ಸ್ಮಾರ್ಟ್ ಸಿಟಿ ಕಾಮಗಾರಿ ನಿಮಿತ್ತ ಕಾರು ಸ್ಥಳಾಂತರಕ್ಕೆ ಮನವಿ ಬಿಜೆಪಿ ಮುಖಂಡನ ಡಿಚ್ಚಿಗೆ ಇಂಜಿನಿಯರ್ ಮೂಗು ಕಟ್!

305

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸಲು ನಿಲ್ಲಿಸಿದ್ದ ಕಾರನ್ನ ಬೇರೆಡೆಗೆ ಸ್ಥಳಾಂತರಿಸಿ ಎಂದು ಕೇಳಿಕೊಂಡಿರುವುದಕ್ಕೆ ಗುತ್ತಿಗೆದಾರನ ಇಂಜಿನಿಯರ್ ಮೇಲೆ ಬಿಜೆಪಿಯ ಎಸ್‌ಟಿ ಮೋರ್ಚಾದ ಮುಖಂಡ ಹ ನಡೆಸಿರುವ ಘಟನೆ ವರದಿ ಯಾಗಿದೆ. ಹಲ್ಲೆ ಮಾಡಿದ ರಭಸಕ್ಕೆ ಇಂಜಿನಿಯರ್ ಮೂಗು ತುಂಡಾಗಿ ರುವುದಾಗಿ ತಿಳಿದುಬಂದಿದೆ.
ಹೊಸಮನೆ ೬ನೇ ಕ್ರಾಸ್‌ನಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ನಡೆಸುತ್ತಿದ್ದ ಕೆಎಂವಿ ಸಂಸ್ಥೆಯ ಇಂಜಿನಿಯರ್ ಶ್ರೀನಿವಾಸ್ ಎಂಬು ವವರು ಡ್ರೈನೇಜ್ ನಿರ್ಮಾಣಕ್ಕಾಗಿ ಕಾಂಕ್ರೀಟ್ ಹಾಕಲು ಜಾಗಬೇಕಿದ್ದು ವಾಹನವನ್ನ ಬೇರೆಡೆ ಸ್ಥಳಾಂತರಿಸಿ ಎಂದು ಮನವಿ ಮಾಡಿದರು. ಇದನ್ನ ಸಹಿಸದ ಬಿಜೆಪಿ ಎಸ್ಟಿ ಮೋರ್ಚಾದ ಮುಖಂಡ ಲಿಂಗರಾಜು ತಾಳ್ಮೆ ಕಳೆದುಕೊಂಡು ಇಂಜಿನಿಯರ್ ಶ್ರೀನಿವಾಸ್ ಅವರ ಮೇಲೆ ಹ ನಡೆಸಿzನೆ ಎನ್ನಲಾಗಿದೆ. ಕೆಲ ಮೂಲಗಳು ಲಿಂಗರಾಜು ಅವರು ಡಿಚ್ಚಿ ಹೊಡೆದ ರಭಸಕ್ಕೆ ಇಂಜಿನಿ ಯರ್ ಶ್ರೀನಿವಾಸ್ ಅವರ ಮೂಗು ಕಟ್ ಆಗಿದೆ ಎಂದು ಹೇಳಾಗುತ್ತಿದೆ.
ಶ್ರೀನಿವಾಸ್ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಕದ ತಟ್ಟಿzರೆ. ಲಿಂಗರಾಜುವಿನ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದ್ದು, ಎಫ್ ಐಆರ್ ದಾಖಲಿಸಲು ಆಗ್ರಹಿಸಿzರೆ. ಆದರೆ ಲಿಂಜರಾಜು ಬಿಜೆಪಿ ಎಸ್‌ಟಿ ಮೋರ್ಚಾದ ಪ್ರಭಾವಿ ಮುಖಂಡರಾ ಗಿರುವ ಕಾರಣ ಈ ಪ್ರಕರಣ ರಾಜೀ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.