ಹೂವಿನ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಪಾಲಿಕೆ ಕಾಂಗ್ರೆಸ್ ಸದಸ್ಯರ ಆಗ್ರಹ

271

ಶಿವಮೊಗ್ಗ : ನಗರದ ಖಾಸಗಿ ಬಸ್ ನಿಲ್ದಾಣ ಪಕ್ಕದಲ್ಲಿ ತಾತ್ಕಾಲಿಕ ವಾಗಿ ನಿರ್ಮಿಸಿದ ಶಿವಪ್ಪನಾಯಕ ಹೂವಿನ ಮಾರುಕಟ್ಟೆಗೆ ಮೂಲ ಭೂತ ಸೌಲಭ್ಯ ಕಲ್ಪಿಸಬೇಕೆಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿzರೆ.
ವ್ಯಾಪಾರದ ಸ್ಥಳದಲ್ಲಿ ಮೂಲ ಸೌಕರ್ಯ ಕೊರತೆಯಿದೆ ಎನ್ನುವ ವ್ಯಾಪಾರಿಗಳ ದೂರಿನ ಮೇರೆಗೆ ಇಂದು ಪಾಲಿಕೆಯ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲವು ವ್ಯಾಪಾರಿಗಳು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪಾಲಿಕೆ ಸದಸ್ಯರಿಗೆ ವಿವರಿಸಿದರು. ಶಿವಪ್ಪನಾಯಕ ವೃತ್ತದಲ್ಲಿದ್ದ ಹೂವಿನ ಮಾರುಕಟ್ಟೆ ಜಗದಲ್ಲಿ ಬಹುಮಹಡಿ ವಾಹನ ತಂಗುದಾಣ ನಿರ್ಮಾಣವಾಗುತ್ತಿರುವ ಹಿನ್ನೆಲೆ ಯಲ್ಲಿ ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ಖಾಸಗೀ ಬಸ್ ನಿಲ್ದಾಣದ ಆವರಣದಲ್ಲಿರುವ ವಾಹನ ನಿಲುಗಡೆ ಜಗದಲ್ಲಿ ಹೂವಿನ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್ಡ್‌ಗಳನ್ನು ನಿರ್ಮಿಸಿಕೊಟ್ಟಿದ್ದು, ಸರಿಯಾದ ವಿದ್ಯುತ್ ವ್ಯವಸ್ಥೆ ಇರುವುದಿಲ್ಲ. ಕುಡಿಯುವ ನೀರು ಇಲ್ಲ, ಗಾಳಿ ಬೆಳಕಿನ ಕೊರತೆಯಿದೆ. ಶೌಚಾಲಯ ವ್ಯವಸ್ಥೆಯಿಲ್ಲ ಎಂದು ವ್ಯಾಪಾರಿಗಳು ತಿಳಿಸಿzರೆ.
ವ್ಯಾಪಾರಕ್ಕೆ ಗ್ರಾಹಕರು ಬರುತ್ತಿಲ್ಲ. ಯಾಕೆಂದರೆ ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಅನೇಕರು ಗಾಂಧಿಬಜರ್ ಮತ್ತು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ತಾತ್ಕಾಲಿಕ ಮಾರುಕಟ್ಟೆಗೆ ಯಾವ ಗ್ರಾಹಕರು ಬರುತ್ತಿಲ್ಲ. ಮೊದಲು ಬೀದಿ ಬದಿಯ ಹೂವಿನ ವ್ಯಾಪಾರವನ್ನು ನಿಲ್ಲಿಸಿ ಮತ್ತು ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಎಂಬುದು ವ್ಯಾಪಾರಸ್ಥರ ಬೇಡಿಕೆಯಾಗಿದೆ.
ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಅವರ ಗಮನಕ್ಕೆ ತಂದಾಗ ಒಂದು ವಾರದೊಳಗೆ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡುವ ಭರವಸೆ ಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಮಾತನಾ ಡಿದ ಹೂವಿನ ಮಾರುಕಟ್ಟೆ ವ್ಯಾಪಾ ರಸ್ಥರ ಸಂಘದ ಅಧ್ಯಕ್ಷರಾದ ಗೋವಿಂದರಾಜು ರವರು ಇದು ತಾತ್ಕಾಲಿಕ ವ್ಯವಸ್ಥೆ, ಪಾಲಿಕೆಯ ವತಿಯಿಂದ ಈ ಮಳಿಗೆಗಳಿಗೆ ಬಾಡಿಗೆ ವಿಧಿಸಿಲ್ಲ. ವಿದ್ಯುತ್ ಬಿಲ್ ಕೂಡ ನಾನೇ ವೈಯುಕ್ತಿಕವಾಗಿ ಕಟ್ಟಿದ್ದೇನೆ. ವ್ಯಾಪಾರಸ್ಥರು ಸ್ವಲ್ಪ ತಾಳ್ಮೆವಹಿ ಸಬೇಕು. ತ್ಯಾಗ ಕೂಡ ಮಾಡ ಬೇಕಾಗುತ್ತದೆ. ಯಾಕೆಂದರೆ ೧ ವರೆ ವರ್ಷಗಳ ಬಳಿಕ ನೂತನ ಮಲ್ಟಿ ಶಾಪಿಂಗ್ ಕಾಂಪ್ಲೆಕ್ಸ್ ಆದ ನಂತರ ಹೂವಿನ ವ್ಯಾಪಾರಿಗಳಿಗೆ ಅದೇ ಜಗದಲ್ಲಿ ಮಳಿಗೆ ಕೊಡುವ ಲಿಖಿತ ಭರವಸೆಯನ್ನು ಪಾಲಿಕೆ ನೀಡಿದೆ. ತಾತ್ಕಾಲಿಕ ಶೆಡ್ಡ್‌ನಲ್ಲಿ ಸ್ವಲ್ಪ ಮಟ್ಟಿನ ಕೊರತೆಯಿರುವುದು ನಿಜ. ಹಬ್ಬ ಕಳೆದ ಬಳಿಕ ವ್ಯಾಪಾರಿಗಳ ಕೋರಿಕೆ ಯಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮೇಹಕ್ ಷರೀಫ್, ಶಾಮೀರ್ ಖಾನ್, ಆರ್.ಸಿ. ನಾಯಕ್, ರಂಗನಾಥ್ ಇನ್ನಿತರರು ಉಪಸ್ಥಿತರಿದ್ದರು.