ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೩೧ರಿಂದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುರಾಯರ ಆರಾಧನೋತ್ಸವ

Share Below Link

ಶಿವಮೊಗ್ಗ: ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.೩೧ರಿಂದ ಸೆ.೨ರವರೆಗೆ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ೩೫೨ನೇ ಆರಾ ಧನಾ ಮಹೋತ್ಸವ ನಡೆಯಲಿದೆ ಎಂದು ಮಠದ ಪ್ರಮುಖ ಭಕ್ತರಾದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಂತ್ರಾಲಯ ಮಠದ ಶ್ರೀ ಸುಬುದೇಂದ್ರ ತೀರ್ಥಂಗಳವರ ಆಜನುಸಾರ ಈ ನೂತನ ಮಠ ಪ್ರತಿಷ್ಠಾಪನೆ ಆದ ಬಳಿಕ ಇದೇ ಮೊದಲ ಬಾರಿಗೆ ಈ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆ.೩೦ ರಂದು ಸಂಜೆ ೬ಕ್ಕೆ ಗೋಪೂಜೆ, ಧನ, ಧಾನ್ಯ, ಪೂಜೆ ಲಕ್ಷ್ಮೀಪೂಜೆ, ಮಹಾ ಮಂಗಳಾರತಿ ಇರುತ್ತದೆ.
ಆ. ೩೧ರಂದು ಪೂರ್ವಾರಾಧನೆ ಇದ್ದು, ಬೆಳಿಗ್ಗೆ ೫.೩೦ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿವೆ. ಸೆ.೧ರಂದು ಶ್ರೀ ಗುರುರಾಜರ ಮಧ್ಯಾರಾಧನೆ ಇದ್ದು, ಸೆ.೨ರ ಶನಿವಾರ ಉತ್ತರಾಧನೆ ನಡೆಯಲಿದೆ. ಮೂರೂ ದಿನಗಳ ಕಾಲ ಸಂಜೆ ೬ರಿಂದ ಭಜನೆ, ವೀಣಾವಾದನ. ಪ್ರವಚನ ನಡೆಯಲಿದ್ದು, ಪಲ್ಲಕ್ಕಿ ಸೇವೆ ಹಾಗೂ ಪ್ರಸಾದ ವಿತರಣೆ ಇರುತ್ತದೆ. ಸಾರ್ವಜನಿಕರು ಹಾಗೂ ಭಕ್ತರು ತನುಮನ ಧನ ನೀಡಿ ಸಹಕರಿಸುವಂತೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾವು ಸಹ ಪಾಲ್ಗೊಳ್ಳುವುದಾಗಿ ಹೇಳಿದರು.
ಧೀರೇಂದ್ರ ಆಚಾರ್, ಅಶ್ವತ್ಥನಾರಾಯಣ ಶೆಟ್ಟಿ, ಸುಧೀಂದ್ರ, ಮಧುಸೂದನ್ ಕುಬೇರಪ್ಪ, ಪ್ರಶಾಂತ್ ಮತ್ತಿತರರಿದ್ದರು.