ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸಚಿವರಿಂದ ಹೋಂ ಥಿಯೇಟರ್ ಕೊಡುಗೆ
ಶಿವಮೊಗ್ಗ: ಎಸ್.ಬಂಗಾರಪ್ಪ ಪೌಂಡೇಶನ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿ ಬಳಗ ದಿಂದ ತ್ಯಾವರೆಕೊಪ್ಪದ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ೬೫ ಇಂಚಿನ ಮಿನಿ ಹೋಮ್ ಥಿಯೇ ಟರ್ ಟಿವಿ ಹಾಗೂ ಅಲ್ಲಿನ ಎಲ್ಲ ೨೩೦ ನಿರಾಶ್ರಿತರಿಗೆ ಗುಣಮಟ್ಟದ ಪಾದರಕ್ಷೆ ಗಳನ್ನು ಸಚಿವ ಮಧು ಬಂಗಾರಪ್ಪ ಕೊಡುಗೆಯಾಗಿ ನೀಡಿ ದ್ದಾರೆ.
ಅ.೨೬ರಂದು ಮಾಜಿ ಸಿಎಂ ಎಸ್ ಬಂಗಾರಪ್ಪಜಿ ಅವರ ಜನ್ಮ ದಿನಾಚರಣೆಯನ್ನು ನಗರದ ತಾವರೆಕೊಪ್ಪ ಭಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ ಜಿಲ್ಲಾ ಎನ್ಎಸ್ ಯುಐನಿಂದ ಭಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಭಾಗವಹಿಸಿ ಕೇಕ್ ಕತ್ತರಿಸಿ ನಿರಾಶ್ರಿತರಿಗೆ ಬೆಡ್ ಶೀಟ್ಗಳನ್ನು ವಿತರಿಸಿ ಮಾತನಾಡಿದ್ದರು. ನಂತರ ಈ ಸಂದರ್ಭದಲ್ಲಿ ಸದರಿ ಕೇಂದ್ರಕ್ಕೆ ಟಿ.ವಿ ಹಾಗೂ ಪಾದರಕ್ಷೆಗಳನ್ನು ನೀಡುವುದಾಗಿ ಘೋಷಿಸಿದ್ದರು.
ಇದಕ್ಕೆ ಪೂರಕವಾಗಿ ನಿನೆ ನುಡಿದಂತೆ ನಡೆದಿರುವ ಸಚಿವರು, ಟಿ.ವಿ. ಹಾಗೂ ನಿರಾಶ್ರಿತ ಕೇಂದ್ರದ ೨೩೦ ವಾಸಿಗಳಿಗೆ ಪಾದರಕ್ಷೆಗಳನ್ನು ತಮ್ಮ ಬೆಂಬಲಿಗ ರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಪ್ರಮುಖರಾದ ಜಿ. ಡಿ. ಮಂಜುನಾಥ್, ಮುಕ್ತಿಯಾರ್ ಅಹಮದ್, ಮುಹಿಬುಲ್ಲಖಾನ್ ಗೀತೇಂದ್ರ ಗೌಡ, ಮಧು ಸೂದನ್, ವಿಜಯ್ ಕುಮಾರ್, ಎಂ.ಬಿ. ರವಿಕುಮಾರ್, ಜ್ಯೋತಿ ಅರಳಪ್ಪ, ಟಿ, ಮಂಜಪ್ಪ, ಗಿರೀಶ್, ರವಿ ಉಪಸ್ಥಿತರಿದ್ದರು.