೧೩ ದಿನ ೮೦೦ ಕಿಮೀ ನಡೆದು ಅಯ್ಯಪ್ಪ ನಿಷ್ಠೆ ತೋರಿದ ಕಟ್ಟೆ ಮಂಜುನಾಥ

431

ತೀರ್ಥಹಳ್ಳಿ : ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕನಾಗಿ ದಕ್ಷತೆ, ಪ್ರಾಮಾಣಿಕತೆಗೆ ಹೆಸರು ವಾಸಿಯಾಗಿ ಜನಮೆಚ್ಚುಗೆ ಗಳಿಸಿದ ಕಟ್ಟೆ ಮಂಜುನಾಥ್ ಕಳೆದ ೧೩ ದಿನಗಳಿಂದ ಹುಂಚದಕಟ್ಟೆಯಿಂದ ಶಬರಿಮಲೈವರೆಗೆ ನಡೆದುಕೊಂಡು ಹೋಗಿ ಪಾದಯಾತ್ರೆಯ ಮೂಲಕ ಭಾನುವಾರ ತಲುಪಿ ಸ್ವಾಮಿ ಅಯ್ಯಪ್ಪ ದರ್ಶನ ಪಡೆದು ಅಯ್ಯಪ್ಪ ಭಕ್ತರಿಗೆ ಮಾರ್ಗದರ್ಶಕರಾಗಿzರೆ. ಕೆಲವು ವರ್ಷಗಳಿಂದ ಕಟ್ಟೆ ಮಂಜುನಾಥ ಹಾಗೂ ಸಂಗಡಿಗರು ಈ ರೀತಿ ಹುಂಚದಕಟ್ಟೆಯಿಂದ ಶಬರಿ ಮಲೈವರೆಗೆ ಪಾದಯಾತ್ರೆ ಮೂಲಕ ದೇವರ ದರ್ಶನ ಪಡೆಯುತ್ತಿದ್ದು, ಈ ಬಾರಿಯೂ ಸಹ ಪಾದಯಾತ್ರೆ ಯಶಸ್ವಿಗೊಳಿಸಿzರೆ. ಕಟ್ಟೆ ಮಂಜುನಾಥ, ತೀರ್ಥಹಳ್ಳಿ ಕಸಬಾ ರಾಜಸ್ವ ನಿರೀಕ್ಷಕರಾಗಿ ಜನಪರ ಸೇವಕರಾಗಿ ಗುರುತಿಸಿಕೊಂಡಿzರೆ. ಕಳೆದ ೨ ವರ್ಷಗಳ ಪ್ರೀತಿಗೆ ಪಾತ್ರರಾಗಿದ್ದವರು. ಮಾರ್ಚ್ ತಿಂಗಳಿಂದ ಪ್ರಾರಂಭವಾದ ಕೋವಿಡ್ -೧೯ರ ರೋಗ ನಿಯಂತ್ರಣ ರೋಗ ಹರಡದಂತೆ ಮುಂಜಗತೆ ಹಾಗೂ ಈ ಕಾರ್ಯಕ್ರಮಗಳಲ್ಲಿ ರಾತ್ರಿ-ಹಗಲು ಶ್ರಮಿಸಿ ಜನರೊಂದಿಗೆ ಸರ್ಕಾರಿ ನಿಷ್ಠಾವಂತ ಸೇವಕರಾಗಿ ಗುರುತಿಸಿಕೊಂಡವರು. ಕಛೇರಿಯಲ್ಲಿ ಸಹ ಕಡತಗಳ ವಿಲೇವಾರಿಗೆ ವಿಳಂಬ ಮಾಡದೇ ತ್ವರಿತ ಕೆಲಸ ನಿರ್ವಹಿಸಿ ಇತರೆ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿzರೆ. ಕೆಲಸ ಒತ್ತಡದ ಮಧ್ಯೆ ಧಾರ್ಮಿಕ ಕಾರ್ಯಗಳಲ್ಲಿ ಗುರುತಿಸಿಕೊಂಡು ಕಳೆದ ೧೩ ದಿನಗಳಿಂದ ಅಯ್ಯಪ್ಪ ದರ್ಶನಕ್ಕೆ ತೀರ್ಥಹಳ್ಳಿಯಿಂದ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆಯುವುದು ಕಷ್ಟಕರವಾದ ವಿಷಯದಲ್ಲಿ ಸೈ ಎನಿಸಿಕೊಂಡಿzರೆ.