ಸುಂದರ ಪರಿಸರ ನಿರ್ಮಾಣ ನಾಡಿನ ಪ್ರತಿ ಪ್ರಜೆಯ ಜವಾಬ್ದಾರಿ

302

ಹೊನ್ನಾಳಿ: ಸುಂದರ ಪರಿಸರ ನಿರ್ಮಾಣದ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದೂರು ಹಾಗೂ ನೇರಲಗುಂಡಿ ಗ್ರಾಮಗಳಲ್ಲಿ ೨೬.೯೭ ಲಕ್ಷ ರೂ.ಗಳ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಳ್ಳಿಗಳ ಪರಿಸರ ಸುಂದರವಾಗಿರ ಬೇಕೆಂದರೆ ಸ್ಥಳೀಯ ಆಡಳಿತ ದೊಂದಿಗೆ ಗ್ರಾಮಸ್ಥರು ಕೈಜೋಡಿಸ ಬೇಕು. ಗ್ರಾಮದ ಪ್ರತಿಯೊಬ್ಬರೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ತಾವೇ ಸ್ವತಃ ಪೊರಕೆ ಹಿಡಿದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಅವರ ಕಾರ್ಯ ನಮಗೆ ಮಾದರಿಯಾಗಬೇಕು. ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳ ಹಳ್ಳಿ-ಹಳ್ಳಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರು ಕೂಡ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಮನೆಯ ಸುತ್ತಲಿನ ಪರಿಸರ ಹಾಗೂ ಗ್ರಾಮಗಳನ್ನು ಶುಚಿಯಾಗಿಡಲು ಮುಂದಾಗಬೇಕು ಎಂದು ಕರೆಯಿತ್ತರು.
ಜಿಪಂ ಸದಸ್ಯೆ ದೀಪಾ ಜಗದೀಶ್, ತಾಪಂ ಸದಸ್ಯ ಎಚ್. ತಿಪ್ಪೇಶ್, ಕುಂದೂರು ಗ್ರಾಪಂ ಅಧ್ಯಕ್ಷ ಬಿ. ಚಿದಾನಂದಮೂರ್ತಿ, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಎಚ್.ಆರ್. ರುಬಿನಾಜ್ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.