ಸೆ.೧೨: ನ್ಯಾಮತಿ ಎಪಿಎಂಸಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಸುರೇಶ್

440

ನ್ಯಾಮತಿ: ಪಟ್ಟಣದ ಕೃಷಿ ಉತ್ಪನ್ನ ಉಪಮಾರುಕಟ್ಟೆಯ ಅವರಣದಲ್ಲಿ ಸೆ. ೧೨ರಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಅಧ್ಯಕ್ಷತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅವರಣ ದಲ್ಲಿ ಸುಮಾರು ೧ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹರಾಜು ಮಾರುಕಟ್ಟೆ ಮತ್ತು ಸರಕಾರದಿಂದ ವಿವಿಧ ಕಾಮ ಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಸೌಲಭ್ಯ ವಿತರಣೆಗಳ ಕಾರ್ಯಕ್ರಮ ನಡೆಯಲಿದೆ ಎಂದು ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೧೮-೧೯ ಸಾಲಿನ ಡಬ್ಲ್ಯೂಐಎಫ್ ಹೆಚ್ಚುವರಿ ಯೋಜನೆ ಯಡಿಯಲ್ಲಿ ಕೃಷಿ ಉತ್ಪನ್ನ ಉಪಮಾರುಕಟ್ಟೆಯ ಅವರಣದಲ್ಲಿ ನಿರ್ಮಿಸಲಾದ ಮುಚ್ಚು ಹರಾಜು ಕಟ್ಟೆಯ ಉದ್ಘಾಟನೆ, ಶಿವಾನಂದಪ್ಪ ಬಡಾವಣೆ, ಬನಶಂಕರಿ ದೇಗುಲದ ಕೆರೆ ಏರಿ , ಆಯ್ಯಪ್ಪ ದೇಗುಲದ ಹಿಂಭಾಗದ ರಸ್ತೆ ೭೫ ಲಕ್ಷ ವೆಚ್ಚದ ಸಿಸಿ ರಸ್ತೆಯ ಕಾಮಗಾರಿಯ ಶಂಕುಸ್ಥಾಪನೆ , ೬೧ ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡದ ಉದ್ಘಾಟನೆ, ೨೧ ಲಕ್ಷ ವೆಚ್ಚದಲ್ಲಿ ಪಶುಸಂಗೂಪನೆ ಅಸ್ಪತ್ರೆಯ ಕಟ್ಟಡದ , ೧೧ ಲಕ್ಷದ ವೆಚ್ಚದ ಉರ್ದು ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ , ೫ ಕೋಟಿ ವೆಚ್ಚದ ಗ್ರಾಮೀಣ ಸಂತೆ ಒಕ್ಕಲು ಕಣ ನಿರ್ಮಾಣ ಮತ್ತು ವಾಣಿಜ್ಯ ಮಳಿಗೆಗಳ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಎಸ್.ಪಿ.ರವಿಕುಮಾರ್ ಮಾತನಾಡಿ, ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೧ ಕೋಟಿ ೨೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ , ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಡಿಸಿಎಂ ಗೋವಿಂದ ಎಂ. ಕಾರಜೋಳ ನಡೆಸಲಿದ್ದು ಡಾ.ಸಿ.ಎಸ್. ಅಶ್ವತ್ ನಾರಾಯಣ , ನಗರಾಭಿವೃದ್ಧಿ ಹಾಗೂ ಜಿ ಉಸ್ತುವರಿ ಸಚಿವ ಬೈರತಿ ಬಸವರಾಜ್, ಸಹಕಾರ ಹಾಗೂ ಕೃಷಿ ಮಾರಾಟ ಇಲಾಖಾ ಸಚಿವ ಎಸ್.ಟಿ. ಸೋಮಶೇಖರ್, ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ , ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ , ತಾಪಂ ಅಧ್ಯಕ್ಷ ಎಸ್.ಪಿ.ರವಿಕುಮಾರ್ , ಜಿಧಿಕಾರಿ ಮಹಂತೇಶ್ ಬಿಳಗಿ , ಜಿಪಂ ಸಿಇಓ ಪದ್ಮಾ ಬಸವಂತಪ್ಪ ಸೇರಿದಂತೆ ತಾಲೂಕು ಪಂಚಾಯತ್ , ಜಿಪಂಚಾಯತ್ , ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಸದಸ್ಯರು ಭಾಗವಹಿಸಿಲಿzರೆ ಎಂದರು.
ತಹಶೀಲ್ದಾರ್ ತನುಜ. ಟಿ. ಸವದತ್ತಿ ಮಾತನಾಡಿ, ಸರಕಾರದ ಸಾಮಾಜಿಕ ಭದ್ರತೆ ಯೋಜನೆಯಡಿಯ ೧೪೮ ಮಂದಿಗೆ ಸಂಧ್ಯಾ ಸುರಕ್ಷ , ೭೨ ಮಂದಿಗೆ ಇಂಧಿರಾಗಾಂಧಿ ವೃದ್ಯಾಪ ವೇತನ , ೫೩ ವಿಧವಾ ವೇತನ , ೧೯ ಅಂಗವಿಕಲ ಚೇತನರಿಗೆ , ೯ ಮನಸ್ವನಿ , ೨೯ ಮಂದಿಗೆ ಬಗರ್ ಹುಕ್ಕು ಸಾಗುವಳಿ ಚೀಟಿಯನ್ನು ವಿತರಣೆಯನ್ನು ಸೆ.೧೨ ರ ಶನಿವಾರದಂದು ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ರೇಣುಕಮ್ಮ , ಉಪಾಧ್ಯಕ್ಷೆ ಗೀತಾ , ಸದಸ್ಯ ಪೂಜರ್ ಚಂದ್ರಶೇಖರ್ , ಎಪಿಎಂಸಿ ಸದಸ್ಯ ಜಿ.ಸಿ.ಗಣೇಶ್ , ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ , ನ್ಯಾಮತಿ ತಾಲೂಕು ಪಂಚಾಯತ್‌ನ ಇಒ ರಾಮಭೋವಿ , ಯೋಜನಾಧಿಕಾರಿ ವಿಜಯಕುಮಾರ್ , ಬಿಜೆಪಿ ಮುಖಂಡಕರಿಬಸವರೆಡ್ಡಿ ,ಗುತ್ತಿಗೆದಾರ ಟಿ.ಎಂ.ವಿಜಯ್‌ಕುಮಾರ್ ಇದ್ದರು.