೧.೪೦ ಲಕ್ಷ ಕೋಟಿ ವೆಚ್ಚದ ೧೦೧ ರಕ್ಷಣಾ ಉತ್ಪನ್ನ ದೇಶದಲ್ಲೇ ತಯಾರಿ…

474

ನವದೆಹಲಿ: ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಮೂಲಕ ಘಾರತದ ಮೂರು ಸಶಸ್ತ್ರ ಪಡೆಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಒಟ್ಟು ೧ ಲಕ್ಷ ೪೦ ಸಾವಿರ ಕೋಟಿ ರೂ.ಗಳ ಮೆತ್ತದ ೧೦೧ ರಕ್ಷಣಾ ಉತ್ಪನ್ನಗಳನ್ನು ದೇಶದ ತಯಾರಿಸುವ ಮಹತ್ವದ ಘೋಷಣೆ ಹೊರಡಿಸಿದೆ.
ಪ್ರಸಕ್ತ ಹಣಕಾಸು ಸಾಲಿನಲ್ಲಿ ರಕ್ಷಣಾ ಶಸ್ತ್ರಾಸ್ತ್ರಗಳು ಮತ್ತು ಉಪಕರಣ ಗಳನ್ನು ದೇಶೀಯವಾಗಿದ ಉತ್ಪಾದಿ ಸಲು ೫೨,೦೦೦ ಕೋಟಿ ರೂ.ಗಳ ಬಂಡವಾಳ ಮೀಸಲಿಡಲಾಗುವುದು.
ಭಾರತದ ಮೂರು ರಕ್ಷಣಾ ಪಡೆಗಳಿಗೆ ಬೇಕಾಗುವ ಯುದ್ಧ ಟ್ಯಾಂಕ್‌ಗಳು, ಆಸಲ್ಟ್ ರೈಫಲ್‌ಗಳು, ಆರ್ಟಿಲರಿಗನ್‌ಗಳು, ಲಘು ಸಮರ ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳು, ಕ್ಷಿಪಣಿಗಳು, ಸಬ್ ಮರೀನ್‌ಗಳು, ಟಾರ್ಪೆಡೊಗಳು, ರೇಡಾರ್, ಸೋನಾರ್ ಉಪಕರಣ ಗಳು, ದೂರಸಂಪಕ ಸಾಧನಗಳು ಸೇರಿದಂತೆ ಒಟ್ಟು ೧೦೧ ಮಿಲಿಟರಿ ಸಾಮಗ್ರಿಗಳನ್ನು ಮೊದಲ ಹಂತದಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ಒಟ್ಟು ೧ ಕೋಟಿ ೪೦ ಸಾವಿರ ಕೋಟಿ ರೂ.ಗಳಷ್ಟು ವೆಚ್ಚವಾಗುತ್ತದೆ.
ಭೂಸೇನೆ, ವಾಯುಪಡೆ ಮತ್ತು ನೌಕಾದಳಗಳಿಗೆ ಅಗತ್ಯವಾಗಿ ಬೇಕಾಗಿ ರುವ ಅತ್ಯಾಧುನಿಕ ಯದ್ಧಾಸ್ತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಆತ್ಮನಿರ್ಭರ್ ಭಾರತ್ ಯೋಜನೆ ಅಡಿ ದೇಶೀಯ ವಾಗಿಯೇ ಉತ್ಪಾದಿಸುವ ಉಪಕ್ರಮ ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಘೋಷಿಸಿದರು.
ವಿವಿಧ ದೇಶಗಳಿಂದ ಈವರೆಗೆ ಆಮದು ಮಾಡಿಕೊಳ್ಳಲಾಗುತ್ತಿದ್ದ ೧೦೧ ಸೇನಾ ಸಾಮಗ್ರಿಗಳಿಗೆ ನಿರ್ಬಂಧ ವಿಧಿಸಿ ಅವುಗಳನ್ನು ದೇಶದ ತಯಾರಿಸಲಾಗುವುದು. ಇದರಿಂದ ರಕ್ಷಣಾ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ದೊರೆಯುವ ಜೊತೆಗೆ ಹೆಚ್ಚಿನ ಉದ್ಯೋಗ ಸಷ್ಟಿಯಾಗುತ್ತದೆ ಎಂದು ಸಿಂಗ್ ಹೇಳಿದರು.
ಮೊದಲ ಹಂತವಾಗಿ ೧೦೧ ರಕ್ಷಣಾ ಸಾಮಗ್ರಿಗಳಿಗೆ ವಿದೇಶಿ ಅಮದು ದಿಗ್ಬಂಧನ ವಿಧಿಸಲಾಗಿದ್ದು, ಹಂತಹಂತವಾಗಿ ಮತ್ತಷ್ಟು ಯುದ್ಧೋಪಕರಣಗಳನ್ನು ದೇಶೀಯ ವಾಗಿಯೇ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಸಚಿವರು ವಿವರಿಸಿದರು.
ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರಕ್ಷಣಾ ಇಲಾಖೆಗೆ ಮೀಸಲಿಡಬೇಕಾದ ದೇಶೀಯ ಬಂಡವಾಳ ಮತ್ತು ವಿದೇಶಿ ಹೂಡಿಕೆಯನ್ನು ವಿಂಗಡಿಸಿದೆ. ಅದರ ಅನ್ವಯ ಈ ಸಾಲಿನಲ್ಲಿ ದೇಶೀಯ ಉತ್ಪಾದನೆಗಾಗಿ ೫೨,೦೦೦ ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಇರಿಸಲಾ ಗಿದೆ ಎಂದು ಅವರು ತಿಳಿಸಿದರು.
ರಕ್ಷಣಾ ಇಲಾಖೆಯ ಮತ್ತಷ್ಟು ಉತ್ನನ್ನಗಳನ್ನು ಹಂತ ಹಂತವಾಗಿ ದೇಶೀಯವಾಗಿಯೇ ಉತ್ಪಾದಿಸಲಾಗು ವುದು. ಅವುಗಳ ಪಟ್ಟಿಯನ್ನು ಸಿದ್ದಪಡಿಸಿ ಕಾಲಮಿತಿಯೊಳಗೆ ಅವುಗಳ ಉತ್ಪಾದನೆಯನ್ನು ಕಾರ್ಯಗತ ಗೊಳಿಸುವ ಬಗ್ಗೆ ಯೋಜನೆ ರೂಪಿಸಲಾ ಗುವುದು ಎಂದು ಅವರು ತಿಳಿಸಿದರು.
ಆತ್ಮ ನಿರ್ಬರ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಕ್ಷಣಾ ಇಲಾಖೆಯಲ್ಲಿಯೂ ಇವುಗಳಿಗೆ ಆದ್ಯತೆ ನೀಡುವ ಮೂಲಕ ದೇಶೀಯ ಉತ್ಪಾದನೆ ಮತ್ತು ರಕ್ಷಣಾ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಲಾಗುವುದು ಎಂದು ಸಿಂಗ್ ತಿಳಿಸಿದರು.