ಹರಿಹರ ಗಂಗನರಸಿಯ ನಕಾಶೆಯಲ್ಲಿ ಕಂಡ ದಾರಿ ಒತ್ತುವರಿ?

458

ಹರಿಹರ : ಹರಿಹರದಿಂದ ಗಂಗನರಸಿ ರಸ್ತೆಯು ಹರಿಹರ ನಗರದ ಕೆ.ಆರ್. ನಗರ ಹಾಗೂ ವಿಜಯನಗರ ಬಡಾವಣೆಯ ಮುಖ್ಯ ರಸ್ತೆಯ ಮೂಲಕ ಹಾದು ಹೋಗಿ ಹರಿಹರ ನಗರವನ್ನು ಸೇರುತ್ತದೆ. ಗಂಗನರಸಿ ಗ್ರಾಮದ ಜನರು ಈ ನಕಾಶೆ ಕಂಡ ರಸ್ತೆ ಮೂಲಕ ಕೇವಲ ೭ ಕಿಲೋಮೀಟರ್ ನಲ್ಲಿ ಹರಿಹರ ನಗರವನ್ನು ಸೇರ ಬಹುದು. ಈ ರಸ್ತೆಯ ನಿರ್ಮಾಣ ದಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ಅನುಕೂಲಕರವಾಗುತ್ತದೆ.
ಕೆ.ಆರ್. ನಗರದ ಕೆಲವು ಪಟ್ಟಭದ್ರ ಹಿತಾಸಕ್ತಿ ಹಾಗೂ ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕಿನಿಂದ ಕೆ.ಆರ್. ನಗರ ಹಾಗೂ ವಿಜಯನಗರ ಬಡಾವಣೆಯ ನಕಾಶೆ ಕಂಡ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಾತ್ರೋರಾತ್ರಿ ಮನೆ ಗಳನ್ನು ನಿರ್ಮಾಣ ಮಾಡಿಕೊಂಡಿzರೆ
ರಸ್ತೆ ಒತ್ತುವರಿಯಿಂದ ಈ ಬಡಾವಣೆಯ ನಿವಾಸಿಗಳು ಸರಿಯಾದ ರಸ್ತೆ ಹಾಗೂ ಚರಂಡಿ ಇಲ್ಲದೆ ಮಳೆಯ ನೀರು ಸರಿಯಾಗಿ ಹರಿಯಲು ಅನುಕೂಲವಿಲ್ಲದೆ ಅಲ್ಲಿನ ನಿವಾಸಿಗಳ ಮನೆಯ ಒಳಗೆ ಹರಿಯುತ್ತಿದೆ .
ಗಂಗನರಸಿ ನಕಾಶೆ ಕಂಡ ರಸ್ತೆ ಯನ್ನು ಒತ್ತುವರಿ ಮಾಡಿಕೊಂಡವ ರಿಂದ ಬಿಡಿಸಿಕೊಂಡಿದ್ದೇ ಆದರೆ ಚರಂಡಿಯ ನೀರು ಹಾಗೂ ಸಾರ್ವಜನಿಕರಿಗೆ ಓಡಾಡಲು ತುಂಬಾ ಅನುಕೂಲಕರವಾಗುತ್ತದೆ. ಸರ್ಕಾರಿ ಜಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದರಿಂದ ಇಲ್ಲಿನ ಮೂಲ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಗಂಗನರಸಿ ನಕಾಶೆಯಲ್ಲಿ ಕಂಡ ಸರ್ಕಾರಿ ದಾರಿ ಒತ್ತುವರಿ ಮಾಡಿ ಕೊಂಡಿರುವುದನ್ನು ತೆರವುಗೊಳಿಸಿ ಕೊಡುವಂತೆ ಹಾಗೂ ಖುದ್ದು ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಅನುಕೂಲಕರ ಮಾಡಿಕೊಡುವಂತೆ ನಗರಸಭೆ ಆಯುಕ್ತರಿಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಲಿಖಿತವಾಗಿ ಮನವಿಯನ್ನು ಮಾಡಿಕೊಂಡಿದ್ದರೂ ಸಂಬಂಧಿಸಿದ ನಗರಸಭೆಯ ಆಯುಕ್ತರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವುದರ ಹಿಂದಿನ ಮರ್ಮವಾದರೂ ಏನು ಎಂಬುದನ್ನು ಇಲ್ಲಿನ ಸಾರ್ವಜನಿಕರು ನಗರಸಭೆ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿzರೆ.
