ಹಸಿದ ಹೊಟ್ಟೆಗೆ ಆಸರೆಯಾಗುತ್ತಿರುವ ಡಿಕೆಶಿ ಉಚಿತ ಕ್ಯಾಂಟೀನ್..

478

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಶಿವಮೊಗ್ಗ: ಹೋರಾಟಕ್ಕೂ ಸೈ; ಜನ ಸೇವೆಗೂ ಸೈ ಎಂಬಂತೆ ಸದಾ ಒಂದು ಹೆಜ್ಜೆ ಮುಂದಿರುವ ಡಿಕೆಶಿ ಅಭಿಮಾನಿಗಳು ಈಗಾಗಲೇ ಕೊರೋನಾ ಲಾಕ್‌ಡೌನ್‌ನಿಂದಾಗಿ ಯಾರೂ ಹಸಿವಿನಿಂದ ಇರಬಾರದೆಂದು ಜನಮೆಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿ.ಕೆ.ಶಿವಕುಮಾರ್ ಉಚಿತ ಕ್ಯಾಂಟೀನ್ ಯಾವುದೇ ಪ್ರಚಾರ ಬಯಸದೇ ನಿಷ್ಠೆಯಿಂದ ತನ್ನ ಕೆಲಸವನ್ನ ಮುಂದುವರೆಸಿದೆ.
ಕೊರೋನ ಹಿನ್ನಲೆಯಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಹಸಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಸಿದವರ ಹೊಟ್ಟೆಯನ್ನ ತುಂಬಿಸುವ ಕೆಲಸವನ್ನ ತಮ್ಮ ನಾಯಕ ಕೆಡಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರೂ, ಡಿಕೆಶಿ ಅಭಿಮಾನಿಗಳೂ ಆದ ದೇವೇಂದ್ರಪ್ಪ ಹಾಗು ಕವಿತ ರಾಘವೇಂದ್ರ ಯಾವ ಪ್ರಚಾರ ಬಯಸದೆ ಮಾಡುತ್ತಿರುವುದಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ತಂಡ ಊಟದ ಜೊತೆಗೆ ಉಚಿತ ಐಸ್ ಕ್ರೀಂ ಸಹ ನೀಡಲು ಮುಂದಾಗಿದೆ.
ಕೋವಿಡ್-೧೯ ತಡೆಗಟ್ಟುವ ಪರಿಣಾಮ ಶಿವಮೊಗ್ಗ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸ್ಟಾಫ್ ನರ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೋಡಿಕೊಳ್ಳುವವರಿಗೆ ಹಾಗೂ ನಗರದಲ್ಲಿ ರಸ್ತೆ ಬದಿಯಲ್ಲಿ ಹಣ್ಣು-ತರಕಾರಿ ಮಾಡುವವರಿಗೆ ಮತ್ತು ಭಿಕ್ಷುಕರಿಗೆ ಡಿಕೆ ಶಿವಕುಮಾರ್ ಕ್ಯಾಂಟೀನ್ ವತಿಯಿಂದ ಆಹಾರ ಮತ್ತು ನೀರು ಹಾಗೂ ಐಸ್ ಕ್ರೀಮ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್ ಕಿರಣ್. ಭಾರತೀಯ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷೆ ಕವಿತಾ, ಡಿಕೆ ಶಿವಕುಮಾರ್ ಬ್ರಿಗೇಡ್ ನ ಅರ್ಜುನ್ ರಾಘವೇಂದ್ರ ಕುಂಸಿ ಅಣ್ಣಪ್ಪ ವಿಜೇಶ. ಯುವ ನಾಯಕ ಉಮೇಶ್ ಮುಂತಾದವರು ಭಾಗವಹಿಸಿದ್ದರು.