ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜ.5: ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ವಿಶೇಷ ಉಪನ್ಯಾಸ…

Share Below Link

ಶಿವಮೊಗ್ಗ: ಅಯೋಧ್ಯೆಯಲ್ಲಿ ಜ. ೨೨ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಿರುವ ಹಿನ್ನಲೆಯಲ್ಲಿ ನಗರದ ಎನ್.ಡಿ.ವಿ. ಹಾಸ್ಟೆಲ್ ಆವರಣದಲ್ಲಿ ಜ. ೫ ರಂದು ಸಂಜೆ ೫.೩೦ಕ್ಕೆ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶತಕೋಟಿ ಶ್ರೀರಾಮ ತಾರಕ ನಾಮ ಜಪ ಯಜ್ಞ ಸಮಿತಿ ಅಧ್ಯಕ್ಷ ಆರ್.ಕೆ. ಸಿದ್ಧರಾಮಣ್ಣ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಲವು ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಜ. ೨೨ ರಂದು ಶ್ರೀರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸ ನೀಡುವರು ಎಂದರು.
ಶತಕೋಟಿ ಶ್ರೀರಾಮ ತಾರಕ ನಾಮ ಜಪ ಯಜ್ಞ ಸಮಿತಿ ಶಿವಮೊಗ್ಗದ ಎಲ್ಲಾ ಪ್ರೌಢಶಾಲೆ ಹಾಗೂ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಶ್ರೀರಾಮಾಯಣ ಕುರಿತಂತೆ ರಸಪ್ರಶ್ನೆ, ಭಕ್ತಿ ಗೀತೆ, ಚಿತ್ರ ಗೀತೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಜ. ೭ ರಂದು ನಗರದ ವಿಕಾಸ ಶಾಲೆ ಯಲ್ಲಿ ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಂಡಿದೆ. ಈಗಾಗಲೇ ಅನೇಕ ಶಾಲೆಗಳ ನೂರಾರು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಿತಿ ಈಗಾಗಲೇ ತಿಳಿಸಿದಂತೆ ಪ್ರತಿದಿನ ಕನಿಷ್ಟ ೧೦೮ ಬಾರಿ ಶ್ರೀರಾಮ ಜಯರಾಮ ಜಯಜಯ ರಾಮ ಎಂಬ ರಾಮತಾರಕ ಮಹಾಮಂತ್ರ ಜಪಿಸಬೇಕು. ಈ ಜಪವನ್ನು ಜ. ೨೨ರವರೆಗೆ ಜಪಿಸಿ ಬೇಕು. ಹಾಗೂ ಜಪಿಸುವವರಿಗೆ ಕರಪತ್ರ ನೀಡಲಾಗಿತ್ತು. ಅವರು ಎಷ್ಟು ಬಾರಿ ಜಪಿಸಿದ್ದಾರೆ ಎಂದು ಕರಪತ್ರವನ್ನು ಜ. ೨೨ ರ ನಂತರ ಸಮಿತಿಗೆ ತಲುಪಿಸಬೇಕು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ನಟರಾಜ್ ಭಾಗವತ್, ಸುಬ್ರಹ್ಮಣ್ಯ ಭಟ್, ಎಂ. ವಾಸುದೇವ್, ಶಬರೀಶ್ ಕಣ್ಣನ್, ವಿನಯ್, ಸುರೇಶ್ ಪ್ರಭು, ಸುಧೀಂದ್ರ ಕಟ್ಟೆ, ಶಾರದಾ, ಮೆದಲಾದವರಿದ್ದರು.