ಹೊನ್ನಾಳಿಯಲ್ಲೂ ಇಲಾಖಾಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲು ರಕ್ಷಣಾ ವೇದಿಕೆ ಮನವಿ

278

ಹೊನ್ನಾಳಿ: ಪಟ್ಟಣ ಪಂಚಾಯಿತಿ ವ್ಯಪ್ತಿಗೆ ಒಳಪಡುವ ಹೊನ್ನಾಳಿ ನಗರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಶ್ರೀನಿವಾಸ ಅವರು ತಾಹಶಿಲ್ದಾರ್ ಬಸವನಗೌಡ ಕೊಟುರು ಅವರಿಗೆ ಮನವಿ ಮಾಡಿದರು.
ದಾವಣಗೆರೆ ಜಿ ವ್ಯಾಪ್ತಿಗೆ ಸಭಂದಿಸಿದಂತೆ ನಡೆಸುತ್ತಿರುವ ಜನಸಂಪರ್ಕ ಸಭೆಯ ರೀತಿಯಲ್ಲಿ ತಾಲ್ಲೂಕು ಆಡಳಿತದೊಂದಿಗೆ ಜಿಲಾಧಿಕಾರಿ ಮಹಾಂತೇಶ್ ಬಿಳಗಿಯವರು ಸಾರ್ವಜನಿಕರ ಕುಂದೂ ಕೊರತೆಗಳ ಸಭೆ ನಡೆಸಬೆಕೆಂದು ತಿಳಿಸಿದರು.
ಹೊನ್ನಾಳಿಯಲ್ಲಿ ಸಾರ್ವಜನಿಕ ಸಭಂದಿಸಿದಂತೆ ಮೂಲಭೂತ ಸೌಲಭ್ಯಗಳ ಕುಂದೂಕೊರತೆ ಸಭೆ ಅನೇಕ ದಿನಗಳಿಂದ ನಡೆಯದೆ ಇರುವ ಕಾರಣ ತಹಶಿಲ್ದಾರರು ಸೇರಿದಂತೆ ತಾಲ್ಲೂಕಿನ ಎಲ್ಲ ಇಲಾಖೆ ಅಧಿಕಾರಿಗಳ ಸಮ್ಮುಕದಲ್ಲಿ ಸಭೆ ನಡೆಸುವಂತೆ ಮನವಿ ಅವರು ಮಾಡಿರುವರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರರು ಏ.೧೭ ರಂದು ಸೊರಟೂರಿನಲ್ಲಿ ಜಿಲಾಧಿಕಾರಿಗಳ ಗ್ರಾಮ ವಾಸ್ಥವ್ಯವಿದೆ. ಬರುವ ಮೇ ತಿಂಗಳಿನಲ್ಲಿ ಸ್ವಾತಂತ್ಯದ ಸುವರ್ಣ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ವಿವಿಧ ಕಾರ್ಯಕ್ರಮ ಗಳು ನಡೆಯಲ್ಲಿರುವುದರಿಂದ ಈ ಸಂದರ್ಭದಲ್ಲಿ ಹೊನ್ನಾಳಿ ನಗರದ ಜನಸ್ಪಂದನಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಜಿಲಾಧಿಕಾರಿಗಳೊಂದಿ ಚರ್ಚಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕತ್ತಿಗೆ ನಾಗರಾಜ್, ದಿವಾಕರ್, ಮಂಜು, ರಾಕೇಶ್, ಹಳದಪ್ಪ, ರಜಕ್, ಯೊಗೇಶ್ ಮತ್ತಿತರರು ಉಪಸ್ಥಿತರಿದ್ದರು.