ಸೋಂಕುಗಳ ಮೂಲ ಪತ್ತೆ ಪ್ರಗತಿಯಲ್ಲಿದೆ : ಡಿಸಿ

559

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +೯೧ ೯೪೮ ೨೪೮ ೨೧೮೨, +೯೧ ೭೨೫ ೯೭೧ ೪೨೨೦ ಇ ಮೇಲ್:

ದಾವಣಗೆರೆ : ದಾವಣಗೆರೆಯಲ್ಲಿ ಏ.೨೯ ಮತ್ತು ೩೦ ರಂದು ವರದಿಯಾದ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಸೋಂಕುಗಳ ಮೂಲವನ್ನು ಸಿಡಿಆರ್ ವರದಿಯ ಮೂಲಕ ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯ ತಂಡ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಡೆಯುತ್ತಿದೆ.
ರೋಗಿ ಸಂಖ್ಯೆ ೫೩೩ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು ೨೬ ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು ೪೯ ಜನರನ್ನು ಪತ್ತೆ ಹಚ್ಟಿ ಈ ೭೫ ವ್ಯಕ್ತಿಗಳ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ರೋಗಿ ಸಂಖ್ಯೆ ೫೫೬ ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು ೧೦ ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು ೧೨ ಜನರನ್ನು ಪತ್ತೆ ಹಚ್ಚಿ ಇವರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಲಾಗಿದ್ದು, ಈ ರೋಗಿಗೆ ಸಂಬಂಧಿಸಿದ ಕಾಂಟಾಕ್ಟ್ ಟ್ರೇಸಿಂಗ್ ಇನ್ನೂ ಪ್ರಗತಿಯಲ್ಲಿದೆ.
ಬಾಷಾನಗರ ಮತ್ತು ಜಲಿನಗರಗಳಲ್ಲಿ ಕಂಟೈನ್‌ಮೆಂಟ್ ಝೆನ್ ಸ್ಥಾಪಿಸಿ ಡಿಸ್‌ಇನ್‌ಫೆಕ್ಷನ್ ಕೆಲಸ ಮಾಡಲಾಗಿದೆ. ಹಾಗೂ ಸಕ್ರಿಯ ಸರ್ವೇಕ್ಷಣಾ ಕ್ರಮಗಳನ್ನು ಸಹ ಕೈಗೊಂಡು ಸರ್ವೇ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.