ಸಿಎಂ ಬಿಎಸ್‌ವೈ – ಕೇಂದ್ರ ಗೃಹ ಮಂತ್ರಿ ಶಾ ಆರೋಗ್ಯಕ್ಕಾಗಿ ಸೊರಬ ವಿಹಿಂಪ ಮತ್ತು ಭಜರಂಗದಳದಿಂದ ವಿಶೇಷ ಪೂಜೆ

482

ಸೊರಬ : ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ನಾಡಿನ ಜನತೆ ಕೋರೋನಾ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ, ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗ ದಳ ಹಾಗೂ ಸಂಘ- ಪರಿವಾರದ ವತಿಯಿಂದ ಪಟ್ಟಣದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಪಪಂ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿ, ಹೋರಾ ಟದ ಮೂಲಕ ರಾಜ್ಯಾಡಳಿತದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಸುದ್ದಿ ಕೇಳಿ ಒಂದು ಕ್ಷಣ ದಿಗ್ಬ್ರಮೆಯಾ ಯಿತು. ಯಾವುದೇ ರೋಗಗಳ ಲಕ್ಷಣಗಳು ಕಂಡು ಬಂದಿಲ್ಲದಿದ್ದರೂ, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರದಲ್ಲಿಯೇ ಗುಣಮುಖರಾಗಿ ಮತ್ತೆ ರಾಜ್ಯವನ್ನು ಮುನ್ನೆಡೆಸಲಿದ್ದಾರೆ ಎಂಬ ವಿಶ್ವಾಸವಿದೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೊರೋನಾ ಮುಕ್ತರಾಗ ಲಿದ್ದಾರೆ. ಈ ನಡುವೆ ದೇಶದ ಜನತೆಗೆ ಎದುರಾಗಿ ರುವ ಕೊರೋನಾ ಸಮಸ್ಯೆ ಪರಿಹಾರ ವಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ ಎಂದರು.
ಪಪಂ ಸದಸ್ಯ ವೀರೇಶ್ ಮೇಸ್ತ್ರಿ, ಸಮಿತಿ ಪ್ರಧಾನ ಕಾರ್ಯದರ್ಶಿ ಆಶಿಕ್ ನಾಗಪ್ಪ, ಉಪಾಧ್ಯಕ್ಷ ಎಂ.ಕೆ. ಯೋಗೇಶ್, ಸಹ ಸಂಚಾಲಕ ಸಂಜೀವ್ ಆಚಾರ್, ಪ. ಪಂ. ಸದಸ್ಯ ನಟರಾಜ ಉಪ್ಪಿನ, ಪ್ರಮುಖರಾದ ಗೌರಮ್ಮ ಭಂಡಾರಿ, ರವಿ ಜೆ. ಗುಡಿಗಾರ್, ಎಂ.ಜಿ. ರೂಪದರ್ಶಿನಿ, ವಸಂತಿ ರಾಘವೇಂದ್ರ ನಾವುಡ, ಶ್ಯಾಮಲ ಸುರೇಶ್, ಸಿ.ಪಿ. ಈರೇಶ್ ಗೌಡ, ಯುವರಾಜ್ ಇತರರಿದ್ದರು.