೧.೧೫ ಲಕ್ಷ ರೂ. ಮೌಲ್ಯದ ಗಾಂಜಾ ಗಿಡ ವಶಕ್ಕೆ

389

ಸಾಗರ : ತಾಲ್ಲೂಕಿನ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ ಗಾಂಜಾ ವಿರುದ್ಧ ದಾಳಿ ನಡೆಸಲಾಗಿದೆ.
ಗೌತಮಪುರ ಗ್ರಾಪಂ ವ್ಯಾಪ್ತಿಯ ಭೈರಾಪುರ ಗ್ರಾಮದ ಕಲ್ಲುಗಡ್ಡೆ ಮಂಜಪ್ಪ ಅವರಿಗೆ ಸೇರಿದ ಜಮೀನಿ ನಲ್ಲಿ ಶುಂಠಿ ಬೆಳೆಯ ಮಧ್ಯೆ ಬೆಳೆದಿದ್ದ ೧೫ ಗಾಂಜಾ ಗಿಡ, ಸಣ್ಣಪ್ಪ ಎಂಬುವ ವರ ಮನೆಯ ಹಿಂಭಾಗ ಬೆಳೆದಿದ್ದ ನಾಲ್ಕು ಗಾಂಜ ಗಿಡ ಸೇರಿದಂತೆ ೧.೧೫ ಲಕ್ಷ ರೂ. ಮಲ್ಯದ ೨೩ ಗಾಂಜ ಗಿಡಗಳನ್ನು ವಶಪಡಿಸಿಕೊಂಡು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದಾಳಿ ಸಂದರ್ಭದಲ್ಲಿ ಆರೋಪಿಗಳು ತಲೆತಪ್ಪಿಸಿಕೊಂಡಿzರೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಉಪ ನಿರೀಕ್ಷಕ ಜನ್ ಪಿ.ಜೆ., ಅಬ್ಕಾರಿ ರಕ್ಷಕರಾದ ರಾಜಮ್ಮ, ಚಂದ್ರಪ್ಪ, ಮುದಾಸಿರ್, ದೀಪಕ್, ಮಹಾಬಲೇಶ್ವರ್, ಬಸವರಾಜ್ ಹಾಗೂ ವಾಹನ ಚಾಲಕ ಅರ್ಜುನ್ ಪಾಲ್ಗೊಂಡಿದ್ದರು.