೩೩ ಮಂಗಗಳಿಗೆ ವಿಷವಿಕ್ಕಿ ಕೊಂದ ಕಿರಾತಕರು…

373

ಶಿವಮೊಗ್ಗ :೩೩ಕ್ಕೂ ಅಧಿಕ ಮಂಗಗಳಿಗೆ ವಿಷ ಹಾಕಿ ಕೊಂದ ಕಿರಾತಕರು ಈಗ ಅರಣ್ಯ ಇಲಾಖೆಯ ವರ ಅತಿಥಿಯಾಗಿರುವ ಘಟನೆ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದೆ.
ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಲ್ಯಾವಿಗೆರೆಯಿಂದ ೩೬ ಮಂಗಗಳನ್ನು ಕೊಂದು ಸಾಗರದ ನೇದರವಳ್ಳಿ ಬಳಿಯ ಕಾಡಿನಲ್ಲಿ ಮಂಗಗಳನ್ನು ಬಿಸಾಡಲು ಬಂದಾಗ ಅರಣ್ಯ ಇಲಾಖೆಯವರು ಐವರು ಆರೋಪಿಗಳನ್ನು ಬಂಧಿಸಿzರೆ.
ಲ್ಯಾವಿಗೆರೆಯ ಅಭಿಷೇಕ್, ಲಂಬೂದರ್, ತ್ಯಾಗರ್ತಿಯ ದಸ್ತಗಿರ್, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳು. ಇವರು ಒಂದು ಟಾಟಾ ಏಸ್‌ನಲ್ಲಿ ಸತ್ತ ಮಂಗಗಳನ್ನು ಎಸೆಯಲು ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿzರೆ. ಉತ್ತರಿಲಾ ಗದೆ ಈ ಐವರು ಆರೋಪಿಗಳು ತಡಬಡಾಯಿಸಿzರೆ.
ನಂತರ ಮಂಗಗಳನ್ನು ಸಾಯಿಸಿದ ವಿಚಾರ ತಿಳಿದು ಬಂದಿದೆ. ೩೩ ಮಂಗಗಳು ಸಾವನ್ನಪ್ಪಿದ್ದು, ೩ ಮಂಗಗಳು ಅಸ್ವಸ್ಥಗೊಂಡಿದ್ದವು. ತಕ್ಷಣ ಚೋರಡಿ ಅರಣ್ಯ ವಲಯದವರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿzರೆ. ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್ ಅವರ ನೇತೃತ್ವದಲ್ಲಿ ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಸ್ವಸ್ಥಗೊಂಡ ಮಂಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಯವರು ಒಂದು ಆಡಿ ಕಾರನ್ನು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದು ಕೊಂಡಿzರೆ. ಐವರು ಮಂಗಗಳನ್ನು ಯಾವ ಕಾರಣಕ್ಕೆ ಕೊಂದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಾಗರ ವನ್ಯಜೀವಿ ವಿಭಾಗದ ಡಿಎಫ್‌ಓ ಮೋಹನ ಕುಮಾರ್ ತಿಳಿಸಿzರೆ.