ. ನಾವು ಸದಾ ನಿಮ್ಮೊಂದಿಗಿದ್ದೇವೆ. ನಿಮ್ಮ ಮಾರ್ಗ ದರ್ಶನ ಅತಿ ಅಗತ್ಯ ಎಂದರು.
ಯುವ ಮುಖಂಡ ಕೆ.ಈ. ಕಾಂತೇಶ್ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರು ನಮಗೆ ಕುಟುಂಬದ ರೀತಿಯಲ್ಲಿ ಆಶೀರ್ವಾದ ಮಾಡಿ ದ್ದಾರೆ. ನಿವೃತ್ತ ನೌಕರರ ಮುಕ್ತಿ ನಿಧಿಗೆ ನಮ್ಮ ಕುಟುಂಬದಿಂದ ೫೦ ಸಾವಿರ ರೂ. ದೇಣಿಗೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಡಿ.ಎಂ. ಚಂದ್ರಶೇಖರ್, ಕಾರ್ಯದರ್ಶಿ ಷಣ್ಮುಖಪ್ಪ, ಹನುಮಂತಪ್ಪ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.