೯ ತಿಂಗಳ ಮಗಳನ್ನು ಉಳಿಸಿಕೊಳ್ಳಲು ಪತ್ರಕರ್ತನ ಪರದಾಟ..

418

ದಾವಣಗೆರೆ: ಈತ ಅಣ್ಣಪ್ಪ ಅಂತಾ. ದಾವಣಗೆರೆ ಬಳಿಯ ಹೊಸಕುಂದವಾಡದ ನಿವಾಸಿ. ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲಸ ಕಳೆದ ಕೊಂಡವರಲ್ಲಿ ಇವರೂ ಒಬ್ಬರು. ಈ ಸಂಕಷ್ಟದ ನಡುವೆಯೇ ಮತ್ತೊಂದು ಸಂಕಷ್ಟ ಇವರಿಗೆ ಎದುರಾಗಿದೆ.
ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ತನ್ನ ಒಂಬತ್ತು ತಿಂಗಳ ಮನಸ್ವಿ ಎಂಬ ಮಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಗಳಿಗೆ ರೋಗ ನಿರೋಧಕ ಶಕ್ತಿ(COMBINED IMMUNODEFICIENCY) ಇಲ್ಲ. ಹೀಗಾಗಿ ಒಂದು ತಿಂಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ಹತ್ತು ಸಾವಿರ ರೂ. ಬರೀ ಔಷಧಿಗೆ ಖರ್ಚಾಗುತ್ತಿದೆ.
ಮಗುವಿಗೆ BONE MORROW TRONSPLANT ಮಾಡಬೇಕು ವೈದ್ಯರು ಸಲಹೆ ನೀಡಿzರೆ. ಇದಕ್ಕೆ ೨೦ ರಿಂದ ೨೫ ಲಕ್ಷ ರೂಪಾಯಿ ವೆಚ್ಚ ವಾಗಲಿದೆ. ಈಗಾಗಲೇ ಸಂಕಷ್ಟ ದಲ್ಲಿರುವ ಅಣ್ಣಪ್ಪರಿಗೆ ಈ ಹಣವನ್ನು ಜೋಡಿಸುವುದು ಕಷ್ಟವಾಗಿದೆ. ಮಗಳ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿzನೆ. ಹೀಗಾಗಿ ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಹೃದಯರು ನಿಮ್ಮ ಕೈಲಾದ ಸಹಾಯ ಮಾಡಿದರೆ, ತುಂಬಾ ಸಹಾಯವಾಗಲಿದೆ.
ಹೆಚ್ಚಿನ ಮಾಹಿತಿಗೆ ಅಣ್ಣಪ್ಪ ಹೊಸಕುಂದವಾಡ ಫೋನ್ ನಂಬರ್: ೮೬೬೦೬೨೫೦೩೪ರಲ್ಲಿ ಸಂಪರ್ಕಿಸಿ.