ಹೋರಾಟ ಮಾಡದೆ ಯುದ್ದ ಗೆಲ್ಲಲು ಸಾಧ್ಯವಿಲ್ಲ

475

ಶಿವಮೊಗ್ಗ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಕರೆಕೊಟ್ಟಿರುವ ಮೇರೆಗೆ ಕಳೆದ ೭ ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ನಡೆಯುತ್ತಿರುವ ಎನ್ ಹೆಚ್ ಎಂ ಗುತ್ತಿಗೆ ನೌಕರರ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಹೇಗೆ ನಡೆಸ ಬೇಕೆಂಬ ಕುರಿತು ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ನೇತೃತ್ವ ದಲ್ಲಿ ನಗರದ ಸರ್ಕಾರಿ ಭವನದಲ್ಲಿ ಸಭೆ ನಡೆಸಲಾಯಿತು.
ಎ ಜಿಗಳಿಂದ ೮೦-೧೦೦ ಜನ ಸಂಘದ ಸದಸ್ಯರು ಭಾಗವಹಿಸಿದ್ದು ಸಭೆಯಲ್ಲಿ ಎಲ್ಲರ ಅಳಲು ಒಂದೇ ಆಗಿತ್ತು. ಅದೇನಪ್ಪ ಅಂದರೆ ನೋಟೀಸ್ ನೀಡದಂತೆ, ಕೆಲಸದಿಂದ ತೆಗೆಯದಂತೆ ಅಧಿಕಾರಿಗಳಿಗೆ ಸೂಚಿಸು ವಂತೆ ಆಯಾ ಜಿ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು.
ಎಂಎಲ್‌ಸಿ ಆಯನೂರು ಮಂಜುನಾಥ್ ಮಾತನಾಡಿ, ಯಾರಿಗೋಸ್ಕರ ಹೋರಾಟ ಮಾಡುತಿ ದ್ದೀರಿ ನಿಮಗೆ ಒಳ್ಳೆಯದಾಗಲಿ ಎಂದು ಧರಣಿ ಕುಳಿತ್ತಿದ್ದೀರಿ. ಒಳ್ಳೆಯದಾದರೆ ನಿಮಗೆ ಆಗುತ್ತದೆ. ಹೋರಾಟದಲ್ಲಿ ಎದೆಗುಂದಬಾರದು. ಅಡಚಣೆ ನೂರೆಂಟು ಬರಬಹುದು ಎಂದರು.
ಕೊರೋನದಿಂದಾಗಿ ಅಧಿಕಾರಿ ಗಳೊಂದಿಗೆ ಸಂಪೂರ್ಣ ಸಭೆ ನಡೆದಿಲ್ಲ. ಎನ್ ಹೆಚ್ ಎಂ ಗುತ್ತಿಗೆ ನೌಕರರ ವ್ಯಾಪ್ತಿ ದೊಡ್ಡದಿದೆ. ಡಾ|ಅರುಂಧತಿ ನೇತೃತ್ವದಲ್ಲಿ ಸಮಿತಿ ರಚಿಸಿ ಎ ರಾಜ್ಯದ ವರದಿ ತರಿಸಲಾಗುತ್ತಿದೆ. ಎನ್ ಹೆಚ್ ಎಂನ ವರದಿ ಅಧ್ಯಯನ ಮಾಡಲು ಐಎಎಸ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಈಗ ಸರ್ಕುಲರ್ ಬಂದಿದೆ. ಅದು ನೋಟಿಫಿಕೇಷನ್ ಮಾಡಬೇಕಿದೆ. ನಂತರ ನಿಮ್ಮ ಬೇಡಿಕೆ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ವಿವರಿಸಿದರು.
ಅಧಿಕಾರಿಗಳು ನೋಟಿಫಿಕೇಷನ್ ಕೊಟ್ಟು ಕೆಲಸದಿಂದ ತೆಗೆಯದಂತೆ ಹೇಳಿ ಎಂದು ನಿಮ್ಮ ಭಾಷಣದಲ್ಲಿ ಕೇಳಿದೆ. ಎದುರಾಳಿ ಆಯುಧನೇ ಹಿಡಿಯ ಬಾರದು. ನಾನು ಯುದ್ಧ ಗೆಲ್ಲಬೇಕೆಂಬ ಬೇಡಿಕೆ ನಿಮ್ಮದಾಗಿದೆ. ಸರ್ಕಾರ ಏನು ಬೇಕಾದರೂ ಮಾಡಬಹುದು. ಆದರೆ ನೀವು ಸಂಘಟನೆಯಲ್ಲಿ ಒಂದಾಗ ಬೇಕು ಸಂಘಟನೆಯಿಂದ ಬಲಿಷ್ಠವಾಗಿ ರಬೇಕು ಎಂದು ಕರೆ ನೀಡಿದರು.
೧೪,೬೭೫ ಜನ ಅತಿಥಿ ಉಪನ್ಯಾಸಕರ ಪರವಾಗಿ ಹೋರಾಟ ಮಾಡಿದೆ. ಸದನದಲ್ಲಿ ಬಾವಿಗಳಿದು ಹೋರಾಟ ಮಾಡಿದೆ. ಸಭಾಪತಿಗಳು ಸದನದಿಂದ ಹೊರಗೆ ಹಾಕಬಹು ದಿತ್ತು. ಪಕ್ಷ ಸರ್ಕಾರಕ್ಕೆ ಮುಜುಗರ ಮಾಡಿದ ಕಾರಣಕ್ಕೆ ಉಚ್ಚಾಟನೆ ಮಾಡಬಹುದಿತ್ತು. ಆದರೆ ಸಿಎಂ ಮೇಲೆ ನನಗೆ ನಂಬಿಕೆ ಇದ್ದ ಕಾರಣ ನಾನು ಅವರಿಗೆ ಮನವೊಲಿಸಿ ಅತಿಥಿ ಉಪನ್ಯಾಸಕರ ಮೂರು ತಿಂಗಳ ಸಂಬಳ ಬಿಡುಗಡೆ ಆಗಿದೆ. ಹಾಗೆ ನಿಮ್ಮ ಹೋರಾಟ ಗಟ್ಟಿ ಇರಬೇಕು ಎಂದರು.
೩೦ ಸಾವಿರ ಜನ ಮುಷ್ಕರ ಮಾಡಿದರೆ ಸರ್ಕಾರದ ವ್ಯವಸ್ಥೆ ಅಲ ಕಲ ಆಗಬೇಕಿತ್ತು. ಆದರೆ ಆ ಸ್ಥಿತಿ ಯಾಕೆ ಆಗಿಲ್ಲ. ಎ ನಿಮ್ಮವರೆ ಕೈಜೋಡಿಸಿರಬೇಕೆಂಬ ಅನುಮಾನವಿದೆ. ಕೇವಲ ನೋಟಿಸ್ ಅಲ್ಲ ನಿಮ್ಮನ್ನ ಬಂಧಿಸುವ ಕೆಲಸ ನಡೆಯಬೇಕಿತ್ತು ಎಂದರು.
ನೀವು ಹೇಗೆ ಹೋರಾಡುತ್ತೀರೋ ಅದರ ಮೇಲೆ ನಿಮ್ಮ ಫಲಿತಾಂಶ ನಿಂತಿದೆ. ಕೆಲಸ ಯಾರಾದರೂ ಕಳೆದುಕೊಂಡರೆ ಸರ್ಕಾರ ೩೦ ಸಾವಿರ ಜನರನ್ನ ತೆಗೆದು ವ್ಯವಸ್ಥೆಯನ್ನ ನಿಭಾಯಿಸಲು ಸಾಧ್ಯವಿಲ್ಲ. ಒಮ್ಮೆ ನಿಮ್ಮನ್ನ ಕೆಲಸದಿಂದ ಕಳೆದುಕೊಂಡರೆ ಸಂಘ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಮ್ಮ ೧೪ನೇ ಬೇಡಿಕೆಯಲ್ಲಿ ಕೆಲಸದಿಂದ ತೆಗೆಯಲಾದ ನೌಕರರನ್ನ ಸೇರಿಸಿ ಕೊಳ್ಳಬೇಕೆಂಬ ಮತ್ತೊಂದು ಬೇಡಿಕೆ ನಿಮ್ಮದಾಗಬೇಕು ಎಂದು ಧೈರ್ಯ ತುಂಬಿದರು.