ಹಂದಿ ಗಿರಿ ಕೊಲೆ ಆರೋಪಿ ತಬರೇಜ್ ಅರೆಸ್ಟ್…

617

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +೯೧ ೯೪೮ ೨೪೮ ೨೧೮೨,
+೯೧ ೭೨೫ ೯೭೧ ೪೨೨೦ ಇ ಮೇಲ್: hosanavika@gmail.com

ಶಿವಮೊಗ್ಗ: ಮನುಕುಲದ ಅಗೋಚರ ಶತ್ರು ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್ ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳುವ ಜೊತೆಗೆ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನ ಜವಬ್ದಾರಿಯುತವಾಗಿ ನಿಭಾಯಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಸ್‌ಪಿ ಕೆ.ಎಂ. ಶಾಂತರಾಜು ನೇತೃತ್ವದ ಜಿಲ್ಲಾ ಪೊಲೀಸ್ ಇಲಾಖೆಯ ಹೆಗಲ ಮೇಲಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಸದ್ದಿಲ್ಲದೇ ಅದನ್ನು ಅತ್ಯಂತ ಖಡಕ್ ಆಗಿಯೇ ನಿಭಾಯಿಸುತ್ತಾ ಜನಮನ್ನಣೆ ಗಳಿಸುತ್ತಿದ್ದಾರೆ.
ಕಳೆದ ಫೆ.೬ ರಂದು ನಗರದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಸಹೋದರ ಹಂದಿ ಗಿರಿಯನ್ನು ನಡುರಸ್ತೆಯಲ್ಲೇ ಭೀಖರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಾದ ಅಜರ್ ಹಾಗೂ ಆತನ ಸಹಚರರು ಪೊಲೀರ ವಶದಲ್ಲಿದ್ದರೆ, ಮತ್ತೊಬ್ಬ ಆರೋಪಿ ತಬರೇಜ್ ಮಾತ್ರ ಕಳೆದೊಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ.
ಎಸ್‌ಪಿ ಕೆ.ಎಂ. ಶಾಂತರಾಜು, ಡಿವೈಎಸ್ಪಿ ಉಮೇಶ್ ಈಶ್ವರ ನಾಯಕ್ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಸಿಪಿಐ ಸಂಜೀವ್ ಕುಮಾರ್ ಹಾಗೂ ತುಂಗ ನಗರ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರನ್ನು ಒಳಗೊಂಡ ತಂಡ ಇಂದು ಆರೋಪಿ ತಬರೇಜ್‌ನ ಹೆಡೆಮುರಿ ಕಟ್ಟಿ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.