ಹರಿಹರ ನಗರಸಭೆ ಆಯುಕ್ತರು ನಗರಸಭೆಯ ಕುರ್ಚಿಯನ್ನು ಅಲಂಕರಿಸಿದ ದಿನದಿಂದ ಹರಿಹರದ ನಗರಸಭಾ ವ್ಯಾಪ್ತಿಯಲ್ಲಿ ಇರುವ ವಾರ್ಡ್‌ಗಳ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗಂಗನರಸಿ ನಕಾಶೆಯಲ್ಲಿ ಕಂಡ ದಾರಿ ಸಾಮಾನ್ಯ ವ್ಯಕ್ತಿ ನಿಂತು ನೋಡಿದರೂ ಒತ್ತುವರಿ ಮಾಡಿಕೊಂಡಿ ರುವುದು ಸ್ಪಷ್ಟವಾಗಿ ಕಾಣುತ್ತದೆ .ಇನ್ನು ಎಲ್ಲ ದಾಖಲೆಗಳ ಮೂಲ ಪ್ರತಿಯ ಫೈಲನ್ನು ಹಿಡಿದುಕೊಂಡಿರುವ ನಗರಸಭಾ ಆಯುಕ್ತರಿಗೆ ನಕಾಶೆ ಕಂಡ ರಸ್ತೆ ಒತ್ತುವರಿ ಮಾಡಿಕೊಂಡಿರುವುದು ಕಾಣುತ್ತಿಲ್ಲವೇ? ಅಥವಾ ಕಂಡರೂ ಕಾಣದಂತೆ ನಮಗೇಕೆ ಎಂದು ಎಸಿ ರೂಮಿನ ಒಳಗq ಬೆಚ್ಚಗೆ ಕುಳಿತುಕೊಂಡಿzರೆಯೇ?
ಆಯುಕ್ತರೇ ಒಂದು ಮಾತು ನೆನಪಿಟ್ಟುಕೊಳ್ಳಿ ನಮಗೇಕೆ ಎಂದು ಸುಮ್ಮನೆ ಕುಳಿತುಕೊಳ್ಳಲು ನೀವು ಜನ ಸಾಮಾನ್ಯರಲ್ಲ .ನೀವು ನಗರಸಭೆಯ ಚುಕ್ಕಾಣೆ ಹಿಡಿದ ಅಧಿಕಾರಿಗಳು ಕುರ್ಚಿಯ ಮೇಲೆ ಕುಳಿತು ನಿಮ್ಮ ಕರ್ತವ್ಯವನ್ನು ನಿಭಾಯಿಸಲು ಬಂದವರು. ಕರ್ತವ್ಯವನ್ನು ನಿಭಾಯಿಸುವ ಸಂದರ್ಭದಲ್ಲಿ ಎಂಥ ಆಸೆ ಆಮಿಷಗಳು ಒತ್ತಡಗಳು ಬಂದರೂ ಎದೆಗುಂದದೆ ಧೈರ್ಯವಾಗಿ ಮುನ್ನುಗ್ಗಿ ಜನಸಾಮಾನ್ಯರಿಗೆ ಅನುಕೂಲಕರವಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ ಎಂಬುದನ್ನು ಮರೆಯಬೇಡಿ .
ಒಮ್ಮೆ ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಗಂಗನರಸಿ ನಕಾಶೆ ಕಂಡ ರಸ್ತೆ ಕೆಆರ್ ನಗರದಲ್ಲಿ ಒತ್ತುವರಿ ಯಾಗಿರುವುದು ನಿಜವಲ್ಲವೇ.? ಅದನ್ನು ಬಿಡಿಸಲು ಏಕೆ ಹಿಂದೇಟು ಹಾಕುತ್ತಿದ್ದೀರಿ. ನಿಮಗೆ ಏನಾದರೂ ಪ್ರಭಾವಿ ವ್ಯಕ್ತಿಗಳ ಒತ್ತಡವೇನಾದರೂ ಇದೆಯೇ.? ನಿಮಗೆ ಏನೇ ಒತ್ತಡವಿದ್ದರೂ ನಿಮ್ಮ ಕರ್ತವ್ಯ ನಿಭಾಯಿಸುವುದು ಮುಖ್ಯ ಅಲ್ಲವೇ .? ಇನ್ನು ಮುಂದಾದರೂ ಗಂಗನರಸಿ ನಕಾಶೆ ಕಂಡ ರಸ್ತೆಯನ್ನು ಕೆಆರ್ ನಗರದಲ್ಲಿ ಒತ್ತುವರಿ ಮಾಡಿಕೊಂಡಿರು ವವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಮೂಲಕ ಜನಸ್ನೇಹಿ ಅಧಿಕಾರಿ ಎನಿಸಿಕೊಳ್ಳಿ ಎಂಬುದೇ ಪತ್ರಿಕೆಯ ಕಳಕಳಿಯಾಗಿದೆ.