ಜಿಲ್ಲಾ ಸುದ್ದಿತಾಜಾ ಸುದ್ದಿ

ಅವೈeನಿಕ ವಿದ್ಯುತ್ ದರ ಸರಿಪಡಿಸಲು ಕೈಗಾರಿಕೋದ್ಯಮಿಗಳ ಆಗ್ರಹ…

Share Below Link

ಶಿವಮೊಗ್ಗ: ಅವೈeನಿಕ ವಿದ್ಯುತ್ ದರ ಪರಿಷ್ಕರಣೆಯಿಂದ ಕೈಗಾರಿಕಾ ಉದ್ಯಮಿಗಳಿಗೆ ಆಗು ತ್ತಿರುವ ಅನ್ಯಾಯ ಸರಿಪಡಿಸು ವಂತೆ ಹಾಗೂ ಕೆಇಆರ್‌ಸಿ ಮತ್ತು ಎಸ್ಕಾಂ ನೀತಿಗಳಿಂದ ಸಾರ್ವಜನಿ ಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಮುಖ್ಯಮಂತ್ರಿಗ ಳನ್ನು ಆಗ್ರಹಿಸಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ದಿಂದ ಶಿವಮೊಗ್ಗ ನಗರದ ಎಂಆರ್‌ಎಸ್ ವೃತ್ತದಲ್ಲಿ ಪ್ರತಿಭ ಟನೆ ನಡೆಸಲಾಯಿತು.
ಮೆಸ್ಕಾಂ ವಿದ್ಯುತ್ ಬಿಲ್‌ನಲ್ಲಿ ಅವೈeನಿಕವಾಗಿ ಶೇ. ೨೫ ರಿಂದ ೭೫ರಷ್ಟು ಹೆಚ್ಚುವರಿ ದರ ನೀಡು ತ್ತಿರುವುದು ಆತಂಕಕಾರಿಯಾಗಿದೆ. ಮೆಸ್ಕಾಂ ವಿದ್ಯುತ್ ದರ ಹೆಚ್ಚುವರಿ ಹೊರೆ ಆಗುತ್ತಿದ್ದು, ಏಕಾಏಕಿ ವಿದ್ಯುತ್ ದರ ಹೆಚ್ಚಿಸಿರುವುದು ಖಂಡನೀಯ. ಇದರಿಂದ ಕೈಗಾರಿಕೆ ಉದ್ದಿಮೆಗಳು ಮುಚ್ಚುವ ಭೀತಿಯ ಲ್ಲಿವೆ. ಸಾರ್ವಜನಿಕರಿಗೂ ಹೊರೆ ಆಗುತ್ತಿದೆ. ಕೂಡಲೇ ವಿದ್ಯುತ್ ದರ ಹೆಚ್ಚಳ ಆದೇಶವನ್ನು ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ದರದಲ್ಲಿನ ಫಿಕ್ಸೆಡ್ ಚಾರ್ಜ್ ಹಿಂದಿನಂತೆ ಮುಂದುವರೆ ಸಿಕೊಂಡು ಹೋಗಬೇಕು. ವಿದ್ಯು ತ್ ಶಕ್ತಿಯ ಯೂನಿಟ್ ದರಗಳ ನ್ನು ಮಾ.೨೦೨೩ರ ನಿಗದಿತ ದರ ಗಳನ್ನೇ ಮುಂದುವರಿಸಬೇಕು. ಇಂಧನ ಬೆಲೆ ಅಸ್ಥಿರ ಪದ್ಧತಿಯಲ್ಲಿ ರುವುದರಿಂದ ಹೆಚ್ಚು ಹೊರೆಯಾ ಗುತ್ತಿದೆ. ಕರ್ನಾಟಕದಲ್ಲಿ ನೀರಿ ನಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು, ಇಂಧನ ಬೆಲೆ ಹೊರೆ ಕಡಿಮೆ ಇರುವುದರಿಂದ ಸರ್ಕಾರ ಶೇ. ೫೦ರಷ್ಟು ವಿನಾಯಿತಿ ಘೋಷಿಸಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ದರದ ಮೇಲಿನ ತೆರಿಗೆಯನ್ನು ಹಾಲಿ ಶೇ ೯ ರಿಂದ ೩ಕ್ಕೆ ಇಳಿಸಿ ೩-೪ ವರ್ಷ ಶೇ ೩ ದರವನ್ನು ನಿಗಧಿಪಡಿಸಬೇಕು. ಎಂಎಸ್‌ಎಂಇ ಉದ್ಯಮಗಳಿಗೆ ಸರ್ಕಾರದ ಅನುದಾನವನ್ನ ನಿಗಧಿಪಡಿಸಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೆಲವು ಶಾಸನ ಬದ್ಧ ಬದಲಾವಣೆಗಳನ್ನು ಮಾಡ ಬೇಕು. ಮೆಸ್ಕಾಂ ಖಾಸಗಿ ವಿದ್ಯುತ್ ಶಕ್ತಿ ಕಂಪನಿಗಳಿಂದ ವಿದ್ಯುತ್ ಖರೀದಿಸಿ ೧೫ ಪೈಸೆ ಯೂನಿಟ್‌ಗೆ ವೆಚ್ಚ ಸೇರಿಸಿ ಕೈಗಾರಿಕೆಗಳಿಗೆ ಮರುವಿತರಣೆ ಮಾಡುವ ಮೂಲಕ ಉದ್ಯಮಕ್ಕೆ ಸಹಾಯ ಮಾಡಬೇಕು. ಮೆಸ್ಕಾಂಗೆ ಬಾಕಿ ಇರುವ ೧೧ ಸಾವಿರ ಕೋಟಿ ರೂ. ಹಣವನ್ನು ವಸೂಲಿ ಮಾಡಲು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆರು ತಿಂಗಳಿಗೊಮ್ಮೆ ವಿದ್ಯುತ್ ಪರಿಷ್ಕರಣೆಯನ್ನು ಬಿಟ್ಟು ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಅನುಸರಿಸು ವುದು ಮತ್ತು ಅಳವಡಿಸಿಕೊಳ್ಳು ವುದು. ಬಿಲ್ಲಿಂಗ್ ದಿನಾಂಕಗಳನ್ನು ಮೆಸ್ಕಾಂನಿಂದ ಪ್ರತಿ ತಿಂಗಳ ೧ ರಿಂದ ೩೦ ಅಥವಾ ೩೧ ರವರೆಗೆ ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಮೆಸ್ಕಾಂ ಎಸ್‌ಇ ಹಾಗೂ ಜಿಧಿಕಾರಿಗಳಿಗೆ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಸಂಯೋ ಜಿತ ಸಂಘ ಸಂಸ್ಥೆಗಳ ಪರವಾಗಿ ಮನವಿ ಸಲ್ಲಿಸಲಾಯಿತು. ಕೈಗಾರಿ ಕೋದ್ಯಮಿ ಎಸ್.ರುದ್ರೇಗೌಡ, ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ರಮೇಶ್ ಕುಮಾರ್ ಹೆಗಡೆ ಸೇರಿದಂತೆ ನೂರಾರು ಉದ್ಯಮಿಗಳು ಹಾಜರಿದ್ದರು.