ಹೊನ್ನಾಳಿ ಕ್ಷೇತ್ರದ ಕ್ರಿಯಾಶೀಲ ಕೊರೋನಾ ವಾರಿಯರ್ ರೇಣುಕಾಚಾರ್ಯರ ಬೆನ್ನೇರಿದ ಮಹಾಮಾರಿ ಕರೋನಾ

431

ಹೊನ್ನಾಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಕ್ರಿಯಾಶೀಲ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್ ಪರೀಕ್ಷೆಗೆ ಒಳಗಾದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿzರೆ.
ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ ಎಂದು ರೇಣುಕಾಚಾರ್ಯ ಅವರು ವಿನಂತಿಸಿಕೊಂಡಿದ್ದಾರೆ.
ಸುಮಾರು ಸತತ ೯ ಬಾರಿ ಕೊರೋನ ಪರೀಕ್ಷೆ ಮಾಡಿಸಿದಾಗಲೂ ಅವರಿಗೆ ನೆಗೆಟಿವ್ ಬಂದಿತ್ತು. ಆದರೆ ಇದೀಗ ೧೦ನೇ ಬಾರಿ ಪಾಸಿಟಿವ್ ಎಂದು ವರದಿ ಬಂದಿದೆ.
CBC, RFT, LFT, ECG,, ಸಿಟಿ ಸ್ಕ್ಯಾನ್, ಡಿ ಡೈಮರ್,LDH, Serum Ferricin ಹಾಗು CRP ಈ ಎ ಪರೀಕ್ಷೆಗಳನ್ನು ವೈದ್ಯರು ಮಾಡಿದ್ದು ಯಾವುದೇ ತೊಂದರೆ ಇಲ್ಲ ಎಂದು ರೇಣುಕಾಚಾರ್ಯ ತಿಳಿಸಿzರೆ.
ಕಳೆದ ಆರು ತಿಂಗಳುಗಳಿಂದ ಕೋವಿಡ್೧೯ರ ವಿರುದ್ಧ ನಾನು ಸಹ ಒಬ್ಬ ಕೊರೊನಾ ವಾರಿಯರ್ ಆಗಿ ನಿರಂತರ ಜನಸೇವೆ ಮಾಡುತ್ತಿದ್ದು, ನನ್ನ ಮತ ಕ್ಷೇತ್ರದ ಬಂಧುಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದ್ದಾರೆ
ನಿಮ್ಮೆಲ್ಲರ ಹಾರೈಕೆ ಹಾಗು ಆಶೀರ್ವಾದದಿಂದ ನಾನು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ, ನನ್ನ ಆರೋಗ್ಯದ ಜೊತೆಗೆ ನಿಮ್ಮೆಲ್ಲರ ಯೋಗಕ್ಷೇಮವು ನನಗೆ ಅಷ್ಟೇ ಮುಖ್ಯವಾಗಿದೆ ಎಂದಿರುವ ರೇಣುಕಾಚಾರ್ಯ ಅವರು, ಪ್ರತಿಯೊಬ್ಬರೂ ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯುವಂತೆ ಮನವಿ ಮಾಡಿದ್ದಾರೆ.