ಜಿಲ್ಲಾ ಸುದ್ದಿತಾಜಾ ಸುದ್ದಿ

ಜು.೧೫: ಲಯನ್ಸ್ ಕ್ಲಬ್‌ನಿಂದ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ವಿತರಣೆ: ಸಾನು

Share Below Link

ಶಿಕಾರಿಪುರ: ಇಲ್ಲಿನ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ ಕ್ಲಬ್ ವತಿಯಿಂದ ಡಯಾಲಸಿಸ್ ಯಂತ್ರವನ್ನು ವಿತರಿಸಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಸಾನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಜಿಲ್ಲೆ ೩೧೭-ಸಿ ಯಲ್ಲಿನ ೧೧೮ ಘಟಕದಲ್ಲಿ ಶಿಕಾರಿಪುರ ಘಟಕ ಸೇವಾ ಕಾರ್ಯದ ಮೂಲಕ ಪ್ರಥಮ ಸ್ಥಾನದಲ್ಲಿದ್ದು ತಾಲೂಕಿನ ಸಮಸ್ತ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ ಅವರು, ಕಳೆದ ವರ್ಷ ೧೧ ಬಾರಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಿ ದಾಖಲೆಯ ಸಾವಿರಕ್ಕೂ ಅಧಿಕ ದೃಷ್ಟಿ ದೋಷವುಳ್ಳವರಿಗೆ ದೃಷ್ಟಿ ಭಾಗ್ಯವನ್ನು ಕಲ್ಪಿಸಿಕೊಡಲಾಗಿದ್ದು ೨೦೧೮ ರಿಂದ ಪ್ರತಿ ಸೋಮವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಎಲ್ಲ ರೋಗಿಗಳ ಉಚಿತವಾಗಿ ಅನ್ನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಇದೀಗ ೧೮೭ ಬಾರಿ ಅನ್ನ ದಾಸೋಹ ವಿತರಿಸಲಾಗಿದೆ ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ಶಿಕಾರಿಪುರದ ಲಯನ್ಸ್ ಕ್ಲಬ್ ೫೦ ಸಾರ್ಥಕ ವರ್ಷವನ್ನು ಪೂರ್ಣ ಗೊಳಿಸಿದ್ದು ಈ ದಿಸೆಯಲ್ಲಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷೀಕರಿಸಲು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅತ್ಯಗತ್ಯ ವಾದ ಅಂದಾಜು ರೂ.೮ ಲಕ್ಷ ಮೌಲ್ಯದ ಡಯಾಲಸಿಸ್ ಯಂತ್ರ ವನ್ನು ಜು.೧೫ರ ಶನಿವಾರ ಹಸ್ತಾಂತರಿಸಲಾಗುತ್ತದೆ ಅಂತರಾಷ್ಟ್ರೀಯ ಲಯನ್ಸ ಕ್ಲಬ್ ವತಿಯಿಂದ ಡಿ.೩೧೭-ಸಿ ಜಿಲ್ಲೆಯ ಚಳ್ಳಕೆರೆ, ಸೊರಬ,ಶಿಕಾರಿಪುರಕ್ಕೆ ಮಾತ್ರ ಮಂಜೂರಾದ ಡಯಾಲ ಸಿಸ್ ಯಂತ್ರ ಹಸಾತಿಂತರ ಕಾರ್ಯಕ್ರಮದಲ್ಲಿ ಡಿ.೩೧೭ ಸಿ ಜಿಲ್ಲಾ ಗವರ್ನರ್ ಲಯನ್ ಎಂ.ಕೆ ಭಟ್,ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಲಯನ್ಸ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರರನ್ನು ಗೌರವಿಸಲಾಗು ವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಪಾಂಡುರಂಗ ರಾಯ್ಕರ್, ಮೋಹನ್ ಸಾನು, ಕಾರ್ಯದರ್ಶಿ ಬಾಲಚಂದ್ರ ಹೊನ್ನಶೆಟ್ಟರ್,ದರ್ಶನ್,ಡಿ.ಕೆ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.