ಸೆ.೧೦: ಶಿವಮೊಗ್ಗದಲ್ಲಿ ೩೭೧ ಮಂದಿಗೆ ಅಂಟಿದ ಕೊರೋನಾ ಸೋಂಕು; ಮೂವರ ಸಾವು

484

ಶಿವಮೊಗ್ಗ : ಸೆ.೧೦ರಂದು ಜಿಯಲ್ಲಿ ೩೭೧ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಪಾಸಿಟಿವ್ ಸಂಖ್ಯೆ ೧೦,೪೧೦ಕ್ಕೇರಿದ್ದು, ಮೂವರು ಸೋಂಕಿತರ ಸಾವು ಸಂಭವಿಸಿದೆ ಈ ಮೂಲಕ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೧೮೩ಕ್ಕೇರಿದೆ. ೧೭೩೨ ಮಂದಿ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ೧೩೪೪ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
೧೪೪ ಸೋಂಕಿತರು ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿzರೆ. ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ ೭೯೮೮ಕ್ಕೇರಿದೆ. ೨೧೦ ಜನ ಕೊರೋನ ಸೋಂಕಿತರು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೩೪೮ ಜನ ಕೊರೋನ ಕೇರ್ ಸೆಂಟರ್ ನಲ್ಲಿ, ೩೧೯ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, ೧೫೦೬ ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿzರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ ೧೩೮ ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ ೨೫೨೧ ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್‌ಗಳು ಸಹ ಹೆಚ್ಚಾಗಿವೆ. ಈವರೆಗೆ ೪೫೭೧ ಕಂಟೈನ್ಮೆಂಟ್ ಜೋನ್‌ಗಳಿದ್ದ ಜಿಯಲ್ಲಿ ಈಗ ೪೬೭೬ ಕಂಟೈನ್ಮೆಂಟ್ ಜೋನ್‌ಗಳಾಗಿವೆ. ೧೫೨೪ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು ೧೫೯೩ರಷ್ಟಾಗಿವೆ.
ಜಿಯಲ್ಲಿ ೩೭೧ ಕೊರೋನ ಪಾಸಿಟಿವ್ ಎಂದು ಪ್ರಕಟಗೊಂಡ ಬೆನ್ನ ತಾಲೂಕವಾರು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೀಗಿವೆ. ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ- ೧೪೪ ಭದ್ರಾವತಿಯಲ್ಲಿ ೭೫, ಶಿಕಾರಿಪುರ-೬೬, ತೀರ್ಥಹಳ್ಳಿ- ೨೮, ಸಾಗರದಲ್ಲಿ ೨೧, ಹೊಸನಗರದಲ್ಲಿ -೧೬ ಹಾಗೂ ಸೊರಬದಲ್ಲಿ ೧೮ ಪ್ರಕರಣಗಳು ಪತ್ತೆಯಾದರೆ, ಇತರೆ ಜಿಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ೬ ಜನ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.