ಜೂ.೨೭:ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ
ಶಿವಮೊಗ್ಗ: ಜಿ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗೆ ಸಂಘಟ ನೆಯ ಮುಖಂಡರು, ಜಿಡ ಳಿತ, ಮಹಾನಗರ ಪಾಲಿಕೆ, ಜಿ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಜೂ.೨೭ರಂದು ಬೆ.೧೧ ಗಂಟೆಗೆ ಕುವೆಂಪುರಂಗ ಮಂದಿರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುವುದು ಎಂದು ಜಿ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಟಿ. ಆದಿಮೂರ್ತಿ ಹೇಳಿ ದರು.
ಅವರು ಇಂದು ನಗರದ ಹೋಟೆಲ್ ಮಥುರಾ ಪ್ಯಾರಾ ಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರು ಕಟ್ಟಿದವರು. ಒಂದು ನಗರ ಹೇಗಿ ರಬೇಕೆಂದು ತೋರಿಸಿಕೊಟ್ಟವರು. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸರ್ಕಾರದ ನೆರವಿನಲ್ಲಿ ಆಚರಿಸಲಾಗುತ್ತಿದೆ. ಕಾರ್ಯಕ್ರಮ ಉದ್ಘಾಟನೆಯನ್ನು ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೆರವೇರಿಸಲಿzರೆ ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್ ಚನ್ನಬಸಪ್ಪ ವಹಿ ಸಲಿದ್ದು, ಮುಖ್ಯ ಅತಿಥಿಗ ಳಾಗಿ ಬಿ.ವೈ. ರಾಘವೇಂದ್ರ. ಶಾಸಕರಾದ ಆರಗ eನೇಂದ್ರ, ಬಿ.ಕೆ. ಸಂಗ ಮೇಶ್, ಗೋಪಾಲಕೃಷ್ಣ ಬೇಳೂ ರು, ಶಾರದಾ ಪೂರ್‍ಯಾ ನಾಯ್ಕ, ಬಿ.ವೈ. ವಿಜಯೇಂದ್ರ, ಎಸ್. ಎಲ್. ಬೋಜೇಗೌಡ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಮೇಯರ್ ಎಸ್. ಶಿವ ಕುಮಾರ್ ವಹಿಸಲಿzರೆ ಎಂದರು.
ಸಮಾಜದ ಮುಖಂಡ ಹಾಗೂ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಒಂದು ನಗರವನ್ನು ಹೇಗೆ ನಿರ್ವಹಿ ಸಬೇಕು ಎಂಬ ಮಾರ್ಗದರ್ಶನ ವನ್ನು ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಾಣ ಮಾಡುವ ಮೂಲಕ ತೋರಿಸಿ ಕೊಟ್ಟಿzರೆ. ಜಯಂತಿಗಳು ಕೇವಲಜತಿಗೆ ಸೀಮಿತವಾಗಬಾರದು ಎ ಸಮಾಜದವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಬೇಕು. ಕಾರ್ಯ ಕ್ರಮದ ಮುಖ್ಯ ಭಾಗವಾಗಿ ವಿಶ್ರಾಂತ ಪ್ರಾಂಶುಪಾಲ ಡಾ. ಎಸ್. ತಿಮ್ಮಯ್ಯ ನಾಯ್ಡು ಉಪ ನ್ಯಾಸ ನೀಡಲಿzರೆ ಎಂದರು.
ಸಮಾಜದ ಯುವ ಮುಖ ಂಡ ಚೇತನ್ ಮಾತನಾಡಿ, ಸಭಾ ಕಆರ್ಯಕ್ರಮಕ್ಕೂ ಮೊದಲು ಒಕ್ಕಲಿಗ ಸಂಘದ ಆವರಣದ ಲ್ಲಿರುವ ನಾಡಪ್ರಭು ಶ್ರೀ ಕೆಂಪೇಗೌಡ ಅವರಿಗೆ ಬೆ.೯-೩೦ಕ್ಕೆ ಯುವ ವೇದಿಕೆ ವತಿಯಿಂದ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಂಬ್ಳೇಬೈಲು ಮೋಹನ್, ಪ್ರಫಲ್ಲಚಂದ್ರ, ನಾಗರಾಜ್, ಟಿ.ಪಿ ನಾಗರಾಜ್, ಹರ್ಷಿತ್ ಇದ್ದರು.