ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜೂ.೧೮ : ಯಕ್ಷಗಾನ ಪ್ರದರ್ಶನ

Share Below Link

ಸಾಗರ: ಯಕ್ಷಗಾನ ಸಂಘಟಕ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಜೂ.೧೮ ರಂದು ಮಧ್ಯಾಹ್ನ ೩.೩೦ ರಿಂದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಯಕ್ಷ ಮುಂಗಾರು ತೆಂಕು-ಬಡಗು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಮಾಯಾ ಶೂರ್ಪನಖಿ- ವೃಷಸೇನ- ಕರ್ಣಾರ್ಜುನ ಯಕ್ಷಗಾನ ಪ್ರದರ್ಶನ ನಡೆಯ ಲಿದ್ದು, ಬಡಗಿನ ಹಿಮ್ಮೇಳದಲ್ಲಿ ಜನ್ಸಾಲೆ, ಬ್ರಹ್ಮೂರು, ಸುನೀಲ್, ಪ್ರಜ್ವಲ್ ಇzರೆ. ತೆಂಕಿನ ಹಿಮ್ಮೇಳ ದಲ್ಲಿ ಚಿನ್ಮಯ ಭಟ್, ಶ್ರೀಧರ ವಿಟ್ಲ, ಮಯೂರ್, ರಾಜೇಂದ್ರ ಇzರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಶ್ರೀಪಾದ ಭಟ್ ಥಂಡಿಮನೆ, ಗಣಪತಿ ಹೆಗಡೆ ತೋಟಿಮನೆ, ಸುಜಯೀಂದ್ರ ಹಂದೆ, ಸಂಜಯ, ಹೆನ್ನಾಬೈಲ್, ಪ್ರಣವ ಭಟ್, ಪಿ.ವಿ.ಹೆಗಡೆ ಹಾಗೂ ಪೆರ್ಮುದೆ, ದೀಪಕ್ ಕುಂಕಿ, ಪಡ್ರೆ, ಉಪ್ಪೂರು, ಪ್ರಜ್ವಲ್ ಕುಮಾರ್ ಇzರೆ. ಪ್ರವೇಶ ದರ ನಿಗದಿಗೊಳಿಸಿದ್ದು, ಕಲಾಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿzರೆ.
ಯಕ್ಷ ಮುಂಗಾರು ಪ್ರಶಸ್ತಿ-೨೦೧೨೩ ಪ್ರದಾನ :
ಇದೇ ವೇದಿಕೆಯಲ್ಲಿ ಅಂದು ಸಂಜೆ ೬ ರಿಂದ ಎಚ್.ಡಿ. ಕೃಷ್ಣಮೂರ್ತಿ ಮೆಮೋರಿಯಲ್ ಟ್ರಸ್ಟ್ ಹಂಸಗಾರು ವತಿಯಿಂದ ಕಲಾವಿದ ಪಿ.ವಿ.ಹೆಗಡೆಯವರಿಗೆ `ಯಕ್ಷ ಮುಂಗಾರು ಪ್ರಶಸ್ತಿ-೨೦೨೩ ನೀಡಿ ಗೌರವಿಸಲಾಗುವುದು. ಈ ಸನ್ಮಾನ ಸಮಾರಂಭದ ಅಧ್ಯಕ್ಷತೆ ಯನ್ನು ಹಿರಿಯ ಪತ್ರಕರ್ತ ಎಚ್.ವಿ. ರಾಮಚಂದ್ರರಾವ್ ವಹಿಸುವರು. ಮಹಾಲಕ್ಷ್ಮೀ ರಾಮಚಂದ್ರರಾವ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ಎಚ್.ಡಿ. ಕೃಷ್ಣಮೂರ್ತಿ ಕುಟುಂಬದವರು ಉಪಸ್ಥಿತರಿರುವರು.