ಸಿಐಟಿಯು ಪ್ರತಿಭಟನೆ

528

ದಾವಣಗೆರೆ: ಕೃಷಿ ಕೂಲಿ ಕಾರ್ಮಿಕರು ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ವತಿಯಿಂದ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದೇಶದಾದ್ಯಂತ ಮಹಾಮಾರಿ ಕೊರೋನಾ ಆರ್ಭಟ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ದೇಶದ ಬೆನ್ನೆಲುಬಾದ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಕಂಗೆಟ್ಟಿರುವ ಸಂದರ್ಭದಲ್ಲಿ ಆಳುವ ಸರ್ಕಾರಗಳು ಜನವಿರೋಧಿ ನೀತಿಯನ್ನು ಜಾರಿಗೆ ತರುತಿದ್ದು, ತಕ್ಷಣ ಅವುಗಳನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು.
ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಮಾತನಾಡಿ, ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟಂಬಗಳಿಗೆ ಮಾಸಿಕ ೭೫೦೦ ರೂ. ನೆರವು ಘೋಷಿಸಬೇಕು, ೧೦ ಕೆಜಿ ಆಹಾರ ಸಾಮಗ್ರಿ ಹಾಗೂ ಆರೋಗ್ಯ ಸುರಕ್ಷತಾ ಕಿಟ್ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ೨೦೦ ದಿನಗಳ ಉದ್ಯೋಗ, ವಿದ್ಯಾವಂತ ನಿರುದ್ಯೋಗಿ ಯುವಕ- ಯುವತಿಯರಿಗೆ ರೂ.೧೦ಸಾವಿರ ಮಾಸಿಕ ಭತ್ಯೆ ಸೇರಿದಂತ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.
ಸಿಐಟಿಯು ಪ್ರಮುಖರಾದ ತಿಮ್ಮಣ್ಣ ಹೊನ್ನೂರು, ತಿಮ್ಮಾರೆಡ್ಡಿ, ಭರಮಪ್ಪ, ಹಿರೆಮಠ್, ಸಯದ್ ಜಬಿ, ತಿಪ್ಪೇಶ್, ಕಲಂದರ್, ಹಾಲೇಶ ನಾಯ್ಕ, ಸುರೇಶ್, ವೆಂಕಟೇಶ್ ಎ. ಉಪಸ್ಥಿತರಿದ್ದರು.