ಹೊಸ ಕೊರೊನಾ  ರೂಪಾಂತರಿ ಪತ್ತೆ: ಆತಂಕ

51
ನವದೆಹಲಿ: ಕೋವಿಡ್ ಸೋಂಕಿ ನಲ್ಲಿ ಈವರೆಗಿನ ಎಲ್ಲಾ ರೂಪಾಂತರಿಗಳಿಗಿಂತಲೂ ಭಿನ್ನವಾದ, ತತಕ್ಷಣಕ್ಕೆ ಹಾಗೂ ವೇಗವಾಗಿ ಪ್ರಸರಿಸುವ ಹೊಸ ರೂಪಾಂತರಿ ಕೊರೊನಾ ದಕ್ಷಿಣ ಆಫ್ರಿಕಾ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಹಿನ್ನೆಲೆಯಲ್ಲಿ ಕಟ್ಟಚ್ಚರ ವಹಿಸಿದ್ದು. ಮುಜಂಗ್ರತೆಗಾಗಿ ವಿಶ್ವಸಂಸ್ಥೆ ತುರ್ತು ಸಭೆ ಕರೆದಿದೆ.
ಬಿ ೧.೧.೫೨೯ ಎಂದು ಸಂಕೇತಿಸ ಲಾದ ಹೊಸ ರೂಪಾಂತರಿ ಕೊರೊನಾ ಬೋಸ್ಟಾವಾದಲ್ಲಿ ೩, ದಕ್ಷಿಣ ಆಫ್ರಿಕಾದಲ್ಲಿ ೬, ಹಾಂಕ್‌ಕಾಂಗ್‌ನಲ್ಲಿ ೨ ಪ್ರಕರಣಗಳು ನಿನ್ನೆ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದ ಮೂರು ಪ್ರಾಂತ್ಯ ಗಳಲ್ಲಿ ಕಡಿಮೆ ಅವಧಿಯಲ್ಲಿ ಒಟ್ಟು ೨೨ ಪ್ರಕರಣಗಳು ಕಂಡು ಬಂದಿವೆ.
ಈ ಸೋಂಕು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾ ಗಿತ್ತು, ಲಸಿಕೆಗೂ ನಿಲುಕುವುದಿಲ್ಲ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾದ ಪ್ರೋಫೆಸರ್ ಟುಲಿಯೋ ಡೆ ಒಲಿವೈರ ಹೊಸ ಸೋಂಕಿನ ಬಗ್ಗೆ ಮಾಹಿತಿ ನೀಡಿದ್ದು, ನವ ರೂಪಾಂತರಿ ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ ವಿಭಿನ್ನವಾಗಿದೆ ಮತ್ತು ಅಪಾಯಕಾರಿ ಯಾಗಿದೆ ಎಂದು ಎಚ್ಚರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಹ್ಲ ಅವರು ಹೊಸ ಮಾದರಿ ಸೋಂಕು ಹರಡುತ್ತಿರುವ ವೇಗಕ್ಕೆ ಆತಂಕ ವ್ಯಕ್ತ ಪಡಿಸಿದ್ದಾರೆ.
೧ನೇ ಮತ್ತು ೨ನೇ ಅಲೆಯಲ್ಲಿ ಕಂಡು ಬಂದ ಸೋಂಕುಗಳಿಂತ ಬಿ ೧.೧.೫೨೯ ಸೋಂಕು ಹತ್ತು ಪಟ್ಟು ವೇಗವಾಗಿ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಸ್ತುತ ಲಭ್ಯ ಇರುವ ಲಸಿಕೆಗಳು ಹೊಸ ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ.
ವಿಶ್ವಸಂಸ್ಥೆ ಮುಂಜಗೃತೆ:
ಹೊಸ ಸೋಂಕು ಪತ್ತೆಯಾದ ೬ ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ಬ್ರಿಟನ್ ತಾತ್ಕಾಲಿಕ ಕಡಿವಾಣ ಹಾಕಿದೆ. ಬೋಸ್ಟವಾನ, ಜಿಂಬಾಂಬೆ ಮೋಜಬಿಕ್ಯೂ, ನಂಬಿಯಾ, ಇಸ್ಟವಾನಿ, ದಕ್ಷಿಣ ಆಫ್ರಿಕಾ, ಲೆಸೋಥೋ ರಾಷ್ಟ್ರಗಳ ವಿಮಾನಗಳಿಗೆ ತಡೆ ನೀಡಲಾಗಿದೆ.
ತುರ್ತಾಗಿ ರೂಪಾಂತರಿಯ ಗುಣಲಕ್ಷಣಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಲಸಿಕೆ ಯಲ್ಲಿ ಮಾರ್ಪಡಿಸಬೇಕಾದ ಅಂಶಗಳ ಕುರಿತು ಚರ್ಚೆಗಳಾಗಬೇಕು ಎಂದು ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ. ಹೊಸ ಸೋಂಕಿನ ಕುರಿತು ಚರ್ಚಿಸುವ ಸಲುವಾಗಿ ತಾಂತ್ರಿಕ ಸಮಿತಿಯ ತುರ್ತು ಸಭೆ ಇಂದು ಕರೆಯಲಾಗಿತ್ತು.
ದಕ್ಷಿಣ ಆಫ್ರಿಕಾದಿಂದ ಹಾಂಕಾಂಗ್‌ಗೆ ಆಗಮಿಸಿದ ವ್ಯಕ್ತಿಯೊಬ್ಬನಲ್ಲಿ ಹೊಸ ಸೋಂಕು ಪತ್ತೆ ಯಾಗಿದೆ. ಆತ ತಂಗಿದ್ದ ಕೊಠಡಿಯ ಸುತ್ತ ಮುತ್ತಲಿನ ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಭಾರತದಲ್ಲೂ ಆರೋಗ್ಯ ಸಚಿವಾಲಯ ಸರಣಿ ಸಭೆಗಳನ್ನು ನಡೆಸಿ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ರವಾನಿಸಿದೆ. ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಅವರು, ಸೋಂಕು ಪತ್ತೆಯಾಗಿರುವ ಮೂರು ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ ಅನುಮಾನ್ಪದ ಪ್ರಕರಣಗಳ ಮಾದರಿಯನ್ನು ಹೆಚ್ಚಿನ ತನಿಖೆಗೆ ಅತ್ಯಾಧುನಿಕ ಲ್ಯಾಬ್‌ಗೆ ರವಾನೆ ಮಾಡುವಂತೆ ಸೂಚಿಸಿದ್ದಾರೆ.
ಇನ್ನೂ ಮುಂದೆ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಬೇಕು. ಆರೋಗ್ಯ ತಪಾಸಣೆ, ಕಾಲ ಕಾಲಕ್ಕೆ ಅವರ ಆರೋಗ್ಯ ಪರೀಕ್ಷೆಯನ್ನು ಕಡ್ಡಾಯ ವಾಗಿ ಮಾಡಬೇಕು. ಹೊಸ ರೂಪಾಂತರದ ಗುಣ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಸಚಿವಲಾಯಕ್ಕೆ ತಿಳಿಸಬೇಕು ಎಂದು ಸೂಚಿಸಿದ್ದಾರೆ.