ಕ್ರೈಸ್ತ ಧರ್ಮದ ಪ್ರಮೋಚ್ಚ ಧರ್ಮ ಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅಸ್ತಂಗತ
ವ್ಯಾಟಿಕಲ್ ಸಿಟಿ (ಹೊಸ ನಾವಿಕ): ಕ್ರಿಶ್ಚಿಯನ್ ಧರ್ಮದ ಜಾಗತಿಕ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ (88) ಅವರು ಏ.21ರ ಇಂದು ಅಸ್ತಂಗತರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಫ್ರಾನ್ಸಿಸ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ವ್ಯಾಟಿಕನ್ ಮೂಲಗಳು ಖಚಿತಪಡಿಸಿವೆ.
ನಿಮೋನಿಯಾದಿಂದ ಬಳಲುತ್ತಿದ್ದ ಪೂಜ್ಯ ವಿಶ್ವಗುರು ಪೋಪ್ ಅವರನ್ನು ಈ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇಂದು ಬೆಳಿಗ್ಗೆ 7.35ಕ್ಕೆ ಪೂಜ್ಯರು ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಪೂಜ್ಯರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್ನ ಕಾಸಾ ಸಾಂತ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ಅಸ್ತಂಗತರಾಗಿದ್ದಾರೆ.
ಕ್ರೈಸ್ತ ಧರ್ಮದ ವಿಶ್ವಗುರು ಪೋಪ್ ಪ್ರಾನ್ಸಿಸ್ ಅವರು ಇಂದು ನಿಧನರಾದರು ಎಂದು ವ್ಯಾಟಿಕನ್ ಕ್ಯಾಮೆರ್ಲೆಂಗೋ ಕಾರ್ಡಿನಲ್ ಕೆವಿನ್ ಫೆರಲ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಪೊನ್ನ ಅವರ ಇಡೀ ಜೀವನವು ಭಗವಂತನ ಮತ್ತು ಅವರ ಚರ್ಚ್ ಸೇವೆಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ತನಾದ ಯೇಸುವಿನ ನಿಜವಾದ ಶಿಷ್ಯರಾಗಿ ಅವರ ಮಾದರಿಗೆ ಅಪಾರ ಕೃತಜ್ಞತೆಯೊಂದಿಗೆ ಅವರ ಆತ್ಮವನ್ನು ದೇವರ ಅನಂತ ಕರುಣಾಮಯಿ ಪ್ರೀತಿಗೆ ಏಕ ಮತ್ತು ನ್ಯಾಯಮಂಡಳಿಗೆ ಅರ್ಪಿಸುತ್ತೇವೆ ಎಂದಿದ್ದಾರೆ.
ವ್ಯಾಟಿಕನ್ ನ್ಯೂಸ್ ಟ್ವಿಟರ್ ಪೇಜ್ ಈ ವಿಚಾರವನ್ನು ಖಚಿತಪಡಿಸಿದೆ, ಪೋಪ್ ಪ್ರಾನ್ಸಿಸ್ ಅವರು ಈಸ್ಟರ್ ಸೋಮವಾರ ವಾದ ಏಪ್ರಿಲ್ 21ರಂದು ತಮ್ಮ 88ನೇ ವಯಸ್ಸಿನಲ್ಲಿ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅದು ತಿಳಿಸಿದೆ.
ಕ್ಯಾಮೆರಾ ಅವರು ಪೋಪ್ ನಿಧನದ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. ಅವರ ನಿಧನದಿಂದ ಜಗತ್ತಿನಲ್ಲೇ ಇರುವ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ. ವಿಶ್ವದ ಎಲ್ಲಾ ಚರ್ಚ್ಗಳಲ್ಲಿ ಪ್ರಾರ್ಥನಾ ವಿಧಿಗಳು ಆರಂಭಿಸಲಾಗಿದೆ.
ಸಂತಾಪ: ವಿಶ್ವಶಾಂತಿ ಮತ್ತು ಪ್ರೀತಿಯ ಪ್ರತೀಕವಾಗಿದ್ದ ಕ್ರೈಸ್ತ ಧರ್ಮದ ಪ್ರಮೋಚ್ಚ ಧರ್ಮ ಗುರು ಪೋಪ್ ಪ್ರಾನ್ಸಿಸ್ ಅವರ ನಿಧನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬೆಂಗಳೂರು ಮಹಾಧರ್ಮ ಕ್ಷೇತ್ರದ ಅರ್ಚ್ ಬಿಷಪ್ ಪರಮಪೂಜ್ಯ ಡಾ. ಪೀಟರ್ ಮಚಾದೋ, ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಪರಮಪೂಜ್ಯ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೂ, ಶಿವಮೊಗ್ಗ ಧರ್ಮ ಕ್ಷೇತ್ರದ ಶ್ರೇಷ್ಠ ಗುರುಗಳಾದ ರೆ.ಫಾ. ಸ್ಟ್ಯಾನಿ ಡಿಸೋಜಾ, ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೋಸೆಫ್ ಅರುಮಚ್ಚಾಡತ್, ಕಾರವಾರ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಪರಮಪೂಜ್ಯ ಡಾ. ಡುಮ್ಮಿಂಗ್ ಡಯಾಸ್, ಉಡುಪಿ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಸೇರಿದಂತೆ ವಿವಿಧ ಧರ್ಮ ಕ್ಷೇತ್ರಗಳ ಧರ್ಮಾದ್ಯಕ್ಷರುಗಳು,
ಕನ್ಯಾಸ್ತ್ರಿಯರು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜಾ, ಶಿವಮೊಗ್ಗ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ವಿನ್ಸೆಂಟ್ ರೊಡ್ರಿಗಸ್, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಸ್ಕ್ಯಾನಿ ಮಾರ್ಟಿಸ್, ಮರಿಯಪ್ಪ, ಚಿನ್ನಪ್ಪ, ಕಿರಣ್ ಫರ್ನಾಂಡಿಸ್ ಸೇರಿದಂತೆ ವಿಶ್ವದಾದ್ಯಂತ ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
