೩೬ ಕೇಸ್‌ನಲ್ಲಿ ಬೇಕಾಗಿದ್ದ ರೌಡಿ ಕಾಲಿಗೆ ಪೊಲೀಸರ ಗುಂಡೇಟು..

10

ಬೆಂಗಳೂರು: ಸುಮಾರು ೩೬ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹ ನಡೆಸಿದಾಗ ಆತ್ಮರಕ್ಷಣೆಗಾಗಿ ಗಿರಿನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಹಾರಿಸಿದ ಗುಂಡು ರೌಡಿ ಕಾಲಿಗೆ ತಗುಲಿ ಸಿಕ್ಕಿಬಿದ್ದಿzನೆ.
ನರಸಿಂಹ ಅಲಿಯಾಸ್ ನರಸಿಂಹರೆಡ್ಡಿ (೩೨) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ. ಗಿರಿನಗರ ಪೊಲೀಸ್ ಠಾಣೆಯ ರೌಡಿ ನರಸಿಂಹರೆಡ್ಡಿ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಸರ ಅಪಹರಣ, ಮನೆಗಳ್ಳತನ ಅಪಹರಣ ಪ್ರಕರಣ ಗಳು ಸೇರಿದಂತೆ ೩೬ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಈತನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿನಗರ, ಸಿಕೆ ಅಚ್ಚುಕಟ್ಟು, ಹುಳಿಮಾವು, ಬನಶಂಕರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಅಲ್ಲದೆ ತಮಿಳುನಾಡಿನಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿzರೆ.
ಇಂದು ಬೆಳಗ್ಗಿನ ಜವ ೬.೩೦ರ ಸುಮಾರಿನಲ್ಲಿ ರೌಡಿ ನರಸಿಂಹರೆಡ್ಡಿ ಹೊಸಕೆರೆ ಹಳ್ಳಿಯ ಕೆರೆ ಏರಿ ಬಳಿ ಬರುತ್ತಾನೆಂಬ ಬಗ್ಗೆ ಗಿರಿನಗರ ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ. ತಕ್ಷಣ ಸಬ್‌ಇನ್‌ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ಬಂಧಿಸಲು ಹೋಗಿದೆ. ಪೊಲೀಸರನ್ನು ಕಂಡು ರೌಡಿ ನರಸಿಂಹರೆಡ್ಡಿ ತನ್ನ ಕಾರನ್ನು ತೆಗೆದುಕೊಂಡು ಪರಾರಿಯಾಗಲು ಯತ್ನಿಸಿzನೆ. ತಕ್ಷಣ ಬೆನ್ನಟ್ಟಿ ಕಾರನ್ನು ಅಡ್ಡಗಟ್ಟಿ ಶರಣಾಗುವಂತೆ ತಿಳಿಸಿzರೆ.
ಕಾರಿನಿಂದ ಹೊರಬಂದು ಏಕಾಏಕಿ ಲಾಂಗ್‌ನಿಂದ ಕಾನ್‌ಸ್ಟೇಬಲ್ ಮೋಹನ್ ಅವರ ಮೇಲೆ ಹ ಮಾಡಿzನೆ. ಆ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರ್ ಸುನೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿzರೆ.
ಸಬ್‌ಇನ್ಸ್‌ಪೆಕ್ಟರ್ ಮಾತನ್ನು ಲೆಕ್ಕಿಸದೆ ಮತ್ತೆ ಹಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ರೌಡಿ ನರಸಿಂಹರೆಡ್ಡಿ ಬಲಗಾಲಿಗೆ ತಗುಲಿ ಕುಸಿದುಬಿದ್ದಿzನೆ. ತಕ್ಷಣ ಪೊಲೀಸರು ರೌಡಿ ನರಸಿಂಹರೆಡ್ಡಿ ಯನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿzರೆ.

      ————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182