ಹಲವು ಸಮಸ್ಯೆಗಳ ನಡುವೆಯೂ ಬಿಎಸ್‌ವೈರಿಂದ ಉತ್ತಮ ಆಡಳಿತ: ಚನ್ನಾಪುರ

483

ಸೊರಬ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಪೂರೈಸಿದ್ದು, ಹಲವು ಸಮಸ್ಯೆಗಳ ನಡುವೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸಿರುವುದು ಹೆಮ್ಮೆಯ ಸಂಗತಿ ಎಂದು ಬಿಜೆಪಿ ಮುಖಂಡ ದೇವೇಂದ್ರಪ್ಪ ಚನ್ನಾಪುರ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನ ಅಭಿವೃದ್ಧಿಗೆ ಸುಮಾರು ರೂ ೮೦೦ಕೋಟಿ ಅನುದಾನ ಬಿಡುಗೆಯಾಗಿದ್ದು, ನೀರಾವರಿ, ರಸ್ತೆ, ಕುಡಿಯುವ ನೀರು, ಕಟ್ಟಡಗಳ ನಿರ್ಮಾಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.
ವಿಶೇಷವಾಗಿ ರೂ ೩೯೦ ಕೋಟಿ ಅನುದಾನ ಬಿಡುಗಡೆಗೊಳಿಸಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಉದ್ದೇಶಿತ ಮೂಡಿ ಮತ್ತು ಮೂಗುರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಮುಖಂಡರಾದ ಎಂ.ಡಿ.ಉಮೇಶ್, ಕೇಶವರಾಯ್ಕರ್, ಶಿವಕುಮಾರ್ ಕಡಸೂರು, ನಾಗರಾಜಗೌಡ, ಮಲ್ಲಿಕಾರ್ಜುನ ವತ್ತಿಕೊಪ್ಪ, ವೈ.ಜಿ.ಪುಟ್ಟಸ್ವಾಮಿ, ಆನಂದಪ್ಪ, ಚಂದ್ರಪ್ಪ, ಕಷ್ಣಮೂರ್ತಿ, ಬಸವರಾಜ, ಸಂತೋಷ್, ಹನುಮಂತಪ್ಪ, ಯಶವಂತ ಇದ್ದರು.