ಸಿಬಿಎಸ್‌ಇ- ಸಿಐಎಸ್‌ಸಿಇ ಪರೀಕ್ಷೆ ರದ್ದುಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಆಂದೋಲನ

288

ನವದೆಹಲಿ: ಕೋವಿಡ್ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದ ರಿಂದ ಸಿಬಿಎಸ್‌ಇ, ಸಿಐಎಸ್‌ಸಿಇ ಬೋರ್ಡ್ ಪರೀಕ್ಷೆ ಗಳನ್ನು ರದ್ದುಪಡಿಸುವಂತೆ ಆನ್ ಲೈನ್‌ನಲ್ಲಿ ವಿದ್ಯಾರ್ಥಿ ಆಂದೋ ಲನ ಆರಂಭ ಗೊಂಡಿದೆ. ಕಳೆದ ಎರಡು ದಿನಗಳಿಂದ ಕ್ಯಾನ್ಸಲ್ ಬೋರ್ಡ್ ಎಗ್ಸಾಂ ೨೦೨೧ ಹ್ಯಾಷ್ ಟ್ಯಾಗ್‌ನೊಂದಿಗೆ ಆನ್‌ಲೈನ್ ಆಂದೋಲನ ಆರಂಭಗೊಂಡಿದ್ದು, ಪರೀಕ್ಷೆಗಳನ್ನು ರದ್ದುಪಡಿಸಬೇಕು ಅಥವಾ ಒಂದು ತಿಂಗಳ ಮಟ್ಟಿಗೆ ಮುಂದೂಡಬೇಕು. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಆಧರಿಸಿ ಪರೀಕ್ಷೆ ನಡೆಸಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧಾರ ತೆಗೆದು ಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸು ತ್ತಿದ್ದಾರೆ.
ಕಳೆದ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದ ವೇಳೆ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಈಗ ದಿನವೊಂದಕ್ಕೆ ಒಂದು ಲಕ್ಷ ಜನರಿಗೆ ಸೋಂಕು ತಗುಲುತ್ತಿದೆ. ಸಾಂಕ್ರಾಮಿಕ ರೋಗ ಪ್ರಸರಣದ ತೀವ್ರತೆ ಮುಗಿಲು ಮುಟ್ಟಿದೆ. ಈ ವೇಳೆ ಪರೀಕ್ಷೆ ನಡೆಸುವು ದಾಗಿ ಪರೀಕ್ಷಾ ಮಂಡಳಿಗಳು ಹೇಳುತ್ತಿವೆ ಎಂದು ಆಂದೋಲನದಲ್ಲಿ ವಿದ್ಯಾ ರ್ಥಿಗಳು ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.
ಆದರೆ, ಇದಾವುದಕ್ಕೂ ಜಗ್ಗದ ಮಂಡಳಿಗಳು ಎಲ್ಲ ಸುರಕ್ಷತಾ ಕ್ರಮ ಗಳೊಂದಿಗೆ ೧೦ ಮತ್ತು ೧೨ನೇ ತರಗತಿಯ ಪರೀಕ್ಷೆಗಳನ್ನು ನಡೆಸುವು ದಾಗಿ ಸ್ಪಷ್ಟಪಡಿಸಿದೆ. ಸಾಮಾಜಿಕ ಅಂತರ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೋಂಕು ಹರಡದಂತೆ ಕ್ರಮ ವಹಿಸಲಾಗುವುದು. ಪರೀಕ್ಷೆಯನ್ನು ಕೈಬಿಡುವ ಅಥವಾ ಮುಂದೂಡುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಹಿರಿಯ ಅಕಾರಿಗಳು ತಿಳಿಸಿದ್ದಾರೆ.
ಪ್ರತಿವರ್ಷ ಜನವರಿಯಲ್ಲಿ ಪ್ರಾಕ್ಟಿಕಲ್ ಪರೀಕ್ಷೆ ನಡೆದು ಫೆಬ್ರ ವರಿಯಲ್ಲಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಕೋವಿಡ್‌ನಿಂದಾಗಿ ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಸುವುದಾಗಿ ಮಂಡಳಿಗಳು ಘೋಷಣೆ ಮಾಡಿವೆ. ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ಆಂದೋಲನ ಆರಂಭಿಸಿದ್ದಾರೆ.