ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಏ.30: ಶ್ರೀಮತಿ ಅನಿತಾ – ಶ್ರೀ ಮಾರ್ಕ್ ಡಿಕಾಸ್ಟ್ ಇವರ ಸುಪುತ್ರ ನಿಶಾಂತ್ ಆಂಟೋನಿ ಡಿಕಾಸ್ಟ ಇವರಿಗೆ ಗುರು ದೀಕ್ಷೆ ಪ್ರಧಾನ

Share Below Link

ಶಿವಮೊಗ್ಗ (ಹೊಸ ನಾವಿಕ): ನಗರದ ಹೃದಯ ಭಾಗದಲ್ಲಿರುವ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಏ.30ರ ನಾಳೆ ಬೆಳಗ್ಗೆ 10 ಗಂಟೆಗೆ ಡೀಕನ್ ನಿಶಾಂತ್ ಆಂಟೋನಿ ಡಿಕಾಸ್ಟ ಇವರ ಗುರು ದೀಕ್ಷಾ ಪೂಜಾ ವಿಧಿಗಳು ಜರುಗಲಿವೆ.
ಶಿವಮೊಗ್ಗದ ಬಾಪೂಜಿ ನಗರದ ಶ್ರೀಮತಿ ಅನಿತಾ ಮತ್ತು ಶ್ರೀ ಮಾರ್ಕ್ ಡಿ ಕಾಸ್ಟ್ ಇವರ ಸುಪುತ್ರ ಡೀಕನ್ ನಿಶಾಂತ್ ಆಂಟೋನಿ ಡಿಕಾಸ್ಟ ಇವರಿಗೆ ಶಿವಮೊಗ್ಗ -ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೂ ಅವರು ಧರ್ಮ ಕ್ಷೇತ್ರದ ಶ್ರೇಷ್ಠ ಗುರುಗಳಾದ ರೆ.ಫಾ. ಸ್ಟ್ಯಾನಿ ಡಿಸೋಜ ಮತ್ತು ಧರ್ಮ ಕ್ಷೇತ್ರದ ಇನ್ನಿತರ ಗುರುಗಳ ಸಮ್ಮುಖದಲ್ಲಿ  ಗುರು ದೀಕ್ಷೆ ನೀಡಲಿದ್ದಾರೆ.
ಗುರು ದೀಕ್ಷಾ ಪೂಜಾ ವಿಧಿ ವಿಧಾನಗಳ ನಂತರ ಪ್ರಧಾನಾಲಯದ ಆವರಣದಲ್ಲಿರುವ ಸ್ನೇಹ ಸದನದಲ್ಲಿ ನೂತನ ಧರ್ಮ ಗುರುಗಳಾಗಿ ದೀಕ್ಷೆ ಸ್ವೀಕರಿಸಿದ ರೆ.ಫಾ.  ನಿಶಾಂತ್ ಆಂಟೋನಿ ಡಿಕಾಸ್ಟ ಇವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಕ್ರೈಸ್ತ ಭಕ್ತರು ಹಾಗೂ ಅಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸೇಕ್ರೆಡ್ ಹಾರ್ಟ್ ಚರ್ಚ್ ನ ಪಾಲನಾ ಪರಿಷತ್ ಮತ್ತು ಆರ್ಥಿಕ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಕೋರಿದ್ದಾರೆ.