ಜಿಲ್ಲಾ ಸುದ್ದಿತಾಜಾ ಸುದ್ದಿ

ಫೆ.೨೩: ದೇವರದಾಸಿಮಯ್ಯ ಸಭಾ ಭವನ ಉದ್ಘಾಟನೆ…

Share Below Link

ಶಿವಮೊಗ್ಗ : ಮಲೆನಾಡು ದೇವಾಂಗ ಸಮಾಜದ ವತಿಯಿಂದ (ಚಿಕ್ಕಮಗಳೂರು – ಶಿವಮೊಗ್ಗ ಜಿಲ್ಲೆ) ದೇವರ ದಾಸಿಮಯ್ಯ ಸಭಾ ಭವನದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಸಭಾ ಕಾರ್ಯಕ್ರಮವನ್ನು ಫೆ.೨೩ ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಕುವೆಂಪು ರಂಗಂದಿರದಲ್ಲಿ ಏರ್ಪಡಿ ಸಲಾಗಿದೆ ಎಂದು ಮಲೆನಾಡು ದೇವಾಂಗ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪಿ.ಆರ್.ಗಿರಿ ಯಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿ ದರು.
ಸುವರ್ಣ ಮಹೋತ್ಸವ ಕಟ್ಟಡವನ್ನು ೧ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರೂ.೭೫ ಲಕ್ಷ ಹಣ ಸರ್ಕಾರದಿಂದ ಬಂದಿದ್ದು, ರೂ.೨೫ ಲಕ್ಷ ಹಣವನ್ನು ಸಮಾಜದಿಂದ ಹಾಗೂ ದಾನಿಗಳು ನೀಡಿದ ದೇಣಿಗೆ ಮೂಲಕ, ೫೦ ಚದರ ವಿಸ್ತೀರ್ಣದ ಕಟ್ಟಡದಲ್ಲಿ ಸುಮಾರು ೨೦೦ ರಿಂದ ೨೫೦ ಜನ ಕೂರಬಹುದಾದ ಮಿನಿ ಹಾಲ್ ಕೂಡಾ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಂಪಿ – ಹೇಮಕೂಟದ ಗಾಯತ್ರಿ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳು, ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಯವರು ದಿವ್ಯ ಸಾನಿಧ್ಯ ವಹಿಸ ಲಿದ್ಡು, ಕಾರ್ಯಕ್ರಮವನ್ನು ರಾಜ್ಯ ಸಭಾ ಸದಸ್ಯ ಡಾ. ಕೆ. ನಾರಾಯಣ್, ಕಟ್ಟಡದ ಉದ್ಘಾಟನೆ ಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಲಿದ್ದಾರೆ ಎಂದರು.
ಸ್ಮರಣ ಸಂಚಿಕೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ದಾನಿಗಳ ನಾಮ ಫಲಕವನ್ನು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ದಾನಿಗಳ ಛಾಯಾಚಿತ್ರವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ್ ಅನಾವರಣಗೊಳಿ ಸಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನವನ್ನು ಮಾಜಿ ಸಚಿವೆ ಉಮಾಶ್ರೀ ಮತ್ತು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀ ನಾರಾಯಣ್ ನೆರವೇರಿಸಲಿದ್ದಾರೆ. ದಾನಿಗಳಿಗೆ ಸನ್ಮಾನವನ್ನು ಅಖಿಲ ಭಾರತ ದೇವಾಂಗ ಸಂಘದ ಅಧ್ಯಕ್ಷ ಅರುಣ್ ವರಾಡೆ, ವಿಧಾನ ಪರಿ ಷತ್ ಶಾಸಕ ಡಿ.ಎಸ್. ಅರುಣ್ ಹಾಗೂ ಡಾ.ಧನಂಜಯ ಸರ್ಜಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ ವಹಿಸಲಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ಯು. ರಾಮಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಮೋಹನ್ ಮೂರ್ತಿ, ಖಜಾಂಚಿ ಎಂ.ಗುರುಶಾಂತಪ್ಪ ಆಲದಹಳ್ಳಿ, ಸತೀಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *