ತಾಜಾ ಸುದ್ದಿ

ಜಿಲ್ಲೆಯಾದ್ಯಂತ ನಕಲಿ ಚರ್ಮವೈದ್ಯರ ಹಾವಳಿ…

Share Below Link

ಶಿವಮೊಗ್ಗ : ನಕಲಿ ಚರ್ಮರೋಗ ವೈದ್ಯರ ಬಗ್ಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸಹ್ಯಾದ್ರಿ ಡರ್ಮ ಅಸೋಸಿಯೇ ಷನ್ನಿನ ಕಾರ್ಯದರ್ಶಿ ಹಾಗೂ ಚರ್ಮರೋಗ ತಜ್ಞ ಡಾ|| ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚರ್ಮರೋಗಕ್ಕೆ ಸಂಬಂಧಪಟ್ಟಂತೆ ನಕಲಿ ವ್ಯಕ್ತಿಗಳು ತಾವು ವೈದ್ಯರು ಎಂದು ಹೇಳಿಕೊಂಡು ಸಾರ್ವಜನಿಕರು ಚಿಕಿತ್ಸೆ ನೀಡಲು ಹೊರಟಿzರೆ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಪರಿಣಾಮ ವುಂಟಾಗುತ್ತಿದೆ. ಚರ್ಮರೋಗದ ಚಿಕಿತ್ಸೆಯನ್ನು ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಮಾತ್ರ ಮಾಡಬಹು ದಾಗಿದೆ. ಆದರೆ ತಜ್ಞರಲ್ಲದ ವ್ಯಕ್ತಿಗಳು ಚಿಕಿತ್ಸೆ ನೀಡುವುದರಿಂದ ಅಲರ್ಜಿ, ಸೋಂಕು, ವರ್ಣ ಬದಲಾವಣೆ ಅಷ್ಟೇ ಅಲ್ಲದೆ ಜೀವಹಾನಿಯ ಅಡ್ಡಪರಿಣಾಮ ಗಳು ಕೂಡ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ನಕಲಿ ವೈದ್ಯರು ಬಳಿ ಹೋಗದೆ ಮಾನ್ಯತೆ ಪಡೆದ ವೈದ್ಯರ ಬಳಿಯೇ ಹೋಗ ಬೇಕು ಎಂದು ಮನವಿ ಮಾಡಿದರು.
ಡಾ|| ಶಾಂತಲಾ ಕೆ.ಎಂ. ಮಾತನಾಡಿ, ನಗರದಲ್ಲಿ ಸೌಂದರ್ಯ ಚಿಕಿತ್ಸೆ ಹೆಸರಿನಲ್ಲಿ ಬ್ಯೂಟಿ ಪಾರ್ಲರ್‌ಗಳು ತಲೆ ಎತ್ತಿವೆ. ಈ ಬ್ಯೂಟಿ ಪಾರ್ಲರ್ ಗಳಲ್ಲಿ ಯಾವ ಅನುಭವವೂ ಇಲ್ಲದವರು ಲೇಸರ್ ಚಿಕಿತ್ಸೆಯನ್ನು ಕೂಡ ಮಾಡಲು ಹೊರಟಿzರೆ. ಅಲ್ಲದೆ ಕಾಸ್ಮೆಟಿಕ್ ಹೆಸರಿನಲ್ಲಿ ಚರ್ಮಕ್ಕೆ ರಾಸಾಯನಿಕ ಚಿಕಿತ್ಸೆ ನೀಡುತ್ತಾರೆ. ಕೂದಲು ಕಸಿಕೂಡ ಮಾಡುತ್ತಾರೆ. ಈ ರೀತಿಯ ಚಿಕಿತ್ಸೆ ಮಾಡಲು ಅವರಿಗೆ ಯಾವ ರೀತಿಯ ಹಕ್ಕು ಇರುವುದಿಲ್ಲ. ಇದು ಕಾನೂನಿಗೆ ವಿರೋಧವಾಗಿದೆ ಈಗಾಗಲೇ ನಮ್ಮ ಸಂಘ ಇಂತಹ ವೈದ್ಯರುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಜಿಧಿಕಾರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ ಎಂದರು.
ಸಂಘದ ಅಧ್ಯಕ್ಷ ಡಾ|| ದಾದಾ ಪೀರ್, ಡಾ|| ಲಾವಣ್ಯ, ಡಾ| ಪ್ರೇರಣಾ, ಡಾ|| ಆದಿನಾಥ್, ಡಾ|| ಮೋನಿಕಾ, ಡಾ|| ಸುಮಿತ್, ಡಾ|| ತೃಪ್ತಿ, ಡಾ|| ಭರತ್ ಮುಂತಾದವರಿದ್ದರು.