ಸ್ವಾಮೀಜಿಗಳ ಬ್ಯಾಟಿಂಗ್-ಬೌಲಿಂಗ್ ಮೂಲಕ ರಾಜ್ಯಮಟ್ಟದ ಕ್ರಿಕೆಟ್‌ಗೆ ಚಾಲನೆ

336

ಹೊಸನಾವಿಕ ನ್ಯೂಸ್
ಹರಿಹರ: ದಣಿವರಿಯದ ನಾಯಕ ನಂದಿಗಾವಿ ಶ್ರೀನಿವಾಸ್ ಅವರ ನಲವತ್ತೊಂದನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಅವರ ಅಭಿಮಾನಿಗಳು ಹಾಗೂ ಕ್ರೀಡಾಪಟುಗಳು ಆಯೋಜಿಸಿದ್ದರು .
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಗಳು ಹಾಗೂ ಕುಮಾರ ಪಟ್ಟಣಂನ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಮಹಾ ಸ್ವಾಮಿಗಳು ವಹಿಸಿದ್ದರು .
ಪುಣ್ಯಕೋಟಿ ಮಠದ ಸ್ವಾಮೀಜಿಯವರ ಬೌಲಿಂಗ್‌ಗೆ, ಕಾಗಿನೆಲೆ ಪೀಠದ ಸ್ವಾಮೀಜಿಗಳು ಬ್ಯಾಟ್ ಬೀಸುವ ಮೂಲಕ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು .
ಕೆಲಹೊತ್ತು ಮಹಾ ಸ್ವಾಮೀಜಿಗಳು ವೇದಿಕೆಯ ಮೇಲೆ ಆಸೀನರಾಗಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿದರು .
ಇದಕ್ಕೂ ಮೊದಲು ನಂದಿಗಾವಿ ಶ್ರೀನಿವಾಸ್ ಅವರು ಟೇಪ್ ಕತ್ತರಿಸುವ ಮೂಲಕ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು .
ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಸತತ ೩ದಿನಗಳ ಕಾಲ ನಡೆಯಲಿದ್ದು, ಪ್ರಥಮ ಬಹುಮಾನ ೬೦ ಸಾವಿರ ರೂಪಾಯಿಗಳು, ದ್ವಿತೀಯ ಬಹುಮಾನ ೩೦ ಸಾವಿರ ರೂಪಾಯಿಗಳು ಹಾಗೂ ಆಕರ್ಷಕ ಪಾರಿತೋಷಕವನ್ನು ಅಂತಿಮವಾಗಿ ವಿಜಯಶಾಲಿಯಾಗುವ ತಂಡಗಳಿಗೆ ನೀಡಲಿzರೆ.
ಇದೇ ಕಾರ್ಯಕ್ರಮದ ವೇದಿಕೆ ಯಲ್ಲಿ ಹರಿಹರದ ಉದಯೋನ್ಮುಖ ಯುವ ಪ್ರತಿಭೆಗಳಿಂದ ತಯಾರಾದ ಹರಿಹರದ ಸೊಬಗನ್ನು ಸಾರುವ ನಮ್ಮ ಹರಿಹರ ಎಂಬ ಹಾಡಿನ ಧ್ವನಿ ಸುರುಳಿ ಯನ್ನು ಹರಿಹರದ ಮಾಜಿ ಶಾಸಕ ಬಿ ಪಿ. ಹರೀಶ್ ಅನಾವರಣ ಗೊಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೇವೆಂದ್ರಪ್ಪ ಕುಣೆಬೆಳಕೆರೆ, ರಾಘವೇಂದ್ರ ಆರ್, ರಜಿನೀಶ್, ನಾಗರಾಜ್,ಎಚ್ ಕೆ ಕೊಟ್ರಪ್ಪ ಹಾಗೂ ಸ್ನೇಹ ಬಳಗದ ಸುಚಿತ್ ,ಸಂತೋಷ್ ಗುಡಿಮನಿ, ಅತಾವು, ಹುಳ್ಳಿಕಟ್ಟೆ ನಾಗರಾಜ್, ಡಾನ್ ಬದ್ರಿ ಶ್ರೀನಿವಾಸ್,ಹಾಗೂ ವಿವಿಧ ತಂಡದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ಪಂದ್ಯವನ್ನು ವೀಕ್ಷಿಸಿದರು .