೨೦ಸಾವಿರ ಮೌಲ್ಯದ ಗಾಂಜಾ ಗಿಡ ಪತ್ತ

421

ಶಿವಮೊಗ್ಗ: ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್‌ಕುಮಾರ್ ಜಿ ಎ, ನಿರ್ದೇಶನದ ಮೇರೆಗೆ ಸಾಗರ ತಾಲ್ಲೂಕು, ಕೆರೆಗz ಗ್ರಾಮದ ದೇವರಾಜ ಎಂಬುವವರಿಗೆ ಸೇರಿದ ಮೆಕ್ಕೆಜೋಳದ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು ರೂ. ೨೦,೦೦೦ ಬೆಲೆ ಬಾಳುವ ೪ ಗಾಂಜ ಗಿಡಗಳನ್ನು ಪತ್ತೆಹಚ್ಚಿ, ವಶಪಡಿಸಿ ಕೊಂಡು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ.
ಈ ಪ್ರಕರಣದ ಆರೋಪಿಯಾದ ದೇವರಾಜ ಬಿನ್ ಮಂಜಪ್ಪ ಪರಾರಿ ಯಾಗಿದ್ದು, ಆರೋಪಿಯನ್ನು ತನಿಖಾ ಸಂದರ್ಭದಲ್ಲಿ ಬಂಧಿಸಬೇಕಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಡಿ.ಎನ್ ಹನುಮಂತಪ್ಪ, ಅಬಕಾರಿ ನಿರೀಕ್ಷಕರು, ಜಾನ್ ಪಿ.ಜೆ, ಅಬಕಾರಿ ಉಪ ನಿರೀಕ್ಷರು ಮತ್ತು ಅಬಕಾರಿ ರಕ್ಷಕರಾದ ರಾಜಮ್ಮ, ಚಂದ್ರಪ್ಪ, ಮುದಾಸಿರ್ ಅಹಮ್ಮದ್, ದೀಪಕ್ ಮಹಬಲೇಶ್ವರ, ಬಸವರಾಜ ಹಾಗೂ ವಾಹನ ಚಾಲಕ ಅರ್ಜುನ್ ಇತರ ಅಬಕಾರಿ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.