ಜನಸ್ನೇಹಿ ಆಡಳಿತ ನೀಡುವ ಮೂಲಕ ಆಡಳಿತ ಸುಧಾರಣೆಗೆ ಮುಂದಾಗಿ: ಮಧು
ಸೊರಬ: ಪುರಸಭೆ ವ್ಯಾಪ್ತಿ ಯಲ್ಲಿ ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸು ವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಸಂಪೂರ್ಣ ಅಡಳಿತ ಯಂತ್ರ ಕುಸಿದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಮಧು ಬಂಗಾರಪ್ಪ ಸಭೆಯಲ್ಲಿದ್ದ ವಿಭಾಗಾ ಧಿಕಾರಿ ಆಡಳಿತ ಸುಧಾರಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ವಹಿಸಿ ಅವರು ಮಾತನಾ ಡಿದ ಅವರು, ನಿವೇಶನ ಖಾತೆ, ನಿರಪೇಕ್ಷಣ ಪತ್ರ, ಇ-ಸ್ವತ್ತು ಸೇರಿ ದಂತೆ ಸಾರ್ವಜನಿಕರಿಗೆ ಅವಶ್ಯವಿ ರುವ ಹಕ್ಕು ದಾಖಲೆಗಳನ್ನು ಪಡೆಯಲು ಅಲೆದಾಡುವ ಬಗ್ಗೆ ಜನರಿಂದ ದೂರು ಕೇಳಿ ಬರುತ್ತಿವೆ. ಅಧಿಕಾರಿಗಳು ಕರ್ತವ್ಯ ನಿಷ್ಠೆ ಜೊತೆಗೆ ಸಾರ್ವಜನಿಕರ ಕುಂದು, ಕೊರತೆಗಳನ್ನು ಆಲಿಸಿ ಅವರ ಕೆಲಸ, ಕಾರ್ಯಗಳಿಗೆ ತೊಂದರೆ ಯಾಗದಂತೆ ಜನಸ್ನೇಹಿ ಆಡಳಿತ ನೀಡಲು ಮುಂದಾಗುವಂತೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಕೈಗೆತ್ತಿಕೊಳ್ಳು ವಾಗ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸಬೇಕು ಎಂದರು.
ಪಟ್ಟಣದ ಸರ್ವೆ ನಂ ೧೧೩ರಲ್ಲಿ ವಾಸವಾಗಿರುವ ನಿವಾಸಿಗಳಿಗೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ೭೦೦ಕ್ಕೂ ಅಧಿಕ ಜನರಿಗೆ ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾ ಗಿದೆ. ರಾಜಕೀಯ ಉದ್ದೇಶಕ್ಕಾಗಿ ವಜಗೊಳಿ ಸುವ ಪ್ರಯತ್ನ ಮಾಡಲಾಗಿದೆ. ಪುನಃ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಖಾತೆ ಮಾಡಿಕೊಡುವಂತೆ ಕ್ರಮ ವಹಿಸಲಾಗುವುದು ಎಂದರು.
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅವಕಾಶವಿದ್ದು, ತಾಲ್ಲೂಕು ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಹಾಗೂ ಪುರಸಭೆ ನೂತನ ಕಟ್ಟಡವನ್ನು ಹಳೆ ತಾಲ್ಲೂಕು ಕಚೇರಿ ಆವರಣದಲ್ಲಿ ನಿರ್ಮಾಣ ಮಾಡುವಂತೆ ಸರ್ವಾ ನುಮತದಿಂದ ಒಪ್ಪಿಗೆ ಪಡೆಯ ಲಾಯಿತು. ಪಟ್ಟಣದ ಸರ್ವೆ ನಂ ೧೧೩ರಲ್ಲಿ ೧ ಎಕರೆ ಜಗದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಉಪ ನೋಂದಾಣಿಧಿಕಾರಿ ಕಚೇರಿ ಹಾಗೂ ಅಬಕಾರಿ ಇಲಾಖೆಯನ್ನು ಜನಸಂದಣಿ ದೃಷ್ಟಿಯಿಂದ ಬೇರೆಡೆ ಸ್ಥಳಾಂತ ರಿಸಲು ಸಚಿವರು ಸೂಚಿಸಿದರು.
ಸಾಗರ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀ ಲ್ದಾರ್ ಹುಸೇನ್ ಸರಾಕವಾಸ್, ಜಿಲ್ಲಾ ನಗರೋತ್ಥಾನ ಯೋಜನಾ ಧಿಕಾರಿ ಮನೋಹರ, ಇಒ ಪ್ರದೀಪ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಲೋಕೋಪಯೋಗಿ ಎಂಜಿನಿ ಯರ್ ಚಂದ್ರಪ್ಪ, ಮೆಸ್ಕಾಂ ಎಂಜಿನಿಯರ್ ಸತ್ಯಪ್ರಕಾಶ್, ಗಣಪತಿ ನಾಯಕ್, ಹರೀಶ್, ಕಿರಣ ಕುಮಾರ್, ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ್,ಈರೇಶ್ ಮೇಸ್ತ್ರಿ ಸೇರಿದಂತೆ ಸದಸ್ಯರು ಹಾಜರಿದ್ದರು.