ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ರೈಲು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

404

ಶಿವಮೊಗ್ಗ: ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ರೈಲು ನಿನ್ನೆ ರಾತ್ರಿ ಹೊಸನಗರ ತಾಲೂಕಿನ ಸೂಡೂರು ಬಳಿ ಹಳಿತಪ್ಪಿದೆ. ಈ ರೈಲು ಸಾಗರಕ್ಕೆ ತೆರಳುತ್ತಿರುವಾಗ ರಾತ್ರಿ ೮.೩೦ರ ವೇಳೆ ಇಂಜಿನ್ ಚಕ್ರದಲ್ಲಿ ಕೆಲವು ತಾಂತ್ರಿಕ ತೊಂದರೆಯಿಂದಾಗಿ ಈ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಹೊರಟ ರೈಲು ಕುಂಸಿಯಿಂದ ಮುಂದೆ ಸೂಡೂರು ಹತ್ತಿರ ಹಳಿತಪ್ಪಿತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ನಿನ್ನೆ ಸಂಜೆಯಷ್ಟೆ ಹೊಸದಾಗಿ ಹಳಿ ಪಕ್ಕದಲ್ಲಿ ಜಲ್ಲಿ ಹಾಕಲಾಗಿದ್ದು, ಅದು ಹಳಿಯ ಮೇಲೆ ಬಿದ್ದು ರೈಲು ಇಂಜಿನ್‌ನ ಮುಂದಿನ ಎರಡು ಚಕ್ರವು ಹಳಿ ತಪ್ಪಿದೆ. ಚಾಲಕನ ಸಮಯಪ್ರeಯಿಂದ ಆಗಬಹುದಾ ದಂತಹ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ಸಾಗರ ಮತ್ತು ತಾಳಗುಪ್ಪಕ್ಕೆ ತೆರಳಬೇಕಿದ್ದವರು ಖಾಸಗಿ ವಾಹನ ದಲ್ಲಿ ತೆರಳುವ ವ್ಯವಸ್ಥೆ ಮಾಡಿ ಕೊಂಡರು. ಶಿವಮೊಗ್ಗದಿಂದ ರಾತ್ರಿಯೇ ಇಂಜಿನಿಯರಿಂಗ್ ಸ್ಟಾಫ್ ಸ್ಥಳಕ್ಕೆ ತೆರಳಿ ಇಂಜಿನ್‌ನಿಂದ ಬೋಗಿ ಗಳನ್ನು ಬೇರ್ಪಡಿಸಿ ಶಿವಮೊಗ್ಗಕ್ಕೆ ಕಳುಹಿಸಿ ಇಂದು ಬೆಳಿಗ್ಗೆ ಪುನಃ ಬೆಂಗಳೂರಿಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಸದರಿ ರೈಲ್ವೆ ಇಂಜಿನ್‌ಅನ್ನು ದುರಸ್ತಿಗಾಗಿ ಆನಂದಪುರ ರೈಲು ನಿಲ್ದಾಣಕ್ಕೆ ಕೊಂಡೊಯ್ಯಲಾಗಿದೆ. ಇಂದು ಈ ಮಾರ್ಗದ ಎಲ್ಲಾ ರೈಲು ಸಂಚಾರ ಎಂದಿನಂತೆ ಮುಂದುವರಿದಿದೆ.