ಹಲ್ಲೆಗೊಳಗಾದ ಯುವಕನ ಭೇಟಿ ಮಾಡಿ ಧೈರ್ಯ ತುಂಬಿದ ಈಶ್ವರಪ್ಪ

422

ಶಿವಮೊಗ್ಗ: ಕೆಲವು ನಿರ್ಧಿಷ್ಟ ಕೋಮಿನ ಕುತಂತ್ರಿಗಳು ನಗರದಲ್ಲಿ ಗಲಭೆ ಉಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಷೆ ಪಡೆಯುತ್ತಿರುವ ನಾಗೇಶ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಹಿಂದು ಮುಸಲ್ಮಾನರು ನೆಮ್ಮದಿಯಿಂದ ಇರಲು ಎಲ್ಲ ಪ್ರಯತ್ನ ನಡೆಸುತ್ತಿದ್ದರೂ ಒಂದು ಕೋಮಿನ ಕೆಲವು ಕುತಂತ್ರಿಗಳು ಗಲಭೆ ಸೃಷ್ಟಿಸಲು ಪ್ರಯತ್ನ ನಡೆಸಿದ್ದಾರೆಂದು ದೂರಿದರು.
ಬಜರಂಗದಳದ ಸರಸಂಚಾಲಕ ನಾಗೇಶ್ ಮೇಲೆ ಪೂರ್ವ ನಿಯೋಜಿ ತವಾಗಿ ಹಲ್ಲೆ ಮಾಡಲಾ ಗಿದೆ. ವಾಕಿಂಗ್ ಹೋಗುತ್ತಿದ್ದುದನ್ನು ಗಮನಿಸಿ ನಿರ್ಧಿಷ್ಟ ಕೋಮಿನ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಒಬ್ಬರೇ ಇರುವುದನ್ನು ಗಮನಿಸಿ ಹಲ್ಲೆ ನಡೆಸಿರುವುದು ಹೇಡಿ ತನದ ಕೃತ್ಯ ಎಂದು ಕಿಡಿಕಾರಿದರು.
ಹಿಂದು ಸಮಾಜ ಎಷ್ಟು ತಡೆದು ಕೊಳ್ಳಬೇಕೋ ಅಷ್ಟನ್ನು ತಡೆದು ಕೊಂಡಿದೆ. ಆದರೆ ಶಿವಮೊಗ್ಗದಲ್ಲಿ ಇಂತಹ ದುಷ್ಟಶಕ್ತಿಗಳು ಹೊರಗಿನ ಶಕ್ತಿಗಳು ಸೇರಿಕೊಂಡು ಶಿವಮೊಗ್ಗದಲ್ಲಿ ಶಾಂತಿಭಂಗವನ್ನುಂಟು ಮಾಡಲು ಪ್ರಯತ್ನಿಸುತ್ತಿವೆ. ಘಟನೆಗೆ ಕಾರಣರಾದ ಗೂಂಡಾಗಳನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ವ್ಯವಸ್ಥಿತ ಸಂಚು ರೂಪಿಸಿ ಬಜರಂಗ ದಳದ ನಾಗೇಶ್ ಮೇಲೆ ಹಲ್ಲೆ ಮಾಡ ಲಾಗಿದೆ. ಚಿಕಿತ್ಸೆ ನಂತರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.ಈ ಹಿಂದೆ ಶಿವಮೊಗ್ಗದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಲಾಗಿತ್ತು. ನಂತರ ತಣ್ಣಗಾಗಿತ್ತು. ಗೂಂಡಾಗಳಿಗೆ ಭಯವಿದೆ. ಆದರೆ ಏನಾದರೂ ಮಾಡಬೇಕೆಂದು ಕೆಲವು ಚಿಲ್ಲರೆ ಗೂಂಡಾಗಳು ಇಂತಹ ಕೃತ್ಯವೆಸಗಿದ್ದಾರೆ ಎಂದರು.
ವಿಶ್ವ ಹಿಂದುಪರಿಷತ್, ಬಜರಂಗ ದಳದ ಯುವಕರ ಮೇಲೆ ಪದೇ ಪದೇ ದಾಳಿಯಾಗುತ್ತಿದೆ. ಅದೇ ರೀತಿ ಗೋಹತ್ಯೆ ನಿಷೇಧಕ್ಕೆ ಹೋರಾಟ ನಡೆಸುತ್ತಿರುವ ನಾಗೇಶ್ ಮೇಲೆ ದಾಳಿ ನಡೆದಿರುವುದು ಖಂಡನೀಯ ಎಂದರು.