ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್; ಓರ್ವ ಫಿನಿಷ್ – ಮತ್ತೋರ್ವ ಗಂಭೀರ…
ಶಿವಮೊಗ್ಗ: ನಗರದ ಗಡಿಭಾಗದಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ. ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಭತ್ಸ ದಾಳಿ ನಡೆದಿದ್ದು, ಈ ಪೈಕಿ ರೌಡಿಶೀಟರ್ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ರೌಡಿಶೀಟರ್ ಮಧು ಸ್ಥಿತಿ ಗಂಭೀರವಿದೆ.
ಘಟನೆ ವಿವರ: ಇಂದು ಬೆಳಿಗ್ಗೆ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಆರೋಪಿಗಳಾದ ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಕೇಸಿನಲ್ಲಿ ಕೋರ್ಟ್‌ಗೆ ಹಾಜರಾಗಿ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ವಾಹನವೊಂದು ಹಿಂಬಾಲಿಸಿದೆ. ಅಲ್ಲದೆ ಗೋವಿನ ಕೋವಿ ಬಳಿ ಆರೋಪಿ ಮಧು ಮತ್ತು ಆಂಜನೇಯನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿzನೆ. ಈ ಹ ಮಾಡಿದ ಗ್ಯಾಂಗ್‌ನಲ್ಲಿ ನಾಲ್ಕೈದು ಮಂದಿ ಕಿರಾತಕರು ಇದ್ದರೆಂದು ಹೇಳಲಾಗುತ್ತಿದ್ದು, ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಪತ್ತೆಯಾಗಿದೆ.
ಜೀವನ್ಮರಣದ ನಡುವೆ ಹೋರಾಡುತ್ತಿರುವ ಮಧುಗೆ ಸುಧೀರ್ಘ ಶಸ್ತ್ರಚಿಕಿತ್ಸೆ:
ಹಂದಿ ಅಣ್ಣಿಯನ್ನ ಕೊಲೆ ಮಾಡಿದ ಆರೋಪಿಗಳಲ್ಲಿ ಇಂದು ಇಬ್ಬರ ಮೇಲೆ ಭಯಾನಕವಾಗಿ ಅಟ್ಯಾಕ್ ಆಗಿದ್ದು ಓರ್ವ ಆರೋಪಿ ಸ್ಥಳದ ಬೀದಿ ಹೆಣವಾದರೆ, ಮತ್ತೋರ್ವನಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳು ಮಧು ಎಂಬಾತನನ್ನು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.
ಹಂದಿ ಅಣ್ಣಿ ಕೊಲೆ ಆರೋಪಿ ಮಧು ಎಂಬಾತನ ತಲೆ, ಹೊಟ್ಟೆ, ಎದೆ ಮತ್ತು ಕೈಗೆ ಗಂಬೀರ ಗಾಯಗಳಾಗಿದ್ದು ಆತನಿಗೆ ಸುದೀರ್ಘ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಮೇಲಿದ್ದ ಪ್ರಕರಣ ಕುರಿತು ಹಾಜರಾಗಿ ನಂತರ ಬೈಕ್‌ನಲ್ಲಿ ಹಿಂತಿರುಗಿ ಹೋಗುತ್ತಿದ್ದ ಮಧು ಮತ್ತು ಆಂಜನೇಯನನ್ನ ಸ್ಕಾರ್ಪಿಯೋ ವಾಹನ ಹಿಂಬಾಲಿಸಿ ಗೋವಿನ ಕೋವಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಮೆಗ್ಗಾನ್ ಆಸ್ಪತ್ರೆಗೆ ಗಾಯಾಳು ಮಧು ಎಂಬಾತನನ್ನು ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.