ಕಾವೇರುತ್ತಿದೆ ಜಂಪಿಂಗ್ ಪಾಲಿಟಿಕ್ಸ್: ಕಾಂಗ್ರೆಸ್ – ಬಿಜೆಪಿ – ಜೆಡಿಎಸ್ ಟಿಕೆಟ್ಗಾಗಿ ಮರಕೋತಿ ಆಟ ಆರಂಭ
(ಹೊಸನಾವಿಕ ಪೊಲಿಟಿಕಲ್ ಡೆಸ್ಕ್)
ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ದಿನದಿಂದ ದಿನಕ್ಕೆ ಜೋರಾಗಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ನಲ್ಲಿದ್ದವರು ಬಿಜೆಪಿ ಕಡೆ, ಬಿಜೆಪಿಯಲ್ಲಿದ್ದವರು ಕಾಂಗ್ರೆಸ್ನತ್ತ, ಎರಡೂ ಪಕ್ಷದಲ್ಲಿ ಸಲ್ಲದವರು ಜೆಡಿಎಸ್ ಕಡೆ, ದಳದಲ್ಲಿ ಟಿಕೆಟ್ ಖಾತ್ರಿ ಇಲ್ಲದವರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಾ ಮರಕೋತಿ ಆಟದಲ್ಲಿ ನಿರತರಾಗಿದ್ದಾರೆ. ಎಲ್ಲಾ ಪಕ್ಷಗಳ ಪ್ರಮುಖ ನಾಯಕರೂ ಗೆಲ್ಲುವ ಕುದುರೆಗಳನ್ನು ತಮ್ಮ ಪಕ್ಷಗಳಿಗೆ ಆಹ್ವಾನಿಸಲು ಶಾಲು-ಹಾರ ಹಿಡಿದು ಬಾಗಿಲಲ್ಲಿ ಕಾಯುತ್ತಿದ್ದಾರೆ.
ಗುಜರಾತ್ ಮಾದರಿ ಜಪಿಸುತ್ತಿರುವ ಮೋದಿ-ಶಾ ಜೋಡಿ ಒಂದು ವೇಳೆ ತಮ್ಮ ನಿರ್ಧಾರಕ್ಕೆ ಗಂಟು ಬಿದ್ದರೆ ಬಿಜೆಪಿಯಿಂದಲೂ ಕೂಡ ಹತ್ತು ಹಲವು ಸಚಿವರು, ಶಾಸಕರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಗೂಡಿಗೆ ಹಾರಿ ಆಶ್ರಯ ಪಡೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಜೆ. ನರಸಿಂಹಸ್ವಾಮಿ, ಮನೋಹರ್, ಬಿಜೆಪಿ ಎಂಎಲ್ಸಿ ಪುಟ್ಟಣ್ಣ ಕಾಂಗ್ರೆಸ್ಗೆ ಸೇರ್ಪಡೆಯಾಗಿzರೆ. ಇನ್ನೊಂದೆಡೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸೀಕಲ್ ರಾಮಚಂದ್ರ ಗೌಡ, ಉದ್ಯಮಿ ಎಸ್.ವಿ.ಆನಂದ ಗೌಡ, ಸಿನಿಮಾ ನಿರ್ಮಾಪಕ ವಿಜಯ್ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಿzರೆ. ಎಎಪಿ ಸೇರಿ ಭಾರೀ ಸದ್ದು ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ರಾವ್ ಇದೀಗ ಸದ್ದಿಲ್ಲದೇ ಪೊರಕೆ ಮೂಲೆಗೆ ಬಿಟ್ಟು ಕಮಲ ತೆಕ್ಕೆಗೆ ಜಿಗಿದಿದ್ದಾರ.
ಈ ಬೆಳವಣಿಗೆಗಳ ನಡುವೆಯೇ ಜೆಡಿಎಸ್ನ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ ಕೂಡ ದಳಪತಿಗಳಿಗೆ ಕೈಕೊಟ್ಟು ಕಾಂಗ್ರೆಸ್ಗೆ ಸೇರುತ್ತಿzರೆ. ಇದರಲ್ಲಿ ಶಿವಲಿಂಗೇಗೌಡ ಮತ್ತು ಗುಬ್ಬಿ ಶ್ರೀನಿವಾಸ್ಗೆ ಟಿಕೆಟ್ ಖಾತರಿ ಯಾಗಿದ್ದರೆ ಎ.ಟಿ.ರಾಮಸ್ವಾಮಿಗೆ ಟಿಕೆಟ್ ಇನ್ನು ಗೊಂದಲದಲ್ಲಿದೆ.
ಅರಕಲಗೂಡಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಕೆಂಪೇಗೌಡ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಎ.ಟಿ. ರಾಮಸ್ವಾಮಿಗೆ ಟಿಕೆಟ್ ಕೊಡಿಸುವ ಲೆಕ್ಕಾಚಾರದಲ್ಲಿzರೆ. ಹೀಗಾಗಿ ಈ ಕ್ಷೇತ್ರ ಇನ್ನು ಗೊಂದಲದ ಉಳಿದಿದೆ.
ಈ ಹಿಂದೆ ಆಪರೇಷನ್ ಕಮಲದ ಬಲೆಗೆ ಸಿಲುಕಿ ಜೆಡಿಎಸ್ನಿಂದ ಹೈಜಂಪ್ ಮಾಡಿದ್ದ ರೇಷ್ಮೆ ಮತ್ತು ಯುವ ಸಬಲೀಕರಣ ಸಚಿವ ಡಾ| ಕೆ.ಸಿ. ನಾರಾಯಣಗೌಡ ಈಗ ಬಿಜೆಪಿಗೆ ಗುಡ್ಬೈ ಹೇಳಿ ಕೈ ಹಿಡಿಯುವ ಲೆಕ್ಕಾಚಾರದಲ್ಲಿzರೆ. ಅವರ ಸೇರ್ಪಡೆಗೆ ತವರು ಜಿಯಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವುದ ರಿಂದ ಸದ್ಯಕ್ಕೆ ಅವರ ಪರಿಸ್ಥಿತಿ ಯಾವುದು ದಾರಿ ಎಲ್ಲಿಗೆ ಪಯಣ ಎಂಬಂತಾಗಿದೆ.
ಚುನಾವಣಾ ಸಂದರ್ಭದಲ್ಲಿ ಅತಂತ್ರ ಸ್ಥಿತಿಯತ್ತ ಬಾಂಬೆ ಬಾಯ್ಸ್!
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದ ಹಾಲಿ ಕೆಲವು ಸಚಿವರು ಮರಳಿ ತವರು ಮನೆಯತ್ತ ಮುಖ ಮಾಡಿzರೆ ಎಂಬು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸಚಿವರಾದ ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಭೈರತಿ ಬಸವ ರಾಜ್, ಮುನಿರತ್ನ, ಬಿ.ಸಿ. ಪಾಟೀಲ್ ಸೇರಿದಂತೆ ಅನೇಕರು ಬಿಜೆಪಿಯಲ್ಲಿ ಮುಂದುವರೆಯ ಬೇಕೆ ಇಲ್ಲವೇ ಹಳೆ ಗಂಡನ ಪಾದವೇ ಗತಿ ಎಂಬಂತೆ ಮಾತೃ ಪಕ್ಷಕ್ಕೆ ಮರಳಬೇಕೆ ಎಂಬ ಜಿeಸೆಯಲ್ಲಿzರೆ ಎನ್ನಲಾಗುತ್ತಿದೆ.
ಇದರಲ್ಲಿ ಕೆಲವರು ಕಾಂಗ್ರೆಸ್ಗೆ ಬರಲು ಸಿದ್ದರಾಗಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷ ಸೇರ್ಪಡೆಗೆ ಒಪ್ಪುತ್ತಿಲ್ಲ. ಹೀಗಾಗಿಯೇ ಪಕ್ಷ ಸೇರ್ಪಡೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲಿನ ಬೆಳವಣಿಗೆ ಅವರು ಕಾದು ನೋಡುವ ತಂತ್ರ ಅನುಸರಿಸುವಂತೆ ಮಾಡಿದೆ. ಸದ್ಯಕ್ಕೆ ಮಂಕಾಗಿರುವ ಬಿಜೆಪಿಗೆ ಚುರುಕು ಮುಟ್ಟಿಸಲೆಂದೇ ಚುನಾವಣಾ ಚಾಣಕ್ಯ ಅಮಿತ್ ಶಾ ಬಂದು ಹೋಗಿzರೆ. ಮುಂದಿನ ಬೆಳವಣಿಗೆಗಳು ಹೇಗಿವೆಯೋ ಗೊತ್ತಿಲ್ಲ. ಈ ಹಿಂದೆಯಿದ್ದ ಸಮ್ಮಿಶ್ರ ಸರ್ಕಾರದಿಂದ ಸಿಡಿದೆದ್ದು ಬಂದ ಶಾಸಕರು ಮುಂದಿನ ಚುನಾವಣೆ ಯಲ್ಲಿಯೂ ಬಿಜೆಪಿಯಲ್ಲಿಯೇ ಇರುತ್ತಾರಾ? ಅಥವಾ ಪಕ್ಷ ನಿಷ್ಠೆ ಬದಲಾಯಿಸುತ್ತಾರೋ ಗೊತ್ತಿಲ್ಲ. ಆದರೆ ಅವರ ಕಾರ್ಯವನ್ನು ಹೈಕಮಾಂಡ್ ಹೊಗಳಿರುವುದು ಸಧ್ಯಕ್ಕೆ ಸಮಾಧಾನ ತಂದಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ನಿಂದ ಬಂದ ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಯಾವುದೇ ಕ್ಯಾತೆ ತೆಗೆಯದೆ ಕೆಲಸ ಮಾಡುತ್ತಿ zರೆ. ಆದರೆ ಮೂಲ ಬಿಜೆಪಿಗರ ಪೈಕಿ ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದ್ದರೂ ಕೂಡ ಮೇಲ್ನೋಟಕ್ಕೆ ತಣ್ಣಗೆ ಆದಂತೆ ಕಾಣುತ್ತಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ನಲ್ಲಿ ಅಸಮಾಧಾನ ಗೊಂಡ ಶಾಸಕರು ಬಿಜೆಪಿಯತ್ತ ಒಲವು ತೋರಿದ್ದರಾದರೂ ಈಗಿನ ಬೆಳವಣಿಗೆಯಲ್ಲಿ ಅವರು ಯಾವುದೇ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ. ಅವರದ್ದೇನಿದ್ದರೂ ಈಗ ಕಾದು ನೋಡುವ ತಂತ್ರವಾಗಿದೆ.
ತೆನೆ ಹೊತ್ತ ಎ.ಮಂಜು :
ಈ ಹಿಂದೆ ಕಾಂಗ್ರೆಸ್ಗೆ ಕೈಕೊಟ್ಟು ಕಮಲ ಮುಡಿದಿದ್ದ ಮಾಜಿ ಸಚಿವ ಎ.ಮಂಜು ಜೆಡಿಎಸ್ಗೆ ಸೇರುವುದು ಖಚಿತವಾಗಿದೆ. ಈಗಾಗಲೇ ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸಿರುವ ಅವರು ಮುಂದಿನ ಚುನಾವಣೆಗೆ ಅರಕಲಗೂಡಿನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.
ಹಾಲಿ ಶಾಸಕ ಎ.ಟಿ. ರಾಮಸ್ವಾಮಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಇಲ್ಲವೇ ಬಿಜೆಪಿಯತ್ತ ಮುಖ ಮಾಡಿರುವುದರಿಂದ ಮಂಜು ಸೇರ್ಪಡೆಗೆ ಹಾದಿ ಸುಗಮವಾಗಿದೆ. ಈ ತಿಂಗಳ ೨ನೇ ವಾರದಲ್ಲಿ ತಮ್ಮ ಬೆಂಬಲಿಗರ ಜೊತೆ ಜೆಡಿಎಸ್ ತೆಕ್ಕೆಗೆ ಮರಳಲಿzರೆ. ಬಿಜೆಪಿಗೆ ಬರಲು ಕೆಲವರು ತುದಿಗಾಲಲ್ಲಿ ನಿಂತಿದ್ದರೂ ಪರಿಸ್ಥಿತಿ ಮತ್ತು ಸಂದರ್ಭ ನೋಡಿಕೊಂಡು ತೀರ್ಮಾನ ಮಾಡುವ ನಿರ್ಧಾರಕ್ಕೆ ಬಂದಿzರೆ.
ಹಾಲಿ ಮತ್ತು ಮಾಜಿ ಶಾಸಕರ ಗತಿ ಈ ರೀತಿಯಾದರೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ (ಸ್ವಾಭಿಮಾನಿ) ಸುಮಲತ ಅಂಬರೀಶ್ ಅವರದ್ದು ಇನ್ನೊಂದು ಕಥೆ. ಕಾಂಗ್ರೆಸ್ ಸೇರಬೇಕೆ ಇಲ್ಲವೇ ಬಿಜೆಪಿಗೆ ಹೋಗಬೇಕೆಂಬ ಗೊಂದಲದಲ್ಲಿರುವ ಅವರು ಸದ್ಯಕ್ಕೆ ಬೆಂಬಲಿಗರು, ಹಿತೈಷಿಗಳು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮುಂದಡಿ ಇಡುತ್ತಿzರೆ.
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಅಳೆತು ತೂಗಿ ಲೆಕ್ಕಾಚಾರ ಹಾಕುತ್ತಿರುವ ಸುಮಲತಾ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದು, ಅದೇ ರೀತಿ ಜಿಯ ವಿವಿಧ ನಾಯಕರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೆ ಅಭಿಪ್ರಾಯ ಸಂಗ್ರಹಿಸುತ್ತಿzರೆ. ಇದೇ ತಿಂಗಳ ೧೨ರಂದು ಪ್ರಧಾನಿ ಮೋದಿ ಅವರು ಮಂಡ್ಯ ಜಿ ಮದ್ದೂರಿಗೆ ಆಗಮಿಸುತ್ತಿದ್ದು, ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯನ್ನು ಲೋಕಾರ್ಪಣೆ ಮಾಡಲಿzರೆ. ಅಷ್ಟರೊಳಗೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಆದರೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಅಳೆದು ತೂಗಿ ಆಲೋಚಿಸಿ ಒಂದು ಹೆಜ್ಜೆ ಮುಂದೆ ಹೋಗುವ ಸುಮಲತಾ ಅಂಬರೀಶ್ ಕಾದು ನೋಡುವ ತಂತ್ರ ಅನುಸರಿಸುತ್ತಿzರೆ. ಸುಮಲತಾ ಅವರು ಬಹುತೇಕ ಬಿಜೆಪಿ ಸೇರ್ಪಡೆ ಖಚಿತವಾಗಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಹೀಗೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಂಪಿಂಗ್ ಪಾಲಿಟಿಕ್ಸ್ ಕೂಡ ಜೋರಾಗಿದೆ.