೧೨೫ವರ್ಷ ಕಳೆದರೂ ಕ್ಷಕಿರಣ ತನ್ನ ಮಹತ್ವ ಕಳೆದುಕೊಂಡಿಲ್ಲ: ನಾಗೇಶ್

396

ಸಾಗರ : ಕ್ಷಕಿರಣ ಕಂಡು ಹಿಡಿದು ೧೨೫ ವರ್ಷಗಳು ಕಳೆದಿದೆ. ಅಂದಿನಿಂದ ಇಂದಿನವರೆಗೂ ಕ್ಷಕಿರಣ ಕಿಂಚಿತ್ ತನ್ನ ಮಹತ್ವ ಕಳೆದುಕೊಂಡಿಲ್ಲ ಎಂದು ಪತ್ರಕರ್ತ ಜಿ.ನಾಗೇಶ್ ತಿಳಿಸಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ರಾಜ್ಯ ಮೆಡಿಕಲ್ ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ ಅಸೋಶಿಯೇಷನ್ ಜಿ ಶಾಖೆ ಯಿಂದ ಆಯೋಜಿಸಿದ್ದ ೧೨೫ನೇ ವರ್ಷದ ಕ್ಷಕಿರಣ ಅನ್ವೇಷಣಾ ದಿನದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೧೮೯೫ರ ನವೆಂಬರ್ ೮ರಂದು ವಿಲ್ಹೆಮ್ ರಾಂಟೆಜನ್ ಕ್ಷಕಿರಣವನ್ನು ಕಂಡು ಹಿಡಿದರು. ಸಂಶೋಧನೆಯಲ್ಲಿ ತೊಡಗಿದ್ದ ರಾಂಟೆಜನ್ ಅವರಿಗೆ ಹೊಸ ತರಂಗವೊಂದು ಸೃಷ್ಟಿಯಾಗಿದ್ದು ಅರಿವಿಗೆ ಬಂದಿದೆ. ಹೊಸ ತರಂಗದ ಹೆಸರು, ಬಳಕೆಯ ವಿಧಾನ ಅವರಿಗೆ ತಿಳಿಯದೆ ಹೋದದ್ದರಿಂದ ಆ ಕ್ಷಣದಲ್ಲಿ ಎಕ್ಸ್-ರೇಸ್ ಎಂದು ನಾಮಕರಣ ಮಾಡಿದರು. ಅಂದಿನಿಂದ ಇಂದಿನವರೆಗೂ ಕ್ಷ-ಕಿರಣ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳು ನಡೆದಿದೆ. ಆದರೆ ರಾಂಟೆಜನ್ ಕಂಡು ಹಿಡಿದ ಎಕ್ಸರೇ ತನ್ನ ವಿಶಿಷ್ಟತೆಯನ್ನು ಅಂದಿನಿಂದ ಇಂದಿನವರೆಗೂ ಕಾಯ್ದುಕೊಂಡು ಬಂದಿದೆ ಎಂದು ಹೇಳಿದರು.
ಯುವ ವಿeನಿ ರೋಹಿತ್ ಅವರನ್ನು ಸನ್ಮಾನಿಸಿ ಮಾತನಾಡಿದ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಧ್ಯಕ್ಷ ಮಾ.ಸ. ನಂಜುಂಡಸ್ವಾಮಿ, ಕ್ಷ-ಕಿರಣ ತಂತ್ರeನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವೆ ಒಂದು ತುತ್ತು ಅನ್ನ ತಿನ್ನುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಕ್ಷ-ಕಿರಣ ಸಂಶೋಧಿಸಿದ ವಿಲ್ಹೆಮ್ ರಾಂಟೆಜನ್. ೧೨೫ ವರ್ಷಗಳ ಹಿಂದೆ ರಾಂಟೆಜನ್ ಕಂಡು ಹಿಡಿದ ಕ್ಷ-ಕಿರಣ ತಂತ್ರeನ ಇಂದಿಗೂ ಭಾರತೀಯ ವೈದ್ಯಕೀಯ ಪದ್ದತಿಯನ್ನು ತನ್ನ ವಿಶೇಷತೆಯನ್ನು ಉಳಿಸಿಕೊಂಡು ಬಂದಿದೆ. ಈ ಸಂದರ್ಭದಲ್ಲಿ ಯುವ ವಿeನಿ ರೋಹಿತ್ ಅವರ ಸಾಧನೆ ಗುರುತಿಸಿ ಸನ್ಮಾನಿಸುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ವೈ.ಮೋಹನ್ ಮಾತನಾಡಿ, ಕ್ಷಕಿರಣ ವಿಭಾಗದಲ್ಲಿ ಕೆಲಸ ಮಾಡುವ ಅಧಿಕಾರಿ ನೌಕರರು ಹೆಚ್ಚು ಜಗತೆಯಿಂದ ಕೆಲಸ ಮಾಡಬೇಕು. ಕ್ಷಕಿರಣ ನಿರಂತರ ಪ್ರವಹಿಸಿದರೆ ಚರ್ಮದ ಕ್ಯಾನ್ಸರ್ ಸೇರಿದಂತೆ ಬೇರೆಬೇರೆ ಕಾಯಿಲೆ ಸಹ ಬರುತ್ತದೆ. ಆದರೂ ಮನುಷ್ಯನ ಮೂಳೆ ಮುರಿತ, ಸೋಂಕು, ದೇಹದೊಳಗಿನ ಗಾಯ ಕಂಡು ಹಿಡಿಯಲು ಕ್ಷಕಿರಣ ಅತ್ಯುಪಯುಕ್ತ ಎಂದರು.
ಹಿರಿಯ ತಜ್ಞ ಡಾ. ಸುರೇಶ್ ಕ್ಷಕಿರಣ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು. ಯುವ ವಿeನಿ ಹೊಂಗಿರಣ ಶಾಲೆಯ ಪ್ರಾಚಾರ್ಯ ರೋಹಿತ್ ಅವರನ್ನು ಸನ್ಮಾನಿಸಲಾಯಿತು. ಅಸೋಷಿಯೇಶನ್ ಜಿಧ್ಯಕ್ಷ ಎಸ್. ನಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ಪರಮೇಶ್ವರಪ್ಪ, ಡಾ. ನಾಗೇಂದ್ರಪ್ಪ, ಜುಬೇದಾ ಎಂ. ಅಲಿ, ಸಿzಚಾರಿ, ಶಾಂತರಾಜ್ ಇನ್ನಿತರರು ಹಾಜರಿದ್ದರು.
ಅಂಜನಾ ಪ್ರಾರ್ಥಿಸಿದರು. ರಾಜಶೇಖರ್ ಎಚ್. ಇಳಿಗೇರ್ ಸ್ವಾಗತಿಸಿದರು. ರವಿ ಆರ್.ಎನ್. ವಂದಿಸಿದರು. ಅನಿಲ್ ವಲೇರಿಯನ್ ಡಿಸೋಜ ನಿರೂಪಿಸಿದರು